News Karnataka Kannada
Sunday, May 05 2024
ಮಂಗಳೂರು

ಧರ್ಮಸ್ಥಳ: ಡಾ| ಹೆಗ್ಗಡೆಯವರಿಂದ ಮಗಳು ಚಿತ್ರದ ಧ್ವನಿಸುರುಳಿ ಬಿಡುಗಡೆ

Magalu
Photo Credit : By Author

ವೇಣೂರು: ಕನ್ನಡ ಚಲನಚಿತ್ರ ಮಗಳು ಇದರ ಧ್ವನಿಸುರುಳಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಸೋಮವಾರ ಶ್ರೀಕ್ಷೇತ್ರದಲ್ಲಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಬಿಷಪ್ ಹೌಸ್‌ನ ಫಾ| ಜೋಸೆಫ್ ವಲಿಯಪರಂಬಿಲ್, ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರಾದ ತೋಮಸ್ ಎಂ.ಎಂ., ನಟಿ ಭಾರ್ಗವಿ ಆರ್. ಶೇಟ್, ರಜನಿ ಎ. ಉಜಿರೆ, ಪಿ. ಧರಣೇಂದ್ರ ಕುಮಾರ್, ವಿದ್ಯಾನಂದ ಜೈನ್ ಎರ್ಮೋಡಿ, ಸಂದೇಶ್ ಬಡಕೋಡಿ, ಇಸ್ಮಾಯಿಲ್ ಕೆ. ಪೆರಿಂಜೆ, ಪುಷ್ಪಾ ಉಜಿರೆ, ಚಿತ್ರದ ಛಾಯಾಗ್ರಾಹಕ ಶಶಿಧರ ದೇವಾಡಿಗ, ಪತ್ರಕರ್ತ ಪದ್ಮನಾಭ ವೇಣೂರು, ಜೋಸೆಫ್ ಎಂ.ಎಂ. ಮತ್ತಿತರರು ಜತೆಗಿದ್ದರು.

ಚಿತ್ರದ ನಿರ್ಮಾಣಪಕ ಮತ್ತು ನಿರ್ದೇಶಕರಾಗಿರುವ ಬೆಳ್ತಂಗಡಿ ತಾಲೂಕಿನ ವೇಣೂರು ನಿವಾಸಿಯಾಗಿರುವ ತೋಮಸ್ ಎಂ.ಎಂ. ಆವರು ಮೂಲತಃ ಕೇರಳದ ಕಣ್ಣೂರಿನವರು. ಕಳೆದ ೧೫ ವರ್ಷಗಳಿಂದ ವೇಣೂರಿನಲ್ಲಿ ಕುಟುಂಬ ಸಮೇತರಾಗಿ ನೆಲೆಸಿದ್ದಾರೆ. ರಬ್ಬರ್ ಟ್ಯಾಪಿಂಗ್ ವೃತ್ತಿ ಮಾಡುತ್ತಿದ್ದ ಇವರು ಚಿತ್ರಕಲೆಯಲ್ಲಿ ನೈಪುಣ್ಯತೆಯನ್ನು ಬೆಳೆಸಿಕೊಂಡಿದ್ದರು. ಗಾಡ್ ಗಿಫ್ಟ್ ಎಂಬಂತೆ ಬೆಳ್ತಂಗಡಿ ಚರ್ಚ್ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತು ಲಾಲ, ಮಡಂತ್ಯಾರು, ವೇಣೂರು, ಮೂಡಬಿದಿರೆ ಮುಂತಾದ ಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಈ ಸಂದರ್ಭ ಮಕ್ಕಳ ವಿವಿಧ ಕೌಟುಂಬಿಕ ಸಮಸ್ಯೆಗಳನ್ನು ಹತ್ತಿರದಿಂದ ಅರಿತು ಅವರ ಪೋಷಕರಿಗೊಂದು ಭಾಂದವ್ಯದ ಸಂದೇಶ ನೀಡಬೇಕೆಂಬ ಯೋಚನೆ ಬಂದಾಗ ಅವರಿಗೆ ಒಲಿದ ಮಾರ್ಗವೇ ಮಗಳು ಚಿತ್ರದ ನಿರ್ಮಾಣ.

ಚಿತ್ರದ ಪ್ರಮುಖ ಪಾತ್ರದಲ್ಲಿ ಕುಸಲ್ದ ರಸೆ ನವೀನ್ ಡಿ ಪಡೀಲ್ ನಟಿಸಿದ್ದರೆ ಉಳಿದಂತೆ ಪಕ್ಕಾ ಹಳ್ಳಿ ಕಲಾವಿದವರು ಎನ್ನುವುದೇ ವಿಶೇಷ. ಚಿತ್ರದ ರಾಮು ಪಾತ್ರದಲ್ಲಿ ನಿರ್ದೇಶಕ ತೋಮಸ್ ಎಂ.ಎಂ., ಮಗಳ ಪಾತ್ರದಲ್ಲಿ ಭಾರ್ಗವಿ ಆರ್. ಶೇಟ್, ತಾಯಿ ಪಾತ್ರದಲ್ಲಿ ಸವಿತಾ ಪ್ಲಾವ್ಯಾ ನಟಿಸಿ ಚಿತ್ರಕ್ಕೆ ಜೀವ ತುಂಬಿದ್ದಾರೆ. ಉಳಿದಂತೆ ಸುಂದರ ಹೆಗ್ಡೆ ಬಿ.ಇ., ಧರಣೇಂದ್ರ ಕುಮಾಲ್, ಶ್ರವಣ ಕುಮಾರಿ, ಅರ್ಪಿತಾ ಕೋಟ್ಯಾನ್, ಶ್ರೀಮಾ ಉಜಿರೆ, ಶರಣ್ ಶೆಟ್ಟಿ ವೇಣೂರು, ಆನಂದ ಗಾಂಧಿನಗರ, ಬಿಜಿಲ್ ಮ್ಯಾಥ್ಯೂ, ತನಿಷಾ ಕಾರ್ಕಳ ಮುಂತಾದವರು ನಟಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು