News Karnataka Kannada
Saturday, April 27 2024
ಮಂಗಳೂರು

ಮಂಗಳೂರು: ಪ್ರಭುತ್ವ ಮತ್ತು ಜನತೆ ಆದಿವಾಸಿ ಕೊರಗ ಸಮುದಾಯಕ್ಕೆ ಚಾರಿತ್ರಿಕವಾಗಿ ಅನ್ಯಾಯವೆಸಗಿದೆ

Mangaluru: The state and the people have historically done injustice to the Adivasi Koraga community.
Photo Credit : By Author

ಮಂಗಳೂರು: ಶತಶತಮಾನಗಳಿಂದ ಕರಾವಳಿ ಕರ್ನಾಟಕದ ಮೂಲನಿವಾಸಿಗಳಾಗಿ ಇಲ್ಲಿಯ ನೆಲ,ಜಲ ಮತ್ತು ಅರಣ್ಯ ಸಂಪತ್ತಿನ ಒಡೆಯರಾದ ಕೊರಗ ಸಮುದಾಯವನ್ನು ಮೂಲೆಗುಂಪು ಮಾಡಿ, ಶೊಷಣೆಗೆ ಗುರಿ ಮಾಡಿ, ಅಮಾನವೀಯವಾಗಿ ನಡೆಸಿಕೊಂಡ ಪ್ರಭುತ್ವ ಮತ್ತು ಜನತೆ ಚಾರಿತ್ರಿಕವಾಗಿ ಅನ್ಯಾಯವೆಸಗಿದೆ. ವಿಚಿತ್ರವೆಂದರೆ ಸ್ವಾತಂತ್ರ್ಯ ದೊರೆತು 75 ವರ್ಷ ಕಳೆದರೂ ,ಸಂವಿಧಾನಿಕ ಹಕ್ಕುಗಳು ಇದ್ದರೂ ಇಂದೂ ಕೂಡಾ ಇದೇ ಮನಸ್ಥಿತಿ ಮುಂದುವರಿಯುತ್ತಿರುವುದು ದುಃಖದ ಸಂಗತಿ, ಎಂದು ಸಿಐಟಿಯು ಕಾರ್ಮಿಕ ಸಂಘಟನೆಯ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಟೀಕಿಸಿದರು.

ಅವರು ಕರ್ನಾಟಕ ಆದಿವಾಸಿ ಹಕ್ಕುಗಳ ಸಮಿತಿಯ ಮಂಗಳ ಜ್ಯೋತಿ ಘಟಕದ ನೇತೃತ್ವದಲ್ಲಿ ನಡೆದ ಒಂದು ದಿನದ ಪಾದಯಾತ್ರೆಯ ಸಮಾರೋಪ ಭಾಷಣ ಮಾಡುತ್ತಾ, ಮಹಾನಗರ ಪಾಲಿಕೆ, ಜಿಲ್ಲಾಡಳಿತ ಮತ್ತು ಸರಕಾರ ಆಗಾಗ ಕೇವಲ ಅಗ್ಗದ ಪ್ರಚಾರಕ್ಕಾಗಿ ಕೊರಗ ಸಮುದಾಯದ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆಯೇ ವಿನಃ ನಿಜವಾದ ಇಚ್ಚಾ ಶಕ್ತಿ ಇಲ್ಲ ಎಂದು ಹೇಳಿದರು,.ನಿವೇಶನ ರಹಿತ 33 ಕೊರಗ ಕುಟುಂಬಗಳಿಗೆ ಐದು ವರ್ಷ ಕಳೆದರೂ ನಿವೇಶನ ಹಸ್ತಾಂತರವಾಗಳೀ ದಾಖಲೆಗಳಾಗಲೀ ನೀಡದಿರುವುದರ ಹಿಂದೆ ಈ ದೃಷ್ಟಿಕೋನವೇ ಅಡಗಿದೆ ಎಂದು ಹೇಳಿದರು.

ಉಡುಪಿ ಜಿಲ್ಲಾ ಕೊರಗ ಸಮುದಾಯದ ಮುಂದಾಳು ಹಾಗೂ ಕರ್ನಾಟಕ ಆದಿವಾಸಿ ಹಕ್ಕುಗಳ ಸಮಿತಿಯ ಉಡುಪಿ ಜಿಲ್ಲಾ ಅಧ್ಯಕ್ಷರಾದ ಶ್ರೀಧರ್ ನಾಡಾ ರವರು ಮಾತಾನಾಡುತ, ಆದಿವಾಸಿ ಕೊರಗ ಸಮೂದಾಯದ ಭೂಮಿಯ ಪ್ರಶ್ನೆ ಮೂಲಭೂತ ಪ್ರಶ್ನೆಯಾಗಿದ್ದು ಕೇವಲ ಎರಡೂವರೆ ಸೆಂಟ್ಸ್ ನಿವೇಶನ ನೀಡಲು ಐದು ವರ್ಷಗಳ ಕಾಲ ಸತಾಯಿಸಿದ ನಗರ ಪಾಲಿಕೆ ಜನ ವಿರೋಧಿ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.ಉಭಯ ಜಿಲ್ಲೆಗಳ ಆದಿವಾಸಿ ಹಕ್ಕುಗಳ ಸಮಿತಿಯು ಮಹಮ್ಮದ್ ಪೀರ್ ವರದಿಯ ಪ್ರಕಾರ ಎರಡೂವರೆ ಎಕರೆ ಕೃಷಿ ಭೂಮಿ ಮಂಜೂರಾತಿಗಾಗಿ ಜಂಟಿ ಹೋರಾಟ ರೂಪಿಸಲಿದೆ ಎಂದು ಹೇಳಿದರು.

ದ.ಕ.ಜಿಲ್ಲಾ,ಪೆನ್ಸನ್ ದಾರರ ಸಂಘ ಇದರ ಜಿಲ್ಲಾ ಪ್ರಧನ ಕಾರ್ಯದರ್ಶಿ ಸುಕುಮಾರ್ ತೊಕ್ಕೋಟ್ಟು ರವರು ಮಾತನಾಡುತ್ತಾ ಭುಮಿಯ ಮೂಲ ಹಕ್ಕುದಾರರೇ ಭೂಮಿಗಾಗಿ ಹೋರಾಟ ಮಾಟಬೇಕಾದ ದುಸ್ಥಿತಿ ಬಂದಿರುವುದು ನಾಚಿಕೆಗೇಡು ಎಂದು ಹೇಳಿದರು.

ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕರಾದ ಡಾ,ಕೃಷ್ಣಪ್ಪ ಕೊಂಚಾಡಿಯವರು ಮಾತನಾಡುತಾ, ಮಂಗಳೂರು ಮಹಾನಗರ ಪಾಲಿಕೆಯು ನಿವೇಶನ ಹಂಚಿಕೆ, ನೇಮಕಾತಿ ಮತ್ತು ವಿವಿಧ ಯೋಜನೆಗಳಲ್ಲಿ ನಿರಂತರವಾಗಿ ಕೊರಗ ಸಮುದಾಯಕ್ಕೆ ಅನ್ಯಾಯವೆಸಗಿದೆ. ಪ್ರಸ್ತುತ 33 ಕೊರಗ ಕುಟುಂಬಗಳ ಮನೆ ವಾಸ್ತವಿಕವಾಗಿ ಹಸ್ತಾಂತರ ಆಗುವವರೆಗೆ ನಿರಂತರ ಹೋರಾಟ ನಡೆಸಲಾಗುವುದೆಂದು ಘೋಷಿಸಿದರು.

ಅಖಿಲ ಭಾರತ ವಕೀಲರ ಸಂಘದ ಜಿಲ್ಲಾ ಮುಂದಾಳು ಹಾಗೂ ಕಾನಾನು ಸಲಹೆಗಾರರಾದ ಮನೋಜ್ ವಾಮಂಜೂರುರವರು ಬಹಿರಂಗ ಸಭೆಯಲ್ಲು ಭಷಣ ಮಾಡುತ್ತಾ ಕೊರಗ ಸಮುದಾಯದ ನ್ಯಾಯೀಚಿತ ಹೋರಾಟಕ್ಕೆ ಕಾನೂನಿನಬಲವಾದ ಬೆಂಬಲವಿದೆ ಎಂದು ಹೇಳಿದರು.

ಕಾರ್ಯಕ್ರಮದ ನಿರ್ವಹಣೆಯನ್ನು ಸಂಘಟನೆಯ ಜಿಲ್ಲಾ ಮಾರ್ಗದರ್ಶಕರಾದ ಯೋಗಿಶ್ ಜಪ್ಪಿನಮೊಗರು ಮಾಡಿದರು. ಪಾದಯಾತ್ರೆಯ ನಾಯಕ್ವವನ್ನು ಅಧ್ಯಕ್ಷರಾದ ಕರಿಯ ಕೆ, ಶೇಖರ್, ಪುನೀತ್, ಗಣೇಶ್ , ವಿನೋದ್ ,ಕೃಷ್ಣಪ್ಪ, ವಿಗ್ನೆಶ್, ವಿಕ್ಯಾತ್, ಮಂಜುಳಾ ಶಶಿಕಲಾ, ಯಶೋಧ. ಪೂರ್ಣಿಮಾ ತುಳಸಿ, ಮೊದಲಾದವರು ವಹಿಸಿದ್ದರು. ಕೊನೆಯಲ್ಲಿ ಸಹಸಂಚಾಲಕಾದ ರವೀಂದ್ರ ಮಂಗಳಜ್ಯೋತಿ ಇವರು ವಂದಿಸಿದರು. ಕೊನೆಯಲ್ಲಿ ಮೇಯರ್ ಮತ್ತು ಕಮೀಷರ‍್ರವರಿಗೆ ಸಾಮೂಹಿಕ ಮನವಿ ಅರ್ಪಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
15229
Jaya Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು