News Karnataka Kannada
Monday, April 29 2024
ಮಂಗಳೂರು

ಮಂಗಳೂರು: ಇಂಡಿಯಾ ಬುಕ್ ಆಫ್‌ ರೆಕಾರ್ಡ್‌ನಲ್ಲಿ ಹೆಸರು ದಾಖಲಿಸಿದ ಈಜುಪಟು

Book Of Record
Photo Credit : News Kannada

ಮಂಗಳೂರು: ಮಂಗಳೂರಿನ ಈಜುಪಟುವೊಬ್ಬರು ಇದೀಗ ತನ್ನ ಹೆಸರನ್ನು ಇಂಡಿಯಾ ಬುಕ್ ಆಫ್‌ ರೆಕಾರ್ಡ್‌ನಲ್ಲಿ ದಾಖಲಿಸುವ ಮೂಲಕ ಹೆಗ್ಗಳಿಕೆ ಮೂಡಿಸಿದ್ದಾರೆ.

ಇವರೇ ಕೆ ಚಂದ್ರಶೇಖರ ರೈ ಸೂರಿಕುಮೇರು ತನ್ನ 49ರ ಹರೆಯದಲ್ಲಿ ಸೆಪ್ಟೆಂಬರ್ 15ರಂದು ತನ್ನ ಕೌಶಲ್ಯ ತೋರಿದ್ದಾರೆ. ಮುಂಭಾಗಕ್ಕೆ ಒಂದೇ ಉಸಿರಿನಲ್ಲಿ 29 ಮುಂಭಾಗದ ತಿರುವು ಮಾಡಿದ್ದೇನೆ. ಇದನ್ನು ಇಂಡಿಯನ್‌ ಬುಕ್‌ ಆಫ್‌ ರೆಕಾರ್ಡ್‌ಗೆ ಅಪ್ಲೈ ಮಾಡಿದ್ದು, ಇದೀಗ ನನಗೆ ಪ್ರಶಸ್ತಿ ಬಂದಿದೆ ಎಂದವರು ಹೇಳಿದ್ದಾರೆ.

ಇದೀಗ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ನಿಂದ ಪ್ರಮಾಣ ಪತ್ರ ಮತ್ತು ಪದಕಕ್ಕೆ ಇವರು ಭಾಜನರಾಗಿದ್ದಾರೆ. ಇವರು ರಾಷ್ಟ್ರೀಯ ಮಟ್ಟದ ಈಜುಪಟು ಹಾಗು ರಾಷ್ಟ್ರೀಯ ಮಟ್ಟದ ಪೋಲ್ ವಾಲ್ಟ್ ಆಟಗಾರ.

ಪ್ರಸ್ತುತ ಇವರು ಮಂಗಳೂರು ಮಹಾನಗರ ಪಾಲಿಕೆ ಈಜುಕೋಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಸಾರ್ವಜನಿಕರಿಗೆ ಈಜು ತರಬೇತಿ ಯ ಮಾರ್ಗದರ್ಶನ ನೀಡುತ್ತಿರುವರು.ಇದ್ರ ಸಮಗ್ರ ಮಾಹಿತಿಯನ್ನ ಪತ್ರಿಕಾಗೋಷ್ಠಿಯಲ್ಲಿ ಸಂಘಟಕರು ಮಾಹಿತಿಯನ್ನ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು