News Karnataka Kannada
Monday, April 29 2024
ಹುಬ್ಬಳ್ಳಿ-ಧಾರವಾಡ

ರಾಮಮಂದಿರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್: ಅನ್ಯ ಕೋಮಿನ ಧಾರ್ಮಿಕ ಕಟ್ಟಡಕ್ಕೆ ಹಾನಿ

ಧಾರವಾಡ ಜಿಲ್ಲೆಯ ತಡಕೋಡು ಗ್ರಾಮದಲ್ಲಿ ಅಯೋಧ್ಯೆ ರಾಮ ಮಂದಿರಕ್ಕೆ ಸಂಬಂಧಿಸಿದಂತೆ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕೆ ಆಕ್ರೋಶಗೊಂಡ ಯುವಕರ ಗುಂಪೊಂದು ಧಾರ್ಮಿಕ ಕಟ್ಟಡವೊಂದನ್ನು ಭಾಗಶ:ವಾಗಿ ಹಾನಿ ಮಾಡಿರುವ ಘಟನೆ  ನಡೆದಿದೆ.
Photo Credit : News Kannada

ಧಾರವಾಡ: ಧಾರವಾಡ ಜಿಲ್ಲೆಯ ತಡಕೋಡು ಗ್ರಾಮದಲ್ಲಿ ಅಯೋಧ್ಯೆ ರಾಮ ಮಂದಿರಕ್ಕೆ ಸಂಬಂಧಿಸಿದಂತೆ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕೆ ಆಕ್ರೋಶಗೊಂಡ ಯುವಕರ ಗುಂಪೊಂದು ಧಾರ್ಮಿಕ ಕಟ್ಟಡವೊಂದನ್ನು ಭಾಗಶ:ವಾಗಿ ಹಾನಿ ಮಾಡಿರುವ ಘಟನೆ  ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಸದ್ದಾಂ ಹುಸೇನ್ (20) ವಿರುದ್ಧ ಜನವರಿ 21 ರಂದು ಧಾರವಾಡ ಜಿಲ್ಲಾ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆತನೊಬ್ಬ ಮೆಕ್ಯಾನಿಕ್ ಎನ್ನಲಾಗಿದೆ.

ಈ ವಿಚಾರ ಬುಧವಾರ ರಾತ್ರಿ ಬೆಳಕಿಗೆ ಬಂದಿದ್ದು, ಕೋಮುಗಲಭೆಗೆ ಕಾರಣವಾಗಿತ್ತು. ಈ ಸಂಬಂಧ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುಂಪು ಯುವಕನ ಮನೆಗೆ ನುಗ್ಗಲು ಯತ್ನಿಸಿದ್ದು, ಯಾವುದೇ ಅನಾಹುತ ನಡೆದಂತೆ ಪೊಲೀಸರು ತಡೆದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು