ಮಂಗಳೂರು: ಹ್ಯುಮಾನಿಟಿ ಫಸ್ಟ್ ಫೌಂಡೇಶನ್ ಮತ್ತು ಲೈಟಿ ಅಪೋಸ್ಟೋಲೇಟ್ ಕಮಿಷನ್, ಆಂಜೆಲೋರ್ ವತಿಯಿಂದ ‘ಫಿಫ್ತ್ ಮೈಕ್ ಸೈಮನ್ ನೈಟ್’ ಸಂಗೀತ ಕಚೇರಿ ಕಾರ್ಯಕ್ರಮ ಮಂಗಳೂರಿನ ಡಾನ್ ಬಾಸ್ಕೊ ಸಭಾಂಗಣದಲ್ಲಿ ನೆರವೇರಿತು.
ಸಂಗೀತ ಕಚೇರಿಯನ್ನು ಹೆಚ್ ಎಫ್ ಎಫ್ ನ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ದಿವಂಗತ ಶರೋನ್ ಆಳ್ವಾ ಅವರಿಗೆ ಸಮರ್ಪಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಅಂಜೆಲೂರು ಚರ್ಚ್ ಧರ್ಮ ಗುರು ಫಾ. ವಿಲಿಯಂ ಮೆನೆಜಸ್, ಡಾನ್ ಬೋಸ್ಕೋ ಗ್ರೂಪ್ ಪ್ರೊಪ್ರೈಟರ್ ಡೇವಿಡ್ ಡಿ ಸೋಜಾ, ಪ್ರವೀಣ್ ತೌರೊ, ಎಲಿಯಾಸ್ ಫೆರ್ನಾಂಡಿಸ್, ಸಂತೋಷ್ ಸಿಕ್ವೇರಾ, ರಿಚರ್ಡ್ ಮೊರಾಸ್, ಸ್ಟಾನ್ಲಿ ಬಂಟ್ವಾಳ, ಮತ್ತಿತರರು ಉಪಸ್ಥಿತರಿದ್ದರು.