News Karnataka Kannada
Saturday, May 04 2024
ಮಂಗಳೂರು

ಮಂಗಳೂರು: ಗಂಜಿ ಕಾಮಗಾರಿಗಳಿಗೆ ಪಾಲಿಕೆ ಸಾಲ ಮಾಡಬೇಕೇ !

Lobo
Photo Credit : R Bhat

ಮಂಗಳೂರು: ಮಹಾನಗರ ಪಾಲಿಕೆಯ 60 ವಾರ್ಡ್ ಗಳಲ್ಲಿ ಗಂಜಿ ಕಾಮಗಾರಿಗಳನ್ನು ಮಾಡುವುದಕ್ಕೆ 38. 82 ಕೋಟಿ ರೂಪಾಯಿ ಸಾಲ ಮಾಡಿರುವ ಮಹಾನಗರ ಪಾಲಿಕೆ ಆಡಳಿತ ದಿಕ್ಕುತಪ್ಪುತ್ತಿರುವುದಕ್ಕೆ ಜೀವಂತ ನಿದರ್ಶನ. ಪಾಲಿಕೆಯ ಈ ಜನವಿರೋಧಿ ಆಡಳಿತವನ್ನು ತೀವ್ರವಾಗಿ ಖಂಡಿಸಲಾಗುತ್ತದೆ. ಡಂಬಲ್ ಎಂಜಿನ್ ಸರ್ಕಾರದಿಂದ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿ ಎಂದು ಮಾಜಿ ಶಾಸ ಜೆ.ಆರ್. ಲೋಬೊ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದಿಂದ (ಕೆಯುಐಡಿಎಫ್‌ಸಿ) ಸಣ್ಣಪುಟ್ಟ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮೊದಲು ಪಾಲಿಕೆಗೆ ವಿವಿಧ ಮೂಲಗಳ ಮೂಲಕ ಬರುವ ಆದಾಯದ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದರು.

ಫುಟ್‌ಪಾತ್‌, ಒಳಚರಂಡಿಗಳು ಮತ್ತು ತಡೆಗೋಡೆಗಳಂತಹ ಸಣ್ಣ ಗಂಜಿ ಕಾಮಗಾರಿಗಳನ್ನು ಸಾಲ ಪಡೆದು ಮಾಡುವ ಬದಲು ಪಾಲಿಕೆಯ ಆಂತರಿಕ ನಿಧಿಯನ್ನು ಬಳಸಿ ನಿರ್ಮಿಸಬೇಕು. ದೀರ್ಘಾವಧಿಯಲ್ಲಿ ಪಾಲಿಕೆಗೆ ಆದಾಯವನ್ನು ತರಲು ಸಹಾಯ ಮಾಡುವ ಆಸ್ತಿ ಸೃಷ್ಟಿಗೆ ಸಹಾಯ ಮಾಡುವ ಕೆಲಸಗಳನ್ನು ಕೈಗೊಳ್ಳಲು ಸಾಲ ಪಡೆಯಬೇಕು ಎಂದರು.

ಕೆಯುಐಡಿಎಫ್‌ಸಿಯಿಂದ ಸಾಲ ಪಡೆವ ಮಹಾನಗರ ಪಾಲಿಕೆಯ ಅವೈಜ್ಞಾನಿಕ ನಿರ್ಧಾರ ಕಾನೂನು ಉಲ್ಲಂಘನೆ ಆಗಿದೆ. ಕೆಯುಐಡಿಎಫ್‌ಸಿಯು ಆಸ್ತಿ ಸೃಷ್ಟಿ ಯೋಜನೆಗಳಿಗೆ ಮಾತ್ರ ಸಾಲವನ್ನು ಮಂಜೂರು ಮಾಡಬಹುದು. ಸಣ್ಣಪುಟ್ಟ ಕೆಲಸಗಳಿಗೆ ಸಾಲ ಪಡೆದರೆ ಸ್ಥಳೀಯ ಸಂಸ್ಥೆಯ ಆರ್ಥಿಕ ಸ್ಥಿತಿ ದಿಕ್ಕು ತಪ್ಪುತ್ತದೆ ಎಂದು ಹೇಳಿದರು.

ಪಾಲಿಕೆಯ ಕೌನ್ಸಿಲ್‌ನಲ್ಲಿ ಬಿಜೆಪಿ ಆಡಳಿತ ಪಕ್ಷವೂ ಸ್ಥಳೀಯ ಸಂಸ್ಥೆಯ ಆರ್ಥಿಕ ಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಬೇಕು. ಪ್ರತಿಪಕ್ಷಗಳ ಬೇಡಿಕೆಗಳಿಗೆ ಸ್ಪಂದಿಸಲು ಪಾಲಿಕೆ ನಿರಾಕರಿಸುತ್ತಿರುವುದು ಏಕೆ ಎಂದು ಪ್ರಶ್ನೆ ಮಾಡಿದರು.

ನಗರದಲ್ಲಿ ಆಸ್ತಿ ತೆರಿಗೆಯನ್ನು ವೈಜ್ಞಾನಿಕ ರೀತಿಯಲ್ಲಿ ಸಂಗ್ರಹಿಸುವ ಮೂಲಕ ಮತ್ತು ನಿಯಮಾವಳಿ ಉಲ್ಲಂಘಿಸಿದ ಕಟ್ಟಡಗಳಿಂದ ದುಪ್ಪಟ್ಟು ತೆರಿಗೆ ಸಂಗ್ರಹಿಸುವ ಮೂಲಕ ಪಾಲಿಕೆ ತನ್ನ ಆದಾಯ ಸಂಗ್ರಹವನ್ನು ಹೆಚ್ಚಿಸಬಹುದು. ಆದಾಯ ಸಂಗ್ರಹದಲ್ಲಿನ ಸೋರಿಕೆಯನ್ನು ಕಂಡು ಹಿಡಿಯುವ ಕೆಲಸವನ್ನು ಪಾಲಿಕೆ ಮಾಡಬೇಕು ಎಂದರು ಒತ್ತಾಯಿಸಿದರು.

ಪಾಲಿಕೆ ವಿರೋಧ ಪಕ್ಷದ ನಾಯಕ ನವೀನ್ ಡಿಸೋಜ, ಶಶಿಧರ ಹೆಗ್ಡೆ, ವಿಶ್ವಾಸ್ ಕುಮಾರ್ ದಾಸ್, ಭಾಸ್ಕರ್ ಮೊಯಿಲಿ, ಸುಧೀರ್ ಸೇರಿದಂತೆ ಹಲವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು