News Karnataka Kannada
Friday, April 12 2024
Cricket
ಮಂಗಳೂರು

ದಾನಿ ಮೈಕಲ್ ಡಿ’ಸೊಜಾ ನಮ್ಮ ಸಮಾಜಕ್ಕೆ ಪ್ರೇರಣೆ: ಡಾ| ಪೀಟರ್ ಪಾವ್ಲ್

Dr. Peter Paul
Photo Credit : News Kannada

ಮಂಗಳೂರು: ದಾನ ನೀಡುವವರು ದೊಡ್ಡವರಲ್ಲ, ದಾನ ಪಡೆಯುವವರು ಸಣ್ಣವರಲ್ಲ. ನಾವೆಲ್ಲರೂ ದೇವರ ಮಕ್ಕಳಾದ್ದರಿಂದ ಸಮಾನರು. ಸಮಜದ ಅಶಕ್ತ  ವರ್ಗದ ಜನರ ಮಕ್ಕಳ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ, ಮನೆ ಕಟ್ಟಲು ಮತ್ತು ದುರಸ್ಥಿಗೆ ದಾನ – ಹೀಗೆ ಸಮಾಜದ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಲೇ ಇರುವ ಅನಿವಾಸಿ ಉದ್ಯಮಿ, ಕೊಡುಗೈ ದಾನಿ ಶ್ರೀ ಮೈಕಲ್ ಡಿ’ಸೊಜಾ ನಮ್ಮ ಸಮಾಜಕ್ಕೆ ಪ್ರೇರಣೆ” ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ|  ಪೀಟರ್ ಪಾವ್ಲ್ ಸಲ್ದಾನ್ಹಾ ಅಭಿಪ್ರಾಯಪಟ್ಟರು.

ಡಾ| ಸಲ್ಡಾನ್ಹಾ ಮಂಗಳೂರು ಧರ್ಮಕ್ಶೇತ್ರ ಕೆನರಾ ಒರ್ಗನೈಸೇಶನ್ ಫೊರ್ ಡೆವಲಪ್‌ಮೆಂಟ್ ಆಂಡ್ ಪೀಸ್ (ಸಿ.ಒ.ಡಿ.ಪಿ.) ಸಂಸ್ಥೆ, ಸುವರ್ಣ ಮಹೋತ್ಸವದ ಸಲುವಾಗಿ, ಧರ್ಮಕ್ಷೇತ್ರದ ದುರ್ಬಲ ವರ್ಗದ ಜನರಿಗೆ ಗೃಹ ನಿರ್ಮಾಣ ಮತ್ತು ದುರಸ್ಥಿ ಕಾರ್ಯಕ್ರಮದ ಅಂಗವಾಗಿ, ಫಲಾನುಭವಿಗಳಿಗೆ ಅನುದಾನ ವಿತರಣೆ ಮಾಡಿ ಮಾತನಾಡುತಿದ್ದರು. ಕಾರ್ಯಕ್ರಮಕ್ಕೆ 180 ಫಲಾನುಭವಿಗಳು ಹಾಜರಿದ್ದು, ಈಗಾಗಲೇ ಗೃಹ ನಿರ್ಮಾಣ, ದುರಸ್ಥಿ ಅರಂಬಿಸಿರುವ 77 ಫಲಾನುಭವಿಗಳಿಗೆ ಕಾರ್ಯಕ್ರಮದಲ್ಲಿ ಅನುದಾನ ವಿತರಿಸಲಾಯಿತು.

ಧರ್ಮಕ್ಷೇತ್ರದ ಹಿರಿಯ ಧರ್ಮಗುರು ಅ| ವಂ| ವಲೇರಿಯನ್ ಡಿ’ಸೊಜಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ” ಮೈಕಲ್ ಜತೆಗೆ ನನ್ನ ಒಡನಾಟ ಕಳೆದ 45 ವರ್ಷಗಳದ್ದು. ನನಗೆ ದೇವರು ಅಗತ್ಯ ಇರುವುದಕ್ಕೂ ಮಿಕ್ಕಿ ಕೊಟ್ಟಿರುವುದರಿಂದ, ಅದನ್ನು ಕಷ್ಟದಲ್ಲಿರುವವರ ಜತೆ ಹಂಚಿಕೊಳ್ಳಬೇಕಾದ್ದು ನನ್ನ ಧರ್ಮ. ಮೈಕಲ್ ರಂತಹ ಹತ್ತು ಜನರು ನಮ್ಮ ಸಮಾಜದಲ್ಲಿದ್ದರೂ ಇಂದು ಈ ಹಂತದ್ದಲ್ಲಿ ಬಡತನವಿರುತ್ತಿರಲಿಲ್ಲ” ಎಂದು ಶ್ಲಾಘಿಸಿದರು.

ಪ್ರಸಕ್ತ ವರ್ಷದಲ್ಲಿ  ಧರ್ಮಕ್ಷೇತ್ರದ ಅಶಕ್ತ ವರ್ಗದವರ ಗೃಹ ನಿರ್ಮಾಣ ಮತ್ತು ದುರಸ್ಥಿಗೆ ಮೈಕಲ್ ಡಿ’ ಸೊಜಾ ಒಂದು ಕೋಟಿ ರುಪಾಯಿ ಹದಿನೆಂಟು ಲಕ್ಷ ರುಪಾಯಿ ಧನಸಹಾಯ ನೀಡಿದ್ದಾರೆ, ಈ ಸಹಾಯ ಮುಂದಿನ ವರ್ಷಗಳಲ್ಲೂ ಮುಂದುವರೆಯಲಿದೆ ಎಮ್ದು ಸಿ.ಒ.ಡಿ.ಪಿ. ನಿರ್ದೇಶಕ ವಂ| ವಿನ್ಸೆಂಟ್ ಡಿಸೊಜಾ ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಕಲ್ ಡಿ’ಸೊಜಾರವರ  ಸೋದರಿ ಸಿಲ್ವಿಯಾ, ವಿನ್ಸೆಂಟ್ ಡಿ’ಸಿಲ್ವ, ಕಾರ್ಯಕ್ರಮದ ಸಂಯೋಜಕರಾದ ಸ್ಪೀಫನ್ ಪಿಂಟೊ, ಓಸ್ವಲ್ಡ್ ರೊಡ್ರಿಗಸ್, ಹೆನ್ರಿ ಡಿಸೊಜಾ, ಸಂತ ವಿಶೆಂತ್ ಪಾವ್ಲ್ ಸಭೆಯ ಧರ್ಮಕ್ಷೇತ್ರದ ಅಧ್ಯಕ್ಷರಾದ ಜ್ಯೋ ಕುವೆಲ್ಹೊ, ವಂ| ಆಸ್ಟಿನ್ ಪೆರಿಸ್, ವಂ| ಅನಿಲ್ ಐವನ್ ಫೆರ್ನಾಂಡಿಸ್ ಮತ್ತಿತರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು