News Karnataka Kannada
Saturday, May 11 2024
ಮಂಗಳೂರು

ಕಾರು ಚೋರರ ಕೈಚಳಕ: ಲಕ್ಷಾಂತರ ಮೌಲ್ಯದ ಕಾರು ಕಳೆದುಕೊಂಡ ಶೋರೂಂ ಮಾಲೀಕ

Showroom owner loses car worth lakhs of rupees
Photo Credit : News Kannada

ಮಂಗಳೂರು: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆಗೆ ಕನ್ನ‌ ಹಾಕಿದ ಘಟನೆ ಸುರತ್ಕಲ್‌ ಹೊಸಬೆಟ್ಟುವಿನಲ್ಲಿ ನಡೆದಿದ್ದು, ಚೋರರು ಎರಡು ಕಾರುಗಳನ್ನು ಕಳವು ಮಾಡಿದ್ದಾರೆ.

ಅಬಿದ್ ಅಹಮ್ಮದ್ ಸುರಲ್ಪಾಡಿ ಎಂಬುವರಿಗೆ ಸೇರಿದ್ದ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಕಚೇರಿಗೆ ತಡರಾತ್ರಿ ವೇಳೆ ಹೆಲ್ಮೆಟ್ ಹಾಗೂ ರೈನ್ ಜಾಕೆಟ್ ಹಾಕಿದ್ದ ಖದೀಮರ ತಂಡ ಎಂಟ್ರಿ ಕೊಟ್ಟಿದ್ದು, ಕಚೇರಿ ಮುಂಭಾಗದ ಡೋರಿನ ಗ್ಲಾಸ್ ಮುರಿದು ಒಳ ನುಗ್ಗಿದ್ದಾರೆ. ಬಳಿಕ ಕಚೇರಿ ಪೂರ್ತಿ ತಡಕಾಡಿ ಡ್ರಾವರ್ ನಲ್ಲಿದ್ದ ಕಾರುಗಳ ಕೀಯನ್ನು ಪಡೆದುಕೊಂಡಿದ್ದಾರೆ. ಬಳಿಕ ಕೀ ಬಳಸಿ ಕಚೇರಿ ಮುಂಭಾಗ ಮಾರಾಟಕ್ಕೆ ನಿಲ್ಲಿಸಿದ್ದ ಎರಡು ಕಾರು ಕಳ್ಳತನ ಮಾಡಿದ್ದಾರೆ.

ದುಬಾರಿ ಕಾರುಗಳನ್ನೇ ಗುರಿಯಾಗಿಸಿ ಕಳ್ಳರ ತಂಡ ಕಾರ್ಯಾಚರಣೆ ನಡೆಸಿದ್ದು, 6 ಲಕ್ಷ ರೂ. ಮೌಲ್ಯದ ಸ್ವಿಫ್ಟ್ ಕಾರು, 9 ಲಕ್ಷ ರೂ. ಮೌಲ್ಯದ ಕ್ರೇಟಾ ಕಾರು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಕಚೇರಿಯ ಒಳಗಿದ್ದ ಲ್ಯಾಪ್ ಟಾಪ್, ಪ್ರಿಂಟರ್, ಮೊಬೈಲ್, ಕಾರುಗಳ ದಾಖಲಾತಿ ಪತ್ರಗಳನ್ನು ತೆಗೆದುಕೊಂಡು ಹೋಗಿದ್ದಾರೆ.

ಸುಮಾರು 15 ಲಕ್ಷ ಮೌಲ್ಯದ ಸೊತ್ತುಗಳ ಕಳ್ಳತನವಾಗಿದೆ ಎಂದು ಶೋರೂಂ ಮಾಲೀಕರು ತಿಳಿಸಿದ್ದು, ಖದೀಮರ ಚೋರ ಕೃತ್ಯಗಳು ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗ್ಲಾಸ್ ಒಡೆಯುವ ದೃಶ್ಯ, ಕಾರು ಎಸ್ಕೇಪ್ ಮಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸುರತ್ಕಲ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಖದೀಮರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು