News Karnataka Kannada
Monday, April 29 2024
ಮಂಗಳೂರು

ಸುಳ್ಯ ಕುರುಂಜಿಭಾಗ್ ರಸ್ತೆ ಅಭಿವೃದ್ಧಿ ಆಗ್ರಹಿಸಿ ಊರವರಿಂದ ಮತದಾನ‌ ಬಹಿಷ್ಕಾರ

Villagers boycott polling demanding development of Kurunjibagh road
Photo Credit : News Kannada

ಸುಳ್ಯ: ಬ್ಯಾನರ್ ಅಳವಡಿಸಿದ ಬೆನ್ನಲ್ಲೆ ನಗರ ಪಂಚಾಯತ್ ಅಧ್ಯಕ್ಷರು ಮಾಧ್ಯಮ ಹೇಳಿಕೆ ಮೂಲಕ ಟೆಂಡರ್ ಆದ ರಸ್ತೆಗೆ ಬ್ಯಾನರ್ ಅಳವಡಿಸಿ ಕ್ರೆಡಿಟ್ ತೆಗೆದುಕೊಳ್ಳುವ ಸಲುವಾಗಿ ಮಾಡಿದ ಕೃತ್ಯ ಎಂದು ಸಮಜಾಯಿಸಿ ನೀಡಿದ್ದಾರೆ.

ಸುಳ್ಯದ ಕುರುಂಜಿಭಾಗ್ ಜಂಕ್ಷನ್ ನಿಂದ ಉಜಿರ್ ಗುಳಿಯಾಗೆ ಹೋಗುವ ರಸ್ತೆ ತೀವ್ರ ಹದಗೆಟ್ಟಿದ್ದು ಒಂದು ಗುಂಡಿ ತಪ್ಪಿಸಲು ವಾಹನ ಸವಾರರು ಹೋದರೆ ಮತ್ತೆರಡು ಗುಂಡಿಗೆ ವಾಹನ ಬೀಳುವ ಸ್ಥಿತಿ ಇದೆ. ರಸ್ತೆ ಅಭಿವೃದ್ಧಿಗೆ ಆಗ್ರಹಿಸಿರುವ ಕುರುಂಜಿಭಾಗ್ ಮತ್ತು ಉಜಿರ್ ಗುಳಿ ನಾಗರಿಕರು ಕುರುಂಜಿಭಾಗ್ ಜಂಕ್ಷನ್ ನಲ್ಲಿ ಮತದಾನ‌ ಬಹಿಷ್ಕಾರ ಅಳವಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ನಗರ ಪಂಚಾಯತ್ ಅಧ್ಯಕ್ಷ  ವಿನಯ್ ಕುಮಾರ್ ಕಂದಡ್ಕ

ಕೆಲಸಕ್ಕೆ ಟೆಂಡರ್ ಆದ ರಸ್ತೆ ದುರಸ್ತಿಗೆ ಮತದಾನ ಬಹಿಷ್ಕಾರದ ಬೆದರಿಕೆ ಹಾಸ್ಯಾಸ್ಪದ : ಸುಳ್ಯದ ಕುರುಂಜಿ ಭಾಗ್ ಹಾಗೂ ಉಜ್ರುಗುಳಿ ರಸ್ತೆಗೆ ಶಾಸಕರ ವಿಶೇಷ ಅನುದಾನದಲ್ಲಿ ಈಗಾಗಲೇ 20 ಲಕ್ಷ ರೂ. ಗೆ ಟೆಂಡರ್ ಪ್ರಕ್ರಿಯೆ ಕೂಡ ಮುಗಿದಿದ್ದು ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಮತ್ತು ಗುತ್ತಿಗೆದಾರರ ಸಮಸ್ಯೆಯಿಂದಾಗಿ ಕಾಮಗಾರಿ ವಿಳಂಬವಾಗಿದೆಯೇ ಹೊರತು ಬೇರೆ ಯಾವ ಕಾರಣಕ್ಕೂ ಅಲ್ಲ. ಇದೆಲ್ಲವನ್ನು ಪೂರ್ಣವಾಗಿ ತಿಳಿದಿರುವ ಸ್ಥಳೀಯ ಬಹುತೇಕ ಮಂದಿ ನಗರ ಪಂಚಾಯತ್ ನೊಂದಿಗೆ ಪೂರ್ಣ ಸಹಮತದಿಂದ ಇರುತ್ತಾರೆ. ಆದರೆ ಯಾರೋ ಕೆಲವು ಕಿಡಿಗೇಡಿಗಳು ಕಾಮಗಾರಿಯ ಕ್ರೆಡಿಟ್ ಅನ್ನು ತಮ್ಮದಾಗಿಸಿಕೊಳ್ಳುವ ಹುಂಬತನದಲ್ಲಿ ಮತದಾನದ ಬಹಿಷ್ಕಾರದ ಎಚ್ಚರಿಕೆಯ ಬ್ಯಾನರ್ ಅಳವಡಿಸಿರುವುದು ಹಾಸ್ಯಾಸ್ಪದ.

ನಗರ ಪಂಚಾಯತ್ ನಲ್ಲಿ ಕಳೆದೆರಡು ವರ್ಷಗಳಲ್ಲಿ ಶಾಸಕರ ವಿಶೇಷ ಅನುದಾನದಲ್ಲಿ ಒಟ್ಟಾರೆ ಮೂರು ಕೋಟಿ ರೂಗಳ ಟೆಂಡರ್ ನಡೆದಿದ್ದು 2.8 ಕೋಟಿ ರೂಗಳ ಕಾಮಗಾರಿ ಪೂರ್ಣಗೊಂಡಿರುತ್ತದೆ. ಸದ್ರಿ ಕುರಿಂಜಿಬಾಗ್ ರಸ್ತೆಯ ಕಾಮಗಾರಿಯು ಪರಿಶಿಷ್ಟ ಜಾತಿಯ ಗುತ್ತಿಗೆದಾರರಿಗೆ ಮೀಸಲಾಗಿರುತ್ತದೆ. ಮೊದಲ ಬಾರಿಗೆ ಟೆಂಡರ್ ಕರೆದಾಗ ಮೂಡಬಿದರೆ ಮೂಲದ ಗುತ್ತಿಗೆದಾರರು ಸದರಿ ಟೆಂಡರ್ ಕರೆದಿದ್ದು ಆಬಳಿಕ ಕೆಲಸವನ್ನು ಆರಂಭಿಸಲಾಗದೆ ಕೈ ಬಿಟ್ಟಿರುತ್ತಾರೆ. ಎರಡನೇ ಬಾರಿಗೆ ಟೆಂಡರ್ ಕರೆದ ಸಂದರ್ಭದಲ್ಲಿ ಮೈಸೂರು ಮೂಲದ ಗುತ್ತಿಗೆದಾರರು ಟೆಂಡರ್ ವಹಿಸಿಕೊಂಡಿದ್ದು ಸದ್ರಿಯವರಿಗೆ ಕಾಮಗಾರಿಯನ್ನು ಕೂಡಲೆ ನಡೆಸಲು ಈಗಾಗಲೇ ಸೂಚಿಸಲಾಗಿರುತ್ತದೆ. ಅಲ್ಲದೆ ಕಾಮಗಾರಿ ಆರಂಭಿಸದ ಹಿನ್ನೆಲೆಯಲ್ಲಿ ಎಚ್ಚರಿಕೆ ನೋಟಿಸ್ ಅನ್ನು ಕೂಡ ನೀಡಲಾಗಿರುತ್ತದೆ . ಗುತ್ತಿಗೆದಾರರ ಜೊತೆಗೆ ಸ್ಥಳೀಯ ನಗರ ಪಂಚಾಯತ್ ಸದಸ್ಯರು ಹಾಗೂ ಅಧ್ಯಕ್ಷರು ಮತ್ತು ನಗರ ಪಂಚಾಯತಿ ಇಂಜಿನಿಯರ್ ಸತತ ಸಂಪರ್ಕದಲ್ಲಿದ್ದು ಕಾಮಗಾರಿ ಆರಂಭಕ್ಕೆ ಸತತ ಒತ್ತಡವನ್ನು ಹಾಕುತ್ತಿದ್ದಾರೆ. ಅಲ್ಲದೆ ಹತ್ತು ದಿನಗಳ ಒಳಗಾಗಿ ಕಾಮಗಾರಿ ಆರಂಭವಾಗದಿದ್ದಲ್ಲಿ ಟೆಂಡರ್ ರದ್ದುಪಡಿಸಿ ಪುನರ್ ಟೆಂಡರ್ ಕರೆಯುವ ಎಚ್ಚರಿಕೆಯನ್ನು ನೀಡಲಾಗಿದೆ.

ಈ ಕುರಿತು ಸ್ಥಳೀಯರಿಗೆ ಕಾಲಕಾಲಕ್ಕೆ ಮಾಹಿತಿಯನ್ನು ಕೂಡ ನೀಡಲಾಗಿದೆ. ಆದರೆ ಯಾರೋ ಕುಹಕಿಗಳು ಎಲ್ಲ ಪ್ರಕ್ರಿಯೆಯನ್ನು ತಿಳಿದಿದ್ದರೂ ಕಾಮಗಾರಿಯ ಕ್ರೆಡಿಟ್ ಅನ್ನು ತಮ್ಮದಾಗಿಸಿಕೊಳ್ಳುವ ದುರುದ್ದೇಶದಿಂದ ಮತದಾನ ಬಹಿಷ್ಕಾರದ ಬ್ಯಾನರನ್ನು ಅಳವಡಿಸಿರುತ್ತಾರೆ.

ಅದಾಗಿ ಸ್ಥಳೀಯರು ಯಾರು ಈ ಕುರಿತು ಗೊಂದಲ ಕೊಳಲಾಗದೆ ನಗರ ಪಂಚಾಯತ್ ನೊಂದಿಗೆ ಸಹಕರಿಸಬೇಕಾಗಿ ವಿನಂತಿಸಲಾಗಿದೆ. ಈಗಾಗಲೇ ಟೆಂಡರ್ ಕರೆದಿರುವ ಗುತ್ತಿಗೆದಾರರು ಮುಂದಿನ ಒಂದು ವಾರದೊಳಗೆ ಕಾಮಗಾರಿಯನ್ನು ಆರಂಭಿಸದಿದ್ದಲ್ಲಿ ಈ ಕುರಿತು ಸರಕಾರಕ್ಕೆ ಬರೆದು ಗುತ್ತಿಗೆದಾರರ ಮೀಸಲಾತಿಯನ್ನು ರದ್ದುಪಡಿಸಿ ಮರು ಟೆಂಡರ್ ಕರೆದು ಮುಂದಿನ ಎರಡು ತಿಂಗಳ ಒಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವ ಕೆಲಸವನ್ನು ನಗರ ಪಂಚಾಯತ್ ವತಿಯಿಂದ ಮಾಡಲಾಗುವುದು. ಸ್ಥಳೀಯರ ಸಮಸ್ಯೆ ಕುರಿತಾಗಿ ನಗರ ಪಂಚಾಯತಿಗೆ ಪೂರ್ಣ ಅರಿವಿದ್ದು ಈ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು.

ಜಟ್ಟಿಪಳ್ಳ ರಸ್ತೆ ದುರಸ್ತಿಗೆ 15 ಲಕ್ಷ ರೂಪಾಯಿ, ಕಾಂಕ್ರೀಟೀಕರಣಕ್ಕೆ 25 ಲಕ್ಷ ರೂ: ಜಟ್ಟಿಪಳ್ಳ -ದುಗಳಡ್ಕ ರಸ್ತೆಗೆ ಸಂಬಂಧಿಸಿದಂತೆ ಮಳೆಹಾನಿ ಕಾಮಗಾರಿ ಅಡಿಯಲ್ಲಿ ರೂ 25 ಲಕ್ಷ ಮಂಜೂರಾಗಿದ್ದು ಸುಮಾರು 310 ಮೀಟರ್ ಗಳಷ್ಟು ಕಾಂಕ್ರೀಟೀಕರಣ ಕಾಮಗಾರಿಯು ಇನ್ನು ಎರಡು ಮೂರು ದಿನಗಳಲ್ಲಿ ಆರಂಭವಾಗಿವಾಗಲಿದೆ. ಅಲ್ಲದೆ ಜಟ್ಟಿಪಳ್ಳದಿಂದ ಕೊಡಿಯಾಲ ಬೈಲು ಕಾಲೇಜು ತನಕದ ರಸ್ತೆಯನ್ನು ದುರಸ್ತಿಗೊಳಿಸಿ ಅಗತ್ಯ ಇರುವಲ್ಲಿ ಮರುಡಾಮರೀಕರಣ ನಡೆಸಲು ನಗರ ಪಂಚಾಯತ್ ವತಿಯಿಂದ ಈಗಾಗಲೇ 15 ಲಕ್ಷ ರೂ ಮೀಸಲಿರಿಸಿದ್ದು ಟೆಂಡರ್ ಪ್ರಕ್ರಿಯೆ ನಡೆದಿರುತ್ತದೆ. ಸದರಿ ಕಾಮಗಾರಿಯೂ ಕೂಡ ಮಾರ್ಚ ತಿಂಗಳಲ್ಲಿ ನಡೆಯಲಿದೆ. ಸದರಿ ಜಟ್ಟಿಪಳ್ಳದಿಂದ ದುಗಲಡ್ಕ ದವರೆಗಿನ ರಸ್ತೆಯನ್ನು ಹಂತ ಹಂತವಾಗಿ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲು ನಾವು ಬದ್ಧರಿದ್ದು ಸೂಕ್ತ ಅನುದಾನದ ಪ್ರಸ್ತಾವನೆಗಳು ವಿವಿಧ ಹಂತದಲ್ಲಿ ಇರುತ್ತವೆ.

ಈ ಹಿಂದೆ ತಿಳಿಸಿದಂತೆ ಸುಮಾರು ಎಂಟು ಕಿಲೋಮೀಟರ್ ಉದ್ದದ ಈ ರಸ್ತೆಯನ್ನು ನಗರ ಪಂಚಾಯತ್ ಅನುದಾನದಲ್ಲಿ ಅಭಿವೃದ್ಧಿಪಡಿಸುವುದು ಅಸಾಧ್ಯವಾಗಿದ್ದು ಶಾಸಕರ ಸಹಕಾರದಿಂದ ವಿಶೇಷ ಅನುದಾನದಿಂದಲೇ ಈ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು.

ನಗರ ಪಂಚಾಯತಿ ವ್ಯಾಪ್ತಿಗೆ ಒಳಪಟ್ಟಂತೆ ಕಳೆದ ಎರಡುವರೆ ವರ್ಷಗಳಲ್ಲಿ 10 ಕೋಟಿ ರೂಗು ಹೆಚ್ಚಿನ ರಸ್ತೆ ಕಾಮಗಾರಿಗಳು ನಡೆದಿದ್ದು, 2.5ಕೋಟಿ ರೂ. ನ ಜಾಕ್ ವೆಲ್, 17ಕೋಟಿ ರೂಪಾಯಿಗಳ ವೆಂಟೆಡ್ ಡ್ಯಾಮ್, 60 ಕೋಟಿ ರೂಪಾಯಿಗಳ ಸಮಗ್ರ ಕುಡಿಯುವ ನೀರಿನ ಯೋಜನೆ ಇತ್ಯಾದಿಗಳು ಈಗಾಗಲೇ ಅನುಷ್ಠಾನದ ಹಂತದಲ್ಲಿದೆ. ಅಭಿವೃದ್ಧಿಯ ವೇಗವನ್ನು ಸಹಿಸಲಾಗದ ಕೆಲವರು ಅಪಪ್ರಚಾರದ ಹಾದಿಯನ್ನು ಆರಿಸಿಕೊಂಡಿದ್ದು ಮುಂದಿನ ಚುನಾವಣೆಯಲ್ಲಿ ಮತದಾರರೇ ಸೂಕ್ತ ಉತ್ತರ ನೀಡಲಿದ್ದಾರೆ ಎಂದು  ನಗರ ಪಂಚಾಯತ್ ಅಧ್ಯಕ್ಷ  ವಿನಯಕುಮಾರ್ ಕಂದಡ್ಕ ಪ್ರತಿಕ್ರೀಯಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು