News Karnataka Kannada
Wednesday, May 08 2024
ಮಂಗಳೂರು

ಮಂಗಳೂರು: ರೊಜಾರಿಯೊದಲ್ಲಿ ನಿವೃತ್ತ ದೈಹಿಕ ಶಿಕ್ಷಕರಿಗೆ ಬೀಳ್ಕೊಡುಗೆ 

farewell at Rosario 
Photo Credit : News Kannada

ಮಂಗಳೂರು: ರೊಜಾರಿಯೊ ಪ್ರೌಢ ಶಾಲೆಯಲ್ಲಿ ಮೂವತ್ತು ವರುಷಗಳ ಕಾಲ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ಒಟ್ಟು 34 ವರ್ಷ ಸೇವಾವಧಿಯ ಶ್ರೀ ಕಾರಿಯಪ್ಪ ರೈ ಕೆ. ಅವರಿಗೆ ಅಭಿಮಾನದ ಅಭಿನಂದನಾ ಸಮಾರಂಭವು 01-08-2022 ರಂದು ರೊಜಾರಿಯೊ ಕಲ್ಚರಲ್ ಸಭಾಂಗಣದಲ್ಲಿ ನಡೆಯಿತು.

ನಿವೃತ್ತ ಶಿಕ್ಷಕ ದಂಪತಿಗಳನ್ನು ಗೌರವ ಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು. ವಿದ್ಯಾರ್ಥಿಗಳಿಂದ ಪ್ರಾರ್ಥನೆ ಮತ್ತು ಸ್ವಾಗತ
ನೃತ್ಯದ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು.

ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳ ಬಗ್ಗೆ ಅಭಿಮಾನದ ಮಾತುಗಳೊಂದಿಗೆ ವಿದಾಯ ಗೀತೆಯನ್ನು ಹಾಡಿದರು ಮತ್ತು ನೆಚ್ಚಿನ ಗುರುವಿಗೆ ಹೂ ಗುಚ್ಚ ನೀಡಿ ಕೃತಜ್ಞತೆ ಸಲ್ಲಿಸಿದರು. ಸಹದ್ಯೋಗಿ ಹಿರಿಯ ಶಿಕ್ಷಕಿ ಶ್ರೀಮತಿ ಆಲಿಸ್ ಕೆ ಜೆ ಇವರು ದೈಹಿಕ ಶಿಕ್ಷಕರ ಸೇವಾಬದ್ದತೆ ಮತ್ತು ಶಿಸ್ತು , ಪ್ರಾಮಾಣಿಕತೆಯ ಬಗ್ಗೆ ತಿಳಿಸಿ ವಿಶ್ರಾಂತ ಜೀವನಕ್ಕೆ ಶುಭಾಶಯ ಸಲ್ಲಿಸಿ ಸಹದ್ಯೋಗಿ ಮಿತ್ರರೊಂದಿಗೆ ಸೇರಿ ವಿದಾಯ ಗೀತೆಯನ್ನು ಹಾಡಿದರು.

ನಂತರ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಅಲೋಶಿಯಸ್ ಡಿಸೋಜ ರವರು ಸನ್ಮಾನ ಪ್ರತ್ರವನ್ನು ವಾಚಿಸಿ ದೈಹಿಕ ಶಿಕ್ಷಕರು ನನಗೆ ಆದರ್ಶರು ಮಾತ್ರವಲ್ಲದೆ ಅವರ ಸರಳ ಮತ್ತು ಪ್ರಾಮಾಣಿಕ ಜೀವನವು ಸದಾಕಾಲವೂ ನೆನಪಾಗಿ ಉಳಿದುಕೊಳ್ಳುವುದು ಎಂದು ತಿಳಿಸಿದರು.

ನಿವೃತ್ತ ದೈಹಿಕ ಶಿಕ್ಷಕ ಶ್ರೀ ಕಾರಿಯಪ್ಪ ರೈ ಅವರಿಗೆ ಶಾಲು ಹೊದಿಸಿ, ಪೇಟಾ ಧರಿಸಿ ಫಲಪುಸ್ಪ ನೀಡಿ, ನೆನಪಿನ ಕಾಣಿಕೆಯಾಗಿ ಚಿನ್ನದ ಪದಕ ನೀಡಿ ಸನ್ಮಾನಿಸಲಾಯಿತು. ಅವರ ಶ್ರೀಮತಿ ಸುಭಾಷಿಣಿ ಕೆ ರೈಯವರಿಗೆ ಹೂಗುಚ್ಚ ನೀಡಿ ಅಭಿನಂದಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸನ್ಮಾನಿತರು ರೊಸಾರಿ ಮಾತೆಗೆ ಅಭಿವಂದಿಸಿಕೊAಡು ತಮಗೆ ಅವಕಾಶ ನೀಡಿ ಪ್ರೋತ್ಸಾಹ ನೀಡಿ ಮಾರ್ಗದರ್ಶನ ನೀಡಿದ ಆಡಳಿತ ಮಂಡಳಿಯ ಸಂಚಾಲಕರನ್ನು, ಮುಖ್ಯೋಪಾಧ್ಯಾಯರನ್ನು, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳ ಸಹಕಾರ, ಸಾವಿರಾರು ವಿದ್ಯಾರ್ಥಿಗಳ ಸಹಭಾಗಿತ್ವ ಮತ್ತು ಪ್ರೀ್ತಿಯನ್ನು ನೆನಪಿಸಿಕೊಂಡು ನೆನಪಿನ ಕಾಣಿಕೆ ನೀಡಿ ಕೃತಜ್ಞತೆ ಸಲ್ಲಿಸಿದರು.

ಅತಿಥಿಗಳಾಗಿ ಆಗಮಿಸಿಕೊಂಡ ತಾಲೂಕು ದೈಹಿಕ ಪರಿವೀಕ್ಷಕರಾದ ಶ್ರೀ ಭರತ್ ದೈಹಿಕ ಶಿಕ್ಷಕರ ಮೇಲೆ ನೀವು ತೋರಿದ ಅಭಿಮಾನ ಬಹುದೊಡ್ಡದು ಅವರ ಸರಳ ಜೀವನ ಮತ್ತು ಶಿಸ್ತುಬದ್ದತೆ ಅವರ ಬದುಕಿನ ಯಶಸ್ಸಿನ ಗುಟ್ಟು ಎಂದು ತಿಳಿಸಿ ಅಭಿನಂದನೆ ಸಲ್ಲಿಸಿದರು.

ಸ್ಥಳೀಯ ಮ.ನ.ಪ ಸದಸ್ಯರಾದ ಶ್ರೀ ಅಬ್ದುಲ್ ಲತೀಫ್ ಶುಭಾಶಯಗಳೊಂದಿಗೆ ಅಭಿನಂದನೆ ಸಲ್ಲಿಸಿದರು. ನಿವ್ರೃತ್ತಿಯನ್ನು ಹೊಂದಲಿರುವ ರೊಜಾರಿಯೊ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜೆನೆಟ್ ಫೆರ್ನಾಂಡಿಸ್ ಅವರಿಗೆ ಗೌರವದೊಂದಿಗೆ ಅಭಿನಂದನೆ ಸಲ್ಲಿಸಲಾಯಿತು.

ಅಧ್ಯಕ್ಷ ಭಾಷಣವನ್ನು ಮಾಡಿದ ಸಂಚಾಲಕರಾದ ವಂ|ಫಾ| ಆಲ್ಪೆಡ್ ಜೆ ಪಿಂಟೊರವರು ಮಾತಾಡಿ ಅತ್ಯುತ್ತಮ ಶಿಕ್ಷಕರನ್ನು
ಪಡೆದುಕೊಳ್ಳುವುದು ಒಂದು ಸಂಸ್ಥೆಯ ಅದೃಷ್ಟ ಅಂತಹ ಶಿಕ್ಷಕರು ಸರ್ವಕಾಲಕ್ಕೂ ಪೂಜ್ಯ ಸ್ಥಾನದಲ್ಲಿರುತ್ತಾರೆ. ನಿವೃತ್ತಿ ಶಿಕ್ಷಕರ ವಿಶ್ರಾಂತ ಜೀವನವು ಸುಖ ಸಮೃದ್ದವಾಗಿರಲೆಂದು ದೇವರಲ್ಲಿ ಬೇಡಿಕೊಳ್ಳವೆವು ಎಂದು ಶುಭ ಹಾರೈಸಿದರು. ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ನಿವೃತ್ತ ದೈಹಿಕ ಶಿಕ್ಷಕರಿಗೆ ಹೂ ಗುಚ್ಚ ನೀಡಿ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಅಲೋಶಿಯಸ್ ಡಿಸೋಜ, ಸಹಾಯಕ ಧರ್ಮಗುರುಗಳಾದ ವಂ|ಫಾ| ವಿನೋದ್ ಲೋಬೋ, ಪದವಿ ಕಾಲೇಜಿನ ಪ್ರಾಂಶುಪಾಲರಾದ ವಂ.ಫಾ. ರೊಕಿ ಫೆರ್ನಾಂಡಿಸ್, ಹಿರಿಯ ಶಿಕ್ಷಕಿ ಆಲಿಸ್ ಕೆ ಜೆ, ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳು, ಪೋಷಕ ರಕ್ಷಕ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು, ಚರ್ಚ್ ಪಾಲನಾ ಮಂಡಳಿಯ
ಉಪಾಧ್ಯಕ್ಷರಾದ ಶ್ರೀ ಗಿಲ್ಬರ್ಟ್ ಡಿಸಿಲ್ವ ಆಡಳಿತ ಮಂಡಳಿಯ ಸದಸ್ಯರು , ಸಿ.ಆರ್.ಪಿ ಶ್ರೀ ಹೇಮಂತ್ ಉಪಸ್ಥಿತರಿದ್ದರು.

ಶಿಕ್ಷಕಿ ಸೋನಿಯಾ ಫೆರ್ನಾಂಡಿಸ್ ಸ್ವಾಗತಿಸಿ , ಶಿಕ್ಷಕಿ ಜೆಸಿಂತ ಮೊರಾಸ್ ವಂದಿಸಿದರು. ಶಿಕ್ಷಕ ಪ್ರದೀಪ್ ಡಿ.ಎಮ್.ಹಾವಂಜೆ
ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು