ಐಎಂಡಿಬಿ (IMDb) ಈ ವರ್ಷ ರಿಲೀಸ್ ಆದ ಟಾಪ್ 10 ಭಾರತದ ಸಿನಿಮಾಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ರೇಟಿಂಗ್ ಆಧಾರದ ಮೇಲೆ ಐಎಂಡಿಬಿ ಟಾಪ್ 10 ಸಿನಿಮಾಗಳನ್ನು ಸಿದ್ಧಪಡಿಸಿಲ್ಲ. ಬದಲಿಗೆ ಆಯಾ ಸಿನಿಮಾಗಳ ಪೇಜ್ಗಳಿಗೆ ಭೇಟಿ ನೀಡಿದವರ ಸಂಖ್ಯೆ ಆಧರಿಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
‘ಪಠಾಣ್’ ಸಿನಿಮಾ ಐಎಂಡಿಬಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಶಾರುಖ್ ಖಾನ್ ನಟನೆಯ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಬ್ಬರದ ಕಲೆಕ್ಷನ್ ಮಾಡಿತು. ‘ಕಿಸಿ ಕ ಭಾಯ್, ಕಿಸಿ ಕಿ ಜಾನ್’ ಸಿನಿಮಾ 2ನೇ ಸ್ಥಾನದಲ್ಲಿದೆ. 3ನೇ ಸ್ಥಾನದಲ್ಲಿ ‘ದಿ ಕೇರಳ ಸ್ಟೋರಿ’, 4ನೇ ಸ್ಥಾನದಲ್ಲಿ ‘ತು ಜೂಟಿ ಮೇ ಮಕ್ಕಾರ್’, 5ನೇ ಸ್ಥಾನದಲ್ಲಿ ‘ಮಿಷನ್ ಮಜ್ನು’, 6ನೇ ಸ್ಥಾನದಲ್ಲಿ ‘ಚೋರ್ ನಿಕಲ್ ಕೆ ಭಾಗಾ’, 7ನೇ ಸ್ಥಾನದಲ್ಲಿ ‘ಬ್ಲಡಿ ಡ್ಯಾಡಿ’, 8ನೇ ಸ್ಥಾನದಲ್ಲಿ ‘ಸಿರ್ಫ್ ಏಕ್ ಬಂದಾ ಕಾಫಿ ಹೈ’ 9ನೇ ಸ್ಥಾನದಲ್ಲಿ ‘ವಾರಿಸು’ ಹಾಗೂ 10ನೇ ಸ್ಥಾನದಲ್ಲಿ ‘ಪೊನ್ನಿಯಿನ್ ಸೆಲ್ವನ್ 2’ ಚಿತ್ರ ಇದೆ.
ಇದನ್ನು ಅನೇಕರು ಒಪ್ಪಿಲ್ಲ. ಕನ್ನಡದಲ್ಲಿ ರಿಲೀಸ್ ಆದ ‘ಡೇರ್ ಡೆವಿಲ್ ಮುಸ್ತಫಾ’, ತೆಲುಗಿನ ‘ವಿರೂಪಾಕ್ಷ’ ಮೊದಲಾದ ಸಿನಿಮಾಗಳು ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು. ಅವುಗಳಿಗೆ ಏಕೆ ಸ್ಥಾನ ಸಿಕ್ಕಿಲ್ಲ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.