News Karnataka Kannada
Sunday, May 05 2024
ಮಂಗಳೂರು

ಮಂಗಳೂರು: ಇಂದು ಶತಮಾನೋತ್ತರ ದಶಮಾನೋತ್ಸವದ ಸಂಭ್ರಮದಲ್ಲಿದೆ ಎಂಸಿಸಿ ಬ್ಯಾಂಕ್

Acc
Photo Credit : News Kannada

ಮಂಗಳೂರು: 1912 ರಲ್ಲಿ ಆರಂಭವಾದ ಎಂಸಿಸಿ ಬ್ಯಾಂಕ್ ಇಂದು ಶತಮಾನೋತ್ತರ ದಶಮಾನೋತ್ಸವ (110ನೇ ವರ್ಷ) ದ ಸಂಭ್ರಮದಲ್ಲಿದೆ. ಈ ಸಂಭ್ರಮಕ್ಕೆ ಬ್ಯಾಂಕಿನ ದೂರದರ್ಶಿ ಸ್ಥಾಪಕರು, ಷೇರುದಾರರು, ಬ್ಯಾಂಕಿನ ಹಿಂದಿನ ಅಧ್ಯಕ್ಷರು, ನಿರ್ದೇಶಕರು, ಸಿಬ್ಬಂದಿ ಮತ್ತು ಗ್ರಾಹಕರ ಕೊಡುಗೆ ಅಪಾರವಾಗಿದೆ‌.

2018 ರಲ್ಲಿ ಸಂಪೂರ್ಣ ಬಹುಮತದಿಂದ ಆಯ್ಕೆಯಾದ ಈ ಬ್ಯಾಂಕ್‌ನ ಆಡಳಿತ ಮಂಡಳಿಯು ಕೋವಿಡ್ ಸಂಕಷ್ಟಗಳ ನಡುವೆಯೂ ಪ್ರಸ್ತುತ ವರ್ಷ 8.27 ಕೋಟಿ ರುಪಾಯಿಗಳ ನಿವ್ವಳ ಲಾಭ ದಾಖಲಿಸಿದೆ.

ಇದು ಬ್ಯಾಂಕಿನ ಇತಿಹಾಸದಲ್ಲಿ ಪ್ರಥಮವಾದ ದೊಡ್ಡ ಲಾಭ ಗಳಿಕೆಯಾಗಿರುತ್ತದೆ. 2018ನೇ ಸಾಲಿನಲ್ಲಿದ್ದ ರೂ.510 ಕೋಟಿ ರೂಪಾಯಿಗಳ ವ್ಯವಹಾರವು ಪ್ರಸ್ತುತ ಸಾಲಿನ್ನಲ್ಲಿ 81 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.

ಅದೇ ರೀತಿ 2020 ರಲ್ಲಿ ಬ್ಯಾಂಕಿನ ನಿವ್ವಳ ಎನ್ ಪಿ ಎ 7.17% ಇದ್ದದ್ದು 2021 22 (ಪ್ರಸ್ತುತ) ಸಾಲಿನಲ್ಲಿ 1.60% ಗೆ ಇಳಿದಿದೆ. ಇದು ನಮ್ಮ ಅವಧಿಯ ಮಹತ್ವದ ಸಾಧನೆಯ ಜೊತೆಗೆ ಬ್ಯಾಂಕಿನ ಸುದೃಡತೆಯ ಸಂಕೇತವಾಗಿದೆ, ಈ ಸಾಧನೆಯಲ್ಲಿ ನಮ್ಮ ಷೇರುದಾರರ, ಗ್ರಾಹಕರ ಹಾಗೂ ಸಿಬ್ಬಂದಿಯ ಶ್ರಮ ದೊಡ್ಡದಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು