News Karnataka Kannada
Thursday, May 09 2024
ಮಂಗಳೂರು

ಮಂಗಳೂರು: ನನ್ನ ಹತ್ಯೆಯಾದಲ್ಲಿ ಸಂಘ ಪರಿವಾರ ಮುಖಂಡರೇ ಹೊಣೆ- ಸತ್ಯಜಿತ್‌

Mangaluru: Sangh Parivar leaders will be held responsible if I am killed: Satyajit
Photo Credit : Facebook

ಮಂಗಳೂರು: ಸರಕಾರ ನನಗೆ ನೀಡಿದ್ದ ಭದ್ರತೆಯನ್ನು ಹಿಂಪಡೆದಿದೆ. ನನ್ನ ಹತ್ಯೆ ನಡೆದರೆ ಅದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು, ಸಂಘ ಪರಿವಾರದ ಪ್ರಮುಖರೇ ಹೊಣೆ ಎಂದು ಹಿಂದು ಸಂಘಟನೆಯ ಮುಖಂಡ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಅವರು, ನನಗೆ ಪ್ರಾಣ ಬೆದರಿಕೆ ಇದ್ದುದರಿಂದ ಪೊಲೀಸರೇ ಭದ್ರತಾ ಸಿಬ್ಬಂದಿ ಒದಗಿಸಿದ್ದರು. ಹದಿನಾರು ವರ್ಷಗಳಿಂದ ಇದ್ದ ಸಿಬಂದಿಯನ್ನು ಈಗ ಚುನಾವಣೆ ನೆಪದಲ್ಲಿ ವಾಪಸ್ ಪಡೆಯಲಾಗಿದೆ. ನನ್ನ ರಿವಾಲ್ವರ್ ಕೂಡ ತೆಗೆದಿಟ್ಟುಕೊಂಡಿದ್ದಾರೆ. ಈ ಬಗ್ಗೆ ಗೃಹ ಸಚಿವರು, ಸಂಘ ಪರಿವಾರದ ಪ್ರಮುಖರಿಗೆ ಹೇಳಿದರೂ ಪ್ರಯೋಜನವಾಗಿಲ್ಲ. ನಾನು ಹಿಂದುತ್ವಕ್ಕಾಗಿ ರಾಷ್ಟ್ರ ಹಿತಕ್ಕಾಗಿ ನಡೆಸಿದ ಹೋರಾಟದಿಂದ ಬೆದರಿಕೆ ಕರೆಗಳು ಬಂದಿದ್ದೇ ಹೊರತು ನನ್ನ ವೈಯಕ್ತಿಕ ವ್ಯವಹಾರಕ್ಕಲ್ಲ ಎಂದರು.

ನನ್ನ ಬಾಯಿ ಮುಚ್ಚಿಸಲು ಇಂತಹ ಕ್ಷುಲ್ಲಕ ಕೆಲಸ ಮಾಡುತ್ತಿದ್ದಾರೆ. ಆದರೆ ನಾನು ಹೋರಾಟ ಮುಂದುವರೆಸುತ್ತೇನೆ. ರಾಜಕೀಯ ಅಪೇಕ್ಷೆ ಇಲ್ಲ. ನನ್ನ ಹತ್ಯೆಯಾದರೆ ಸಂಘ ಪರಿವಾರದ ಯಾವ ನಾಯಕರೂ ನನ್ನ ಅಂತಿಮ ದರ್ಶನಕ್ಕೆ ಬರಬಾರದು, ಶವ ಮೆರವಣಿಗೆ ಮಾಡಬಾರದು ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು