News Karnataka Kannada
Saturday, May 04 2024
ಮಂಗಳೂರು

ಸಂತ ಅಲೋಶಿಯಸ್‌ ಸ್ವಾಯತ್ತ ಕಾಲೇಜಿಗೆ ಪರಿಗಣಿತ ವಿಶ್ವವಿದ್ಯಾನಿಲಯ ಸ್ಥಾನಮಾನ

ಮಂಗಳೂರಿನ ಪ್ರಸಿದ್ದ ಸಂತ ಅಲೋಶಿಯಸ್‌ ಕಾಲೇಜಿನ (ಸ್ವಾಯತ್ತ) ವಿಶ್ವವಿದ್ಯಾನಿಲಯದ ಸ್ಥಾನಮಾನದ ಪ್ರಸ್ತಾವನೆಯನ್ನು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಮತ್ತು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಅನುಮೋದಿಸಿದೆ ಮತ್ತು ಪರಿಗಣಿತ ವಿಶ್ವವಿದ್ಯಾನಿಲಯದ ಸ್ಥಾನಮಾನವನ್ನು ನೀಡಿದೆ. ಈ ಸ್ಥಾನಮಾನದೊಂದಿಗೆ ಸಂಸ್ಥೆಯು ಇನ್ನು ಮುಂದೆ ಸಂತ ಅಲೋಶಿಯಸ್‌ ಪರಿಗಣಿತ ವಿಶ್ವವಿದ್ಯಾನಿಲಯ ಎಂದು ಕರೆಯಲ್ಪಡುತ್ತದೆ
Photo Credit : News Kannada

ಮಂಗಳೂರು:  ನಗರದ ಪ್ರಸಿದ್ದ ಸಂತ ಅಲೋಶಿಯಸ್‌ ಕಾಲೇಜಿನ (ಸ್ವಾಯತ್ತ) ವಿಶ್ವವಿದ್ಯಾನಿಲಯದ ಸ್ಥಾನಮಾನದ ಪ್ರಸ್ತಾವನೆಯನ್ನು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಮತ್ತು ಭಾರತ ಸರಕಾರದ ಶಿಕ್ಷಣ ಸಚಿವಾಲ ಯವು ಅನುಮೋದಿಸಿ ಪರಿಗಣಿತ ವಿಶ್ವವಿದ್ಯಾನಿಲಯದ ಸ್ಥಾನಮಾನವನ್ನು ನೀಡಿದೆ ಎಂದು ಅಲೋಶಿಯಸ್‌ ಶಿಕ್ಷಣ ಸಂಸ್ಥೆಗಳ ರೆಕ್ಟರ್ ರೆ. ಫಾ. ಮೆಲ್ವಿನ್ ಜೆ. ಪಿಂಟೋ ತಿಳಿಸಿದ್ದಾರೆ.

ಕಾಲೇಜಿನ ಸಾನ್ನಿಧ್ಯ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಈ ಮಾಹಿತಿ ನೀಡಿದ ಅವರು, ಈ ಸ್ಥಾನಮಾನ ದೊಂದಿಗೆ ಸಂಸ್ಥೆಯು ಇನ್ನು ಮುಂದೆ ಸಂತ ಅಲೋಶಿಯಸ್‌ ಪರಿಗಣಿತ ವಿಶ್ವವಿದ್ಯಾನಿಲಯ ಎಂದು ಕರೆಯಲ್ಪಡುತ್ತದೆ. ಗುಣ ಮಟ್ಟದ ಉನ್ನತ ಶಿಕ್ಷಣವನ್ನು ನೀಡಿ ಶೈಕ್ಷಣಿಕ ಸೇವೆ ಸಲ್ಲಿಸಬೇಕೆಂದು ಬಹುದಿನಗಳಿಂದ ಅವಕಾಶದ ನಿರೀಕ್ಷೆಯಲ್ಲಿದ್ದ ಕಾಲೇಜಿನ ಆಡಳಿತ ಮಂಡಳಿಗೆ ಈ ಸ್ಥಾನಮಾನವು ವಿಶೇಷ ಸಂತಸವನ್ನು ತಂದಿದೆ ಎಂದರು.

ಕಾಲೇಜಿನ ಪ್ರಾಧ್ಯಾಪಕರ ವೃಂದದವರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರರು ಮತ್ತು ಸಂಬಂಧಪಟ್ಟ ಎಲ್ಲರ ಸಮರ್ಪಣಾ ಮನೋಭಾವ ಮತ್ತು ದಣಿವರಿಯದ ಶ್ರಮದ ಫಲವಾಗಿದೆ. ಪರಿಗಣಿತ ವಿಶ್ವವಿದ್ಯಾನಿಲಯವಾಗಿ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆ ಹೊಸ ಕನಸುಗಳೊಂದಿಗೆ ತನ್ನ ಪಯಣವನ್ನು ಆರಂಭಿಸಲಿದೆ. ಪರಿಗಣಿತ ವಿಶ್ವವಿದ್ಯಾನಿಲ ಯದ ಸ್ವರೂಪಕ್ಕೆ ಹೊದಿಕೊಳ್ಳುತ್ತಾ ಶೈಕ್ಷಣಿಕ ಸಂಸ್ಥೆಯ ಸಾಮಾಜಿಕ ‌ ಬದ್ಧತೆಯನ್ನು ಗಮನದಲ್ಲಿರಿಸಿ ಸಮಾಜ ಕಟ್ಟುವ ಸದುದ್ದೇಶದ ಕಾರ್ಯಗಳನ್ನು ಸಂಸ್ಥೆ ಮುಂದುವರಿಸಲಿದೆ ಎಂದು ಅವರು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ಮಾರ್ಟಿಸ್ ಮಾತನಾಡಿ, ಯುಜಿಸಿ ಮತ್ತು ಶಿಕ್ಷಣ ಸಚಿವಾಲಯವು, ಕಾಲೇಜಿನ ಭೌತಿಕ ಮತ್ತು ಡಿಜಿಟಲ್ ಮೂಲಸೌಕರ್ಯ, ಪಠ್ಯಕ್ರಮ ವಿನ್ಯಾಸ, ಸಂಶೋಧನೆ ಮತ್ತು ಆವಿಷ್ಕಾರ, ಪದವಿ ಫಲಿತಾಂಶ ಗಳು, ವಿದ್ಯಾರ್ಥಿಗಳ ಸಾಧನೆಯ ಮಟ್ಟಗಳು, ನೇಮಕಾತಿ, ಸಂಸ್ಥೆಯ ಕನಸು – ಧೈಯ ಮತ್ತು ಸಮಾಜದ ಮೇಲೆ ಇವುಗಳು ಬೀರಿದ ಪರಿಣಾಮವನ್ನು ಕೂಲಂ ಕು ಷವಾಗಿ ಅಧ್ಯಯನ ಮಾಡಿ ಈ ಸ್ಥಾನಮಾನವನ್ನು ನೀಡಿದೆ ಎಂದರು.

ಈ ಎಲ್ಲ ಮಾನದಂಡಗಳ ಜೊತೆಗೆ ನ್ಯಾಕ್ ಮತ್ತು ನಿರ್ಘನಂತಹ ರಾಷ್ಟ್ರೀಯ ಮಟ್ಟದ ಸಂಸ್ಥೆಗಳು ನೀಡಿರುವ ಶ್ರೇಯಾಂಕ ಗಳನ್ನು ಪರಿಗಣಿಸಿ ಸಂತ ಅಲೋಶಿಯಸ್ ಕಾಲೇಜಿಗೆ ಈ ಮಾನ್ಯತೆಯನ್ನು ನೀಡಲಾಗಿದೆ. ಕಾಲೇಜಿಗೆ ದೊರೆತ ಈ ಮಾನ್ಯತೆಯಿಂದಾಗಿ ಸಂಸ್ಥೆಯು ಜಾಗತಿಕವಾಗಿ ಸ್ಪರ್ಧಾತ್ಮಕ ಪಠ್ಯಕ್ರಮ, ಉನ್ನತ ಮಟ್ಟದ ಸಂಶೋಧನೆ ಆವಿಷ್ಕಾರಗಳು ಮತ್ತು ಉದ್ಯಮಶೀಲತಾ ಪ್ರತಿನಿಧೀಕರಣ ಮೊದಲಾದುವುಗಳನ್ನು ದಕ್ಷವಾಗಿ ನಡೆಸುವುದಕ್ಕೆ ಮತ್ತು ರಚನಾತ್ಮಕ ವಾತಾವರಣವನ್ನು ನಿರ್ಮಿಸುವುದಕ್ಕೆ ಶಕ್ತವಾಗುವುದು. ಪ್ರಾದೇಶಿಕ, ರಾಷ್ಟ್ರೀಯ ಮತ್ತು ಜಾಗತಿಕ ಪಾಲುದಾರರೊಂದಿಗೆ ಗಟ್ಟಿಯಾದ ಸಹಯೋಗದ ಸಾಧ್ಯತೆಗಳಿಗೆ ಇದು ದೊಡ್ಡಮಟ್ಟದಲ್ಲಿ ಅವಕಾಶಗಳನ್ನು ಒದಗಿಸಲಿದೆ ಎಂದು ಅವರು ಹೇಳಿದರು.

1880 ರಲ್ಲಿ ಜೆನ್ಯೂಟ್ ಪಿತಾಮಹರಿಂದ ಸ್ಥಾಪಿತವಾದ ಸಂತ ಅಲೋಶಿಯಸ್‌ ಕಾಲೇಜು ಈ ಪ್ರದೇಶದ ಯುವಕರಲ್ಲಿ ಬದ್ಧತೆ, ಸಾಮರ್ಥ್ಯ, ಸಹಾನುಭೂತಿ ಮತ್ತು ಆತ್ಮಸಾಕ್ಷಿಯನ್ನು ಹೊಂದಿರುವ ವ್ಯಕ್ತಿಗಳನ್ನಾಗಿ ರೂಪಿಸಿದೆ. ಜೊತೆಗೆ ಈ ಸಂಸ್ಥೆ ಹಲವಾರು ವಿಶಿಷ್ಟ ಸಾಧನೆಗಳನ್ನು ಹೊಂದಿರುವ ಈ ದೇಶದ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಸಂಸ್ಥೆಯ ರಾಷ್ಟ್ರೀಯ ಮತ್ತು ಜಾಗತಿಕ ಸ್ಥಾನಮಾನವನ್ನು ಪರಿಗಣಿಸಿ 2007 ರಲ್ಲಿ ಅದಕ್ಕೆ ಸ್ವಾಯತ್ತತೆಯ ಸ್ಥಾನಮಾನ ನೀಡಲಾಯಿತು. ಇದಲ್ಲದೆ, ಸಂಸ್ಥೆಯು ರಾಷ್ಟ್ರೀಯ ಮಟ್ಟದಲ್ಲಿ ನ್ಯಾಕ್ ಮಾನ್ಯತೆಗಳ ಎಲ್ಲಾ ನಾಲ್ಕು ಹಂತಗಳ ಮೌಲ್ಯಮಾಪನ ಕ್ರಮದಲ್ಲಿ ಉನ್ನತ ದರ್ಜೆಯ ಶ್ರೇಯಾಂಕವನ್ನು ನಿರಂತರವಾಗಿ ಪಡೆದುಕೊಂಡಿದೆ. ನಾಲ್ಕನೇ ಹಂತದ ಮೌಲ್ಯಮಾಪನದಲ್ಲಿ ಒಟ್ಟು ಅಂಕ 4 ರಲ್ಲಿ 3.67 ಸಿಜಿಪಿಎ ಯೊಂದಿಗೆ ಎ ಪ್ಲಸ್ ಪ್ಲಸ್ ದರ್ಜೆಯನ್ನು ಪಡೆದಿದೆ. ನಿರ್ಫ್ ಶ್ರೇಯಾಂಕದಲ್ಲಿ ಸತತ 3 ಅವಧಿಗೆ ಉನ್ನತ 100 ಕಾಲೇಜುಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. ರಿಜಿಸ್ಟ್ರಾರ್ ಆಲ್ವಿನ್ ಡೇಸಾ ಉಪಸ್ಥಿತರಿದ್ದರು.

‘ಕಾಲೇಜಿಗೆ ವಿಶ್ವವಿದ್ಯಾನಿಲಯದ ಸ್ಥಾನಮಾನ ಸ್ವಲ್ಪ ವಿಳಂಬವಾದರೂ ಸೂಕ್ತ ಸಮಯದಲ್ಲಿ ದೊರಕಿರುವ ಸಂತಸವಿದೆ. 5. 19ರಂದು ವಿಶ್ವವಿದ್ಯಾನಿಲಯ ಸ್ಥಾನಮಾನದ ಘೋಷಣೆಯಾಗಿದೆ. ಯುಜಿಸಿಯ ಮಾನದಂಡಗಳೊಂದಿಗೆ ವಿಶ್ವವಿದ್ಯಾನಿಲಯಕ್ಕಾಗಿನ ಅಧ್ಯಯನ ಮಂಡಳಿ, ಎಕ್ಸಿಕ್ಯೂಟಿವ್ ಕೌನ್ಸಿಲ್‌ಗಳ ರಚನೆ ಪ್ರಕ್ರಿಯೆ ನಾಳೆಯಿಂದ ಆರಂಭಗೊಳ್ಳಲಿದೆ. ಬಳಿಕ ಮುಂದಿನ ಜೂನ್‌ನಲ್ಲಿ ಹೊಸ ಶೈಕ್ಷಣಿಕ ವರ್ಷದಿಂದ ವಿಶ್ವವಿದ್ಯಾಲಯದ ಪ್ರವೇಶಾತಿ ಆರಂಭಗೊಳ್ಳಲಿದೆ. ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳು ಈವರೆಗೆ ಪಾಲಿಸಿಕೊಂಡು ಬಂದ ಆದರ್ಶದಂತೆ, ಬಡ, ಅರ್ಹ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಸೇವೆಯನ್ನು ಮುಂದುವರಿಸಲಿದೆ. ಜತೆಗೆ ಸಂಶೋಧನಾತ್ಮಕ ಚಟುವಟಿಕೆಗಳಿಗೆ ಒತ್ತು ನೀಡಲಿದೆ ಎಂದ ಡಾ. ಪ್ರವೀಣ್ ಮಾರ್ಟಿಸ್, ಪ್ರಾಂಶುಪಾಲರು, ಸಂತ ಅಲೋಶಿಯಸ್ ಕಾಲೇಜು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು