News Karnataka Kannada
Saturday, April 27 2024
ಮಂಗಳೂರು

ಕಟ್ಟಡ ನಿರ್ಮಾಣಕ್ಕೆ 30 ದಿನದೊಳಗೆ ಪರವಾನಗಿ: ಕ್ರೆಡೈ ಮಂಗಳೂರು ಅಧ್ಯಕ್ಷ ಪುಷ್ಪರಾಜ್‌ ಜೈನ್‌ ಸಂತಸ

Pushparaj Jain, President, CREDAI Mangaluru details of the press conference
Photo Credit : News Kannada

ಮಂಗಳೂರು: ಸಾರ್ವಜನಿಕರುಕಟ್ಟಡ ನಿರ್ಮಾಣಕ್ಕೆ ಸಮಗ್ರ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿದ 30 ದಿನದೊಳಗೆ ಪರವಾನಗಿ, 8 ದಿನದೊಳಗೆ ಪ್ರವೇಶ ಪತ್ರ, 7 ದಿನದೊಳಗೆ ಸ್ಥಳ ಪರಿಶೀಲನೆ ನಡೆಸಬೇಕು ಎಂಬ ಆದೇಶವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಬೇಕು ಎಂದು ಜಿಲ್ಲಾಧಿಕಾರಿ ರವಿಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿ ಆದೇಶ ಹೊರಡಿಸಿರುವುದು ಸ್ವಾಗತಾರ್ಹ. ಈ ಆದೇಶವು ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಹಾಗೂ ಸಾರ್ವಜನಿಕರಿಗೆ ಸಹಕಾರಿಯಾಗಲಿದೆ ಎಂದು ಕ್ರೆಡೈ ಮಂಗಳೂರು ಅಧ್ಯಕ್ಷ ಪುಷ್ಪರಾಜ್‌ ಜೈನ್ ಹೇಳಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಗಿ ನೀಡುವ ಬಗ್ಗೆ ಏಕಗವಾಕ್ಷಿ ಯೋಜನೆ ಸೇರಿದಂತೆ ಸಮಸ್ಯೆಗಳ ಕುರಿತು ಮಂಗಳೂರು ಮಹಾನಗರ ಪಾಲಿಕೆ, ಮೂಡಾ, ಅಗ್ನಿ ಮತ್ತುತುರ್ತು ಸೇವೆಗಳ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಸಿಆರ್‌ಝೆಡ್, ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಕ್ರೆಡಾಯ್, ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಷನ್, ಕೆನರಾ ಬಿಲ್ಡರ್ಸ್ ಅಸೋಸಿಯೇಷನ್ ಪ್ರತಿನಿಧಿಗಳ ಜೊತೆ ಜಿಲ್ಲಾಧಿಕಾರಿ ಅವರು ಸಭೆ ನಡೆಸಿ ಈ ಆದೇಶ ಹೊರಡಿಸಿದ್ದಾರೆ.

ಕಟ್ಟಡ ಪರವಾನಗಿ ಪಡೆಯಲು ವಿವಿಧ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ, ಸ್ಥಳ ಪರಿಶೀಲನೆ ಮುಂತಾದ ಕೆಲಸಗಳ ವಿಳಂಬದಿಂದಾಗಿ ಇಡೀ ಪ್ರ‌ಕ್ರಿಕೆಯು ವಿಳಂಬವಾಗುತ್ತಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಸ್ಥಳೀಯ ಜನ ಪ್ರತಿ ನಿಧಿಗಳಿಗೆ ಹಲವು ಭಾರಿ ಕ್ರೆಡೈ ಸಂಘಟನೆ ಮನವಿಯನ್ನು ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರು ಸಭೆ ಕರೆದು ಈ ಮಹತ್ವದ ಆದೇಶ ಹೊರಡಿಸಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳಿಗೆ ಕ್ರೆಡಾಯ್‌ಅಭಿನಂದನೆ ಸಲ್ಲಿಸುತ್ತದೆ. ಅಭಾರಿಯಾಗಿದೆ ಎಂದು ಪುಷ್ಪರಾಜ್‌ ಜೈನ್ ಹೇಳಿದರು.

ನಿಗದಿತ ಅವಧಿಯೊಳಗೆ ಅರ್ಜಿಯನ್ನು ವಿಲೇವಾರಿ ಮಾಡಲೇಬೇಕು ಎಂಬ ಕಟ್ಟುನಿಟ್ಟಿನ ಆದೇಶದಿಂದ ರಿಯಲ್‌ ಎಸ್ಟೇಟ್‌ ಉದ್ಯಮ ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಕಟ್ಟಡ ಪರವಾನಗಿ ಪಡೆಯಲು ಕಚೇರಿಯಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ತಪ್ಪಲಿದೆ.

ಡೀಮ್ಡ್ ಎನ್‌ಒಸಿ: ಕಟ್ಟಡ ನಿರ್ಮಾಣ ಪೂರ್ವದಲ್ಲಿ ಹಲವು ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು. ನಿಗದಿತ ಸಮಯದೊಳಗೆ ನಿರಾಕ್ಷೇಪಣಾ ಪತ್ರ ಸಿಗದೆ ಯೋಜನೆ ವಿಳಂಬವಾಗಿ, ಆರ್ಥಿಕ ಮುಗ್ಗಟ್ಟನ್ನುಎದುರಿಸಬೇಕಾಗುತ್ತದೆ. ಈ ಬಗ್ಗೆ ಹಲವು ದೂರುಗಳನ್ನೂ ನೀಡಲಾಗಿತ್ತು. ಆದರೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿಕಟ್ಟಡ ನಿರ್ಮಾಣಕ್ಕೆ ನಿಗದಿತ ಅವಧಿಯಲ್ಲಿ ಸಂಬಂಧಪಟ್ಟಇಲಾಖೆಯು ಒಂದು ವೇಳೆ ನಿರಾಕ್ಷೇಪಣಾ ಪತ್ರ ನೀಡದಿದ್ದಲ್ಲಿ, ಡೀಮ್ಡ್ ಎನ್‌ಒಸಿ (ನಿರಾಕ್ಷೇಪಣಾ ಪತ್ರ ನೀಡಲಾಗಿದೆ) ಎಂದು ಪರಿಗಣಿಸಿ, ಅದರ ಆಧಾರದಲ್ಲಿ ಕಟ್ಟಡ ನಿರ್ಮಿಸಲು ಸ್ಥಳೀಯ ಸಂಸ್ಥೆಗಳು ಪರವಾನಗಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಜಿಲ್ಲಾಡಳಿತದ ಇಂತಹ ತೀರ್ಮಾನದಿಂದ ಅನುಮತಿಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವ ಸಮಸ್ಯೆ ನಿವಾರಣೆಯಾಗಲಿದೆ ಎಂದು ಪುಷ್ಪರಾಜ್‌ಜೈನ್ ತಿಳಿಸಿದರು.

ಎಲ್ಲಾ ಸರಕಾರಿ ಕಚೇರಿಗಳು, ಇಲಾಖೆಗಳು ಸಾರ್ವಜನಿಕರಿಗೆತಮ್ಮ ಇಲಾಖೆ, ಕಚೇರಿಯಿಂದ ನೀಡಲಾಗಿರುವ ಸೇವೆಗಳನ್ನು ನಿಗದಿತ ಕಾಲಮಿತಿಯಲ್ಲಿ ನೀಡಬೇಕು ಎಂಬ ಆದೇಶವನ್ನು ಸಭೆಯಲ್ಲಿ ಜಿಲ್ಲಾಧಿಕಾರಿ ಹೊರಡಿಸಿದ್ದಾರೆ.

ಏಕಗವಾಕ್ಷಿಗೆ ಮೊದಲ ಹೆಜ್ಜೆ: ಕಟ್ಟಡ ನಿರ್ಮಾಣಕ್ಕೆ ಪರವಾನಗಿಗೆ ಮಹಾನಗರಪಾಲಿಕೆಗೆ ಅರ್ಜಿ ಸಲ್ಲಿಸುವ ಮುನ್ನಅಗ್ನಿಶಾಮಕ ಇಲಾಖೆ, ಸಿಆರ್‌ಝೆಡ್ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಾರ್ವಜನಿಕರುಅರ್ಜಿ ಸಲ್ಲಿಸಿ ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳಬೇಕಿತ್ತು. ಇದರಿಂದಾಗಿ ಯೋಜನೆ ವಿಳಂಬವಾಗುತ್ತಿತ್ತು. ಇಂತಹ ವಿಳಂಬಗಳನ್ನು ತಪ್ಪಿಸುವ ಉದ್ದೇಶದಿಂದ ಕಟ್ಟಡ ಪರವಾನಿಗೆಅರ್ಜಿಯನ್ನುಏಕಗವಾಕ್ಷಿಯೋಜನೆಯಡಿತರುವ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಮುಂದಿನ ದಿನಗಳಲ್ಲಿ ಏಕಗವಾಕ್ಷಿಯೋಜನೆಯನ್ನು ಹಂತ ಹಂತವಾಗಿ ಅಳವಡಿಸುವ ಬಗ್ಗೆ ವರದಿ ತಯಾರಿಸಲು ಸೂಚಿಸಲಾಯಿತು.

ಬಹುಮಹಡಿ ಕಟ್ಟಡಗಳ ವಿನ್ಯಾಸಕ್ಕೆ ಮೂಡಾದಿಂದ ಅನುಮೋದನೆ, ಅಗ್ನಿಶಾಮಕ ದಳ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಅರ್ಜಿ ಸ್ವೀಕರಿಸಿದ ವಾರದೊಳಗೆ ನಿರಾಪೇಕ್ಷಣಾ ಪತ್ರ ನೀಡಬೇಕು ಹೀಗೆ ಸಾರ್ವಜನಿಕರಿಗೆ ಪೂರಕವಾದ ಹತ್ತು ಹಲವು ಆದೇಶವನ್ನುಜಿಲ್ಲಾಧಿಕಾರಿ ನೀಡಿರುತ್ತಾರೆ.

ಕಟ್ಟಡ ಮುಕ್ತಾಯಗೊಂಡ ಪ್ರವೇಶ ಪತ್ರ ನೀಡುವಾಗಲೇ ಭದ್ರತಾ ಠೇವಣಿ ಹಿಂತಿರುಗಿಸಬೇಕು. ನೀರು ಹಾಗೂ ಸೀವೇಜ್ ಬಗ್ಗೆ ಎನ್‌ಒಸಿಗೆ ಎರಡು ತಿಂಗಳು ವಿಳಂಬವಾಗುತ್ತಿದ್ದುಅದನ್ನುತಪ್ಪಿಸಬೇಕು ಎಂಬ ಬೇಡಿಕೆಯನ್ನು ಮುಂದಿಡಲಾಗಿದೆ.

ಕಟ್ಟಡ ನಿರ್ಮಾಣಕ್ಕಾಗಿ ಪರವಾನಗಿಕೋರಿ ಬರುವ ಅರ್ಜಿಗಳನ್ನು 15 ದಿನಗಳಿಗೊಮ್ಮೆ ಮಹಾನಗರ ಪಾಲಿಕೆಯ ಆಯುಕ್ತರು ಅರ್ಜಿದಾರರು, ಎಂಜಿನಿಯರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ವಿಚಾರಣೆ ನಡೆಸಬೇಕು ಎಂಬ ಆದೇಶವನ್ನೂಜಿಲ್ಲಾಧಿಕಾರಿ ನೀಡಿರುತ್ತಾರೆ.

ದಕ್ಷಿಣಕನ್ನಡಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಸ್ಥಳೀಯ ಸಂಸ್ಥೆಗಳಾದ ಮಂಗಳೂರು ಮಹಾನಗರಪಾಲಿಕೆ, ನಗರಸಭೆಗಳು, ಪುರಸಭೆಗಳು, ಪಟ್ಟಣ ಪಂಚಾಯಿತಿಗಳು, ಗ್ರಾಮ ಪಂಚಾಯತಿಗಳು ಮತ್ತುಎಲ್ಲಾ ನಗರಯೋಜನಾ ಪ್ರಾಧಿಕಾರಗಳು ಕಟ್ಟಡ ಪರವಾನಿಗೆ ನೀಡುವ ಪ್ರಾಧಿಕಾರವಾಗಿವೆ. ಆದುದರಿಂದ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೂ ಸಹ ಇದೇ ರೀತಿ ಏಕಗವಾಕ್ಷಿ ಯೋಜನೆ ಮಾದರಿಯಲ್ಲಿ ಕ್ರಮ ವಹಿಸುವಂತೆ ಸೂಚಿಸಲಾಗಿದೆ.

ಇದೊಂದು ಹಲವು ವರ್ಷಗಳ ಬೇಡಿಕೆಯಾಗಿದ್ದು, ಸಂಸದರು, ಸಚಿವರು, ಶಾಸಕರು ಸೇರಿದಂತೆ ಜಿಲ್ಲೆಯಜನ ಪ್ರತಿನಿಧಿಗಳ ಸಹಕಾರದಿಂದಾಗಿ ಜಿಲ್ಲಾಧಿಕಾರಿ ಸಭೆ ನಡೆಸಿ ಈ ಮಹತ್ವದ ಆದೇಶ ಹೊರಡಿಸಿದ್ದಾರೆ. ಜಿಲ್ಲಾಧಿಕಾರಿ ರವಿಕುಮಾರ್‌ ಅವರ ದಿಟ್ಟ ಆದೇಶವು ಜಿಲ್ಲೆಯ ಅಭಿವೃದ್ಧಿಯಲ್ಲಿ ಹೊಸ ಶಾಖೆಯನ್ನು ನಿರ್ಮಾಣ ಮಾಡಲಿದೆ. ಮಾತ್ರವಲ್ಲದೆ ಈ ಆದೇಶವು ಅಭಿವೃದ್ಧಿಗೆ ಮೈಲುಗಲ್ಲಾಗಲಿದೆ ಎಂದು ಪುಷ್ಪರಾಜ್‌ ಜೈನ್ ತಿಳಿಸಿದ್ದಾರೆ.

ನಿಯೋಜಿತ ಅಧ್ಯಕ್ಷ ವಿನೋದ್‌ ಪಿಂಟೊ, ಕಾರ್ಯದರ್ಶಿ ಪ್ರಶಾಂತ್ ಸನಿಲ್, ಕೋಶಾಧಿಕಾರಿ ಗುರುಮೂರ್ತಿ ಮತ್ತು ಸಮಿತಿ ಕಾರ್ಯಕಾರಿ ಸಮಿತಿ  ಸದಸ್ಯರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು