News Karnataka Kannada
Monday, May 06 2024
ಉಡುಪಿ

ಕುಂದಾಪುರ: ಕಟ್ಟಿನಮಕ್ಕಿ ಶಾಲೆಯ ಮಕ್ಕಳಿಗೆ ವನ್ಯಮೃಗಗಳ ಭೀತಿ

Children of Kattinamakki school fear wild animals
Photo Credit : News Kannada

ಕುಂದಾಪುರ: ಬೈಂದೂರು ವಿಧಾನಸಭೆ ಕ್ಷೇತ್ರದ ಹರ್ಕೂರು ಗ್ರಾಮದ ಕಟ್ಟಿನಮಕ್ಕಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುತ್ತಮುತ್ತಲೂ ಕಾಡು ಪ್ರದೇಶದಿಂದ ಆವೃತ್ತವಾಗಿದೆ ಈ ಭಾಗದಲ್ಲಿ ಚಿರತೆ ಸೇರಿದಂತೆ ಕಾಡು ಹಂದಿಗಳ ಉಪಟಳ ಅಧಿಕವಿದೆ, ಮಕ್ಕಳ ಪೋಷಕರಿಗೆ ವನ್ಯ ಮೃಗಗಳದ್ದೆ ಹೆದರಿಕೆ.ಮಕ್ಕಳ ರಕ್ಷಣೆ ದೃಷ್ಟಿಯಿಂದ ಶಾಲೆಯ ಸುತ್ತಾ ಮುತ್ತಲೂ ಕಪೌಂಡ್ ರಚನೆ ಮಾಡಬೇಕ್ಕೆನ್ನುವುದು ಮಕ್ಕಳ ಪೋಷಕರ ಬೇಡಿಕೆ.

ಶಾಲೆಯ ಸುತ್ತಾಮುತ್ತಾ ಬೀದಿ ನಾಯಿಗಳ ಕಾಟ ಅಧಿಕವಾಗಿದ್ದು ಶಾಲೆಯ ಆವರಣದೊಳಗೆ ಟಿಕ್ಕಾಣಿ ಹೂಡಿವೆ,ಬಿಸಿ ಊಟದ ಸಮಯದಲ್ಲಿ ಮಕ್ಕಳ ಬೆನ್ನ ಹಿಂದೆ ಓಡಾಡುವ ನಾಯಿಗಳನ್ನು ನಿಯಂತ್ರಿಸಲು ಕ್ರಮಕೈಗೊಳ್ಳಬೇಕಾಗಿದೆ.1 ರಿಂದ 5 ನೇ ತರಗತಿ ವರಗೆ ಇರುವ ಕಟ್ಟಿನಮಕ್ಕಿ ಶಾಲೆಯಲ್ಲಿ ಇಬ್ಬರು ಶಿಕ್ಷಕಿಯರು ಇದ್ದಾರೆ,ಎಚ್‍ಎಂ ಕಚೇರಿ ಕೆಲಸಕ್ಕೆ ಹೊರಗೆ ಹೋದರೆ ಸಹಾಯಕ ಶಿಕ್ಷಕಿ ಒಬ್ಬರೆ 5ನೇ ತರಗತಿ ವರೆಗೆ ಪಾಠ ಮಾಡಬೇಕಾದ ಪರಿಸ್ಥಿತಿ ಇದೆ. ಹೊಸ ಶೈಕ್ಷಣಿಕ ವರ್ಷದಲ್ಲಿ ಹೆಚ್ಚುವರಿ ಆಗಿ ಒಂದು ಶಿಕ್ಷಕಿಯನ್ನು ನೇಮಕ ಮಾಡಲು ಕ್ರಮಕೈಗೊಳ್ಳಬೇಕ್ಕೆನ್ನುವುದು ಶಾಲಾ ಎಸ್‍ಡಿಎಂಸಿ ಅವರ ಒತ್ತಾಯವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು