News Karnataka Kannada
Friday, May 10 2024
ಮಂಗಳೂರು

ಮಂಗಳೂರು: ನಾನು ರೀಲಲ್ಲ ರಿಯಲ್ ನಾಗವಲ್ಲಿ ಟ್ರೋಲಿಗರನ್ನು ಎಚ್ಚರಿಸಿದ ಪ್ರತಿಭಾ ಕುಳಾಯಿ

Prathibha
Photo Credit : News Kannada

ಮಂಗಳೂರು: ನನ್ನನ್ನು ಟ್ರೋಲ್ ಮಾಡುತ್ತಿದ್ದಾರೆ ನಾನು ಆ ಸಿನಿಮಾದಲ್ಲಿರುವ ನಾಗವಲ್ಲಿ ಅಲ್ಲ ನಾನು ಒರಿಜಿನಲ್ ನಾಗವಲ್ಲಿ ಈ ಟ್ರೋಲ್ ಅನ್ನು ರಾಜಕೀಯ ಬೆಳವಣಿಗೆಗೆ ಪೂರಕ ಅಂತ ನಾನು ಧನಾತ್ಮಕವಾಗಿ ಸ್ವೀಕರಿಸುತ್ತೇನೆ . ನನ್ನ ಮಾನಭಂಗ ಮಾಡುವಂತೆ ಅಶ್ಲೀಲವಾಗಿ ಟ್ರೋಲ್ ಮಾಡಿದವರ ಮನೆಗೆ ಹೋಗಿ ಅವನಲ್ಲೂ ಕ್ಷಮೆ ಕೇಳುವಂತೆ ಮಾಡಿ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತೇನೆ ಎಂದು ಸಾಮಾಜಿ ಕಾರ್ಯಕರ್ತೆ ಪ್ರತಿಭಾ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುರತ್ಕಲ್ ಟೋಲ್ ಗೇಟ್ ವಿರುದ್ಧ ಕಳೆದ ಕೆಲವು ದಿನಗಳ ಹಿಂದೆ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಆಶ್ರಯದಲ್ಲಿ ನಡೆದ ಉಗ್ರ ಪ್ರತಿಭಟನೆ ಬಳಿಕ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಮಹಿಳಾ ಪ್ರತಿಭಟನಾಕಾರರನ್ನು ಗುರುತಿಸಿ ಕೆಟ್ಟ ಪದಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವವರ ಮೇಲೆ ಹೋರಾಟಗಾರ್ತಿ ಪ್ರತಿಭಾ ಕುಳಾಯಿ ಕೆಂಡಮಂಡಲವಾಗಿದ್ದಾರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ

ಈ ಬಗ್ಗೆ ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಿಭಾ ಕುಳಾಯಿ ಜಾಲತಾಣದಲ್ಲಿ ತೇಜೋವಧೆ ಮಾಡುವುದನ್ನು ಖಂಡಿಸಿದ್ದಾರೆ . ನನ್ನನ್ನು ನಾಗವಲ್ಲಿ ಅಂತ ಟ್ರೋಲ್ ಮಾಡುತ್ತಿದ್ದಾರೆ ನಾನು ಆ ಸಿನಿಮಾದಲ್ಲಿರುವ ನಾಗವಳ್ಳಿ ಅಲ್ಲ ನಾನು ಒರಿಜಿನಲ್ ನಾಗವಲ್ಲಿ ಈ ಟ್ರೋಲ್ ಅನ್ನು ರಾಜಕೀಯ ಬೆಳವಣಿಗೆಗೆ ಪೂರಕ ಅಂತ ನಾನು ಧನಾತ್ಮಕವಾಗಿ ಸ್ವೀಕರಿಸುತ್ತೇನೆ ನನ್ನ ಮಾನಭಂಗ ಮಾಡುವಂತೆ ಅಶ್ಲೀಲವಾಗಿ ಟ್ರೋಲ್ ಮಾಡಿದವರ ಮನೆಗೆ ಹೋಗಿ ಅವನನ್ನು ಕ್ಷಮೆ ಕೇಳುವಂತೆ ಮಾಡಿ ಈ ವಿಡಿಯೋವನ್ನು ಸಾಮಾಜಿಕ ಪ್ರಸಾರಪಡಿಸುತ್ತೇನೆ ಎಂದರು

ನಾನು ರಾಣಿ ಅಬ್ಬಕ್ಕನ ಊರಲ್ಲಿ ಹುಟ್ಟಿದವಳು ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ ನನ್ನ ಧೈರ್ಯಕ್ಕೆ ಮುಖ್ಯವಾದ ಕಾರಣ ನನ್ನ ವಿದ್ಯೆ. ಮಹಿಳಾ ಸಬಲೀಕರಣದ ವಿಷಯದಲ್ಲಿ ಪಿಎಚ್ ಡಿ ಮಾಡುತ್ತಿರುವ ನಾನು ಇಷ್ಟೆಲ್ಲ ಕಲಿತಿರುವ ನಾನು ಇಂಥ ಟ್ರೋಲ್ ಗಳಿಗೆ ಜಗ್ಗುವವಳಲ್ಲ ಟೋಲ್ಗೇಟ್ ವಿರೋಧಿ ಹೋರಾಟದಲ್ಲಿ ನಾನು ಇನ್ನು ಮುಂದೆ ಕೂಡ ಭಾಗವಹಿಸುತ್ತೇನೆ ಏಕೆಂದರೆ ಇದು ಲಂಚ ಮಂಚದ ವಿಷಯ ಅಲ್ಲ ಬಿಜೆಪಿ ನಾಯಕರ ವೀಡಿಯೋ ವೈರಲ್ ಆಗಿರೋದು ಎಲ್ಲರಿಗೂ ಗೊತ್ತೇ ಇದೆ ಯಾರು ಟ್ರೋಲ್ ಮಾಡಿ ಇದು ಕಾಂತಾರ 2ಅಂತ ಹೇಳಿದ್ದಾರೆ ನಾನು ಹೇಳ್ತೇನೆ ಇದು ಕಾಂತಾರ 3. ಕಾಂತಾರ 1 ಆದದ್ದು ಕೋಡಿಕೆರೆಯ ಗೂಂಡಾಗಳನ್ನು 8ವರ್ಷಗಳ ಹಿಂದೆ ಮಟ್ಟ ಹಾಕಿದ್ದಾಗ. ಕಾಂತರ 2 ಅಬ್ದುಲ್ ಸತ್ತಾರ್ ಎನ್ನುವ ಕಾಮುಕ ಹೆಣ್ಣು ಮಕ್ಕಳಿಗೆ ಹಿಂಸೆ ನೀಡುತ್ತಿದ್ದಾಗ ಅವನಿಗೆ ಒಡೆದಿದ್ದಾಗ , ಈ ಹೋರಾಟದಲ್ಲಿ ನಾನು ಭಾಗವಹಿಸಿದ್ದು ಕಾಂತಾರ ೩. ಇನ್ನುಮುಂದೆ ಕಾಂತಾರ ೪ ಸುರತ್ಕಲ್ ನಲ್ಲಿ ಬೆಳೆದು ನಿಂತಿರುವ ಬೃಹತ್ ಕಟ್ಟಡ. ಕಾಂತಾರ 5 ಎಂಆರ್ ಪಿಎಲ್ ನಲ್ಲಿ ನಮ್ಮ ಯುವಕರಿಗೆ ಉದ್ಯೋಗ ನೀಡುತ್ತಿಲ್ಲ ಅದರ ವಿರುದ್ಧ ಹೋರಾಟ ಎಂದರು.

ಇನ್ನೊಮ್ಮೆ ನಾನು ನಾಗವಲ್ಲಿ ರೂಪ ತಾಳುತ್ತಾನೆ ಬಿಜೆಪಿಯವರು ಮಾತೆತ್ತಿದ್ರೆ ಧರ್ಮ ಹೆಣ್ಣುಮಕ್ಕಳ ಗೌರವ ಅಂತಾರಲ್ಲ ಅವರ ಸಂಸ್ಕೃತಿ ಈಗ ಸೋಷಿಯಲ್ ಮೀಡಿಯಾದಲ್ಲಿ ಎದ್ದುಕಾಣುತ್ತಿದೆ ಹೆಣ್ಣುಮಕ್ಕಳಿಗೆ ಕಾಳಿದೇವಿ ಎಂಬ 2 ರೂಪವಿದೆ.

ನಾನು ಈ ಹೋರಾಟದಲ್ಲಿ ಯಾವುದೇ ಬಿಜೆಪಿ ಮುಖಂಡರಿಗೆ ಧಿಕ್ಕಾರ ಕೂಗಿಲ್ಲ ಹತ್ತಾರು ಮಂದಿ ಪೋಲೀಸರು ಬಂದು ನನ್ನನ್ನು ಹಿಡಿದಾಗ ಮಾನಕ್ಕೆ ಹೆದರಿ ನಾನು ಕಿರುಚಿದ್ದೇನೆ ಹೊರತು ಇನ್ಯಾವುದಕ್ಕೂ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು ಟ್ರೊಲ್ ಮಾಡಿದವನ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುವ ಹಕ್ಕಿದೆ.  ಮುಂಬರುವ ದಿನಗಳಲ್ಲಿ ನಾನು ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಇದು ಇನ್ನೂ ವಿಕೋಪಕ್ಕೆ ಹೋದಾಗ ಬಿಜೆಪಿ ನಾಯಕರು ಬಂದು ಇಲ್ಲ ಇಲ್ಲ ಅದು ಬಿಜೆಪಿ ಕಾರ್ಯಕರ್ತರು ಮಾಡಿದ್ದಲ್ಲ ಯಾರೋ ಜಿಹಾದಿಗಳು ಮಾಡಿರಬೇಕೆಂದು ಹೇಳಬಹುದೇನೋ. ನಾನು ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ದೂರು ಕೊಡುತ್ತಿದ್ದೇನೆ ಅವರು ನ್ಯಾಯ ಕೊಡಿಸುವಲ್ಲಿ ವಿಫಲರಾದರೆ ಮುಂದೆ ಯಾವ ಹೆಜ್ಜೆ ಇಡಬೇಕೆಂಬ ಅರಿವು ನನಗಿದೆ ಎಂದು ಪ್ರತಿಭಾ ಕುಳಾಯಿ ಟ್ರೋಲಿಗರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು