News Karnataka Kannada
Friday, May 03 2024
ಚಿಕಮಗಳೂರು

ಬೀರೂರು: ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಎಂ.ವಿನಾಯಕ್ ರಾಜೀನಾಮೆ

K M Vinayak resigns as Congress vice-president
Photo Credit : News Kannada

ಬೀರೂರು : ಹೊಸ ಮುಖ ಎಚ್.ಡಿ.ತಮ್ಮಯ್ಯ ಅವರಿಗೆ ಟಿಕೆಟ್ ಘೋಷಿಸಿರು ವುದನ್ನು ಖಂಡಿಸಿ ಜಿಲಾ ಕಾಂಗ್ರೆಸ್‌ ಉಪಾಧ್ಯಕ್ಷ ಹುದ್ದೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವ ತೊರೆಯುವುದಾಗಿ ಬೀರೂರು ಕೆ.ಎಂ.ವಿನಾಯಕ ತಿಳಿಸಿದರು.

ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಕಡೂರು ಮತ್ತು ತರೀಕೆರೆ ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆಕುರಿತು ಸಾಮಾಜಿಕ ನ್ಯಾಯದ ಅಡಿ ತರೀಕೆರೆಯಲ್ಲಿ ಲಿಂಗಾಯತರಿಗೆ ಟಿಕೆಟ್ ನೀಡಿದರೆ ಕಡೂರಿನಲ್ಲಿ ಕುರುಬರಿಗೆ, ಕಡೂರಿನಲ್ಲಿ ಲಿಂಗಾಯತರಿಗೆ ನೀಡಿದರೆ ತರೀಕೆರೆಯಲ್ಲಿ ಕುರುಬರಿಗೆ ಎಂದು ಪಾಲಿಸಿಕೊಂಡು ಬಂದ ನೀತಿಯನ್ನು ಬದಿಗೊತ್ತಿ ಎರಡೂ ಕ್ಷೇತ್ರಗಳಲ್ಲಿ ಕುರುಬ ಸಮುದಾಯಕ್ಕೆ ಮಣೆ ಹಾಕಲಾಗಿದೆ.

ಚಿಕ್ಕಮಗಳೂರಿನಲ್ಲಿ ಆಕಾಂಕ್ಷಿಗಳಾಗಿದ್ದ ಏಳೂ ಮಂದಿಯನ್ನು ಕಡೆಗಣಿಸಿ ಲಿಂಗಾಯತ ಎಂಬ ಕಾರಣಕ್ಕೆ ತಮ್ಮಯ್ಯ ಅವರಿಗೆ ಟಿಕೆಟ್ ಘೋಷಿಸಿರುವುದು ಪಕ್ಷ ನಿಷ್ಠರಿಗೆ ಅಸಮಾಧಾನಉಂಟು ಮಾಡಿರುವ ಕಾರಣ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು.

ಕಡೂರು ವಿಧಾನಸಭಾಕ್ಷೇತ್ರದಲ್ಲಿ ಕಳೆದ ೨೦ವರ್ಷಗಳಿಗಿಂತಲೂ ಅಧಿಕ ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುತ್ತಾ ಬರುತ್ತಿದ್ದೇನೆ.

ಕಳೆದ ಬಾರಿಯು ನಾನು ವಿಧಾನಸಭಾ ಚುನಾವಣೆಗೆ ನಿಲ್ಲಲು ಹರಸಾಹಸ ಪಟ್ಟರು ವರಿಷ್ಠರು ಟಿಕೇಟ್ ನೀಡಿರಲಿಲ್ಲ, ಈ ಬಾರಿಯಾದರೂ ನೀಡುತ್ತಾರೆಂಬ ನಿರೀಕ್ಷೆ ಇತ್ತು ಆದರೆ ಅದುಕೂಡ ಹುಸಿಯಾಯಿತು. ಪಕ್ಷ ನಿಷ್ಠೆ ಮಾಡುವವರಿಗೆ ಪಕ್ಷದಲ್ಲಿ ಬೆಲೆ ಇಲ್ಲ ಎಂದು ತಮ್ಮ ನಿಲುವಿನ ಬಗ್ಗೆ ಪ್ರಸ್ತಾಪಿಸಿದ ಅವರು. ನಿಮ್ಮ ರಾಜಕೀಯ ನಡೆಯ ಬಗ್ಗೆ ಪ್ರಶ್ನಿಸಿದಾಗ, ಈಗಾಗಲೇ ಕೆಲವು ಪಕ್ಷದ ನಾಯಕರು ಭೇಟಿ ಮಾಡಿ ಪಕ್ಷ ಸೇರುವಂತೆ ಮನವಿ ಮಾಡಿದ್ದಾರೆ. ನಾನು ಒಪ್ಪಿಲ್ಲ, ನನ್ನ ಅಭಿಮಾನಿಗಳು ಮತ್ತು ಕಾರ್ಯಕರ್ತರ ಸಭೆ ಕರೆದು ಬಳಿಕ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು