News Karnataka Kannada
Tuesday, April 30 2024
ಮಂಗಳೂರು

ಕರ್ಣಾಟಕ ಬ್ಯಾಂಕ್, ಬಜಾಜ್ ಅಲಿಯನ್ಸ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್‌ಗಳ ಒಡಂಬಡಿಕೆ

MoU between Karnataka Bank and Bajaj Allianz Insurance Company Limited
Photo Credit : News Kannada

ಮಂಗಳೂರು: ಕರ್ಣಾಟಕ ಬ್ಯಾಂಕ್ ತನ್ನ ಗ್ರಾಹಕರಿಗೆ ಜೀವ ವಿಮಾ ಉತ್ಪನ್ನಗಳನ್ನು ವಿತರಿಸಲು ಭಾರತದ ಪ್ರಮುಖ ಜೀವ ವಿಮಾ ಸಂಸ್ಥೆಗಳಲ್ಲಿ ಒಂದಾದ ಬಜಾಜ್ ಅಲಿಯಾನ್ಸ್ ಲೈಫ್ ಇನ್ಶುರೆನ್ಸ್ ಕಂಪೆನಿಯೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದೆ.

ಗ್ರಾಹಕರ ವೈವಿಧ್ಯಮಯ ಹಣಕಾಸು ಅಗತ್ಯಗಳನ್ನು ಪೂರೈಸುವಲ್ಲಿ ಎರಡೂ ಸಂಸ್ಥೆಗಳಿಗೆ ಈ ಒಡಂಬಡಿಕೆಯಿಂದ ಅನುಕೂಲವಾಗಲಿದೆ. ಈ ಸಹಯೋಗವು ಆರ್ಥಿಕ ಭದ್ರತೆ ಮತ್ತು ಜೀವರಕ್ಷಣಾ ವಿಮೆಯನ್ನು ಬಯಸುವ ಕರ್ಣಾಟಕ ಬ್ಯಾಂಕಿನ ಗ್ರಾಹಕರಿಗೆ ಹಲವಾರು ಪ್ರಯೋಜನಗಳನ್ನು ದೊರಕಿಸಿಕೊಡಲಿದೆ. ಗ್ರಾಹಕರಿಗೆ ನವೀನ ಮತ್ತು ಗ್ರಾಹಕ-ಕೇಂದ್ರಿತ ಜೀವ ವಿಮಾ ಉತ್ಪನ್ನಗಳನ್ನು ವಿತರಿಸಲು ಇದರಿಂದ ಅನುಕೂಲವಾಗಲಿದೆ.

ಹೊಸ ಒಡಂಬಡಿಕೆಯ ಕುರಿತು ಮಾತನಾಡಿದ ಕರ್ಣಾಟಕ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಶ್ರಿಕೃಷ್ಣನ್ ಎಚ್, “ನಮ್ಮ ಗ್ರಾಹಕರ ಹಣಕಾಸು ಸ್ಥಿತಿಗತಿ, ಹೂಡಿಕೆ ಮತ್ತು ಜೀವ ವಿಮಾ ಅಗತ್ಯತೆಗಳು ವಿಕಸನಗೊಳ್ಳುತ್ತಿವೆ. ಕರ್ಣಾಟಕ ಬ್ಯಾಂಕ್ ತನ್ನ ಗ್ರಾಹಕರಿಗೆ ಸಮರ್ಪಕವಾದ ಹಣಕಾಸು ಉತ್ಪನ್ನಗಳು ಮತ್ತು ಅವಕಾಶಗಳನ್ನು ನೀಡುವಲ್ಲಿ ಸತತವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಬದ್ಧತೆಗೆ ಅನುಗುಣವಾಗಿ, ನಾವು ಬಜಾಜ್ ಅಲಿಯಾನ್ಸ್ ಲೈಫ್ ಜೊತೆ ಪಾಲುದಾರಿಕೆ ಹೊಂದಿದ್ದೇವೆ. ದೇಶಾದ್ಯಂತದ ಗ್ರಾಹಕರು ಅವರ ಅಗತ್ಯಗಳಿಗೆ ಅನುಗುಣವಾದ ಜೀವವಿಮೆಯನ್ನು ಅವರಿಗೆ ಲಭ್ಯವಿರುವ ಹಣಕಾಸು ಪರಿಧಿಯಲ್ಲಿ ಆಯ್ಕೆಮಾಡಿಕೊಳ್ಳಲು ಈ ಒಪ್ಪಂದ ಸಹಾಯವಾಗಲಿದೆ”.

ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕ್‌ನ ಎಕ್ಸೆಕ್ಯೂಟಿವ್ ಡೈರೆಕ್ಟರ್ ಶೇಖರ್ ರಾವ್, “ಬಜಾಜ್ ಅಲಿಯಾನ್ಸ್ ಲೈಫ್ ಇನ್ಶುರೆನ್ಸ್ ಕಂಪೆನಿಯೊಂದಿಗೆ ಪಾಲುದಾರರಾಗಲು ಉತ್ಸುಕರಾಗಿದ್ದೇವೆ. ಈ ಒಡಂಬಡಿಕೆಯು ಗ್ರಾಹಕ ಸ್ನೇಹಿ ಆಗಿದೆ. ಎಲ್ಲಾ ವಿಧದ ಗ್ರಾಹಕರನ್ನು ತಲುಪುವಲ್ಲಿ ಇದು ಬ್ಯಾಂಕಿಗೆ ಸಹಕಾರಿಯಾಗಿದೆ. ಡಿಜಿಟಲ್ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು, ನಮ್ಮ ಗ್ರಾಹಕರು ಮತ್ತು ಅವರ ಕುಟುಂಬಗಳ ಯೋಗಕ್ಷೇಮ ಮತ್ತು ಸುರಕ್ಷತೆಯನ್ನು ಬಲಪಡಿಸುವಲ್ಲಿ ನಾವು ಸದಾ ಬದ್ಧರಾಗಿದ್ದೇವೆ.

ಪಾಲುದಾರಿಕೆಯ ಕುರಿತು ಮಾತನಾಡಿದ ಬಜಾಜ್ ಅಲಿಯಾನ್ಸ್ ಲೈಫ್ ಇನ್ಶೂರೆನ್ಸ್ನ ಎಂಡಿ ಮತ್ತು ಸಿಇಒ ತರುಣ್ ಚುಗ್, “ಜೀವ ವಿಮೆಯು ಇಂದಿನ ಅತೀ ಅವಶ್ಯಕ ಆರ್ಥಿಕ ಅವಕಾಶವಾಗಿದ್ದು, ಇದು ಗ್ರಾಹಕರಿಗೆ ತಮ್ಮ ದೀರ್ಘಾವಧಿಯ ಗುರಿಗಳನ್ನು ವ್ಯಾಪಕವಾದ ಹೂಡಿಕೆ ಆಯ್ಕೆಗಳ ಮೂಲಕ ತಲುಪಲು ಸಹಾಯ ಮಾಡುತ್ತದೆ. ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್‌ನೊಂದಿಗಿನ ಸಹಭಾಗಿತ್ವವು ನಮ್ಮ ಸಂಸ್ಥೆಯ ಮಹತ್ವದ ಮೈಲಿಗಲ್ಲಾಗಿದೆ. ಈ ಪಾಲುದಾರಿಕೆಯು ಗ್ರಾಹಕರ ಆರ್ಥಿಕ ಆಶೋತ್ತರಗಳನ್ನು ಪೂರೈಸಲು ಮತ್ತು ಅವರ ಆರ್ಥಿಕ ಸಬಲೀಕರಣಕ್ಕೆ ಅನುವು ಮಾಡಿಕೊಡುತ್ತದೆ ಎನ್ನುವ ವಿಶ್ವಾಸ ನನಗಿದೆ” ಎಂದು ನುಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು