News Karnataka Kannada
Wednesday, May 01 2024
ಮಂಗಳೂರು

ಮಂಗಳೂರು: ಕರಾವಳಿಯ ಜಾನಪದ ಕಲೆಗಳಿಗೆ ಮತಗಟ್ಟೆಗಳಲ್ಲಿ ಜೀವಂತಿಕೆ

Folk arts of coastal areas come to life at polling booths
Photo Credit : News Kannada

ಮಂಗಳೂರು: ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಕರಾವಳಿಯಲ್ಲಿ ಮತದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹಲವು ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಜಿಲ್ಲೆಯ ಜನಜೀವನದಲ್ಲಿ ಹಾಸುಹೊಕ್ಕಾಗಿರುವ ಯಕ್ಷಗಾನ, ಕಂಬಳದ ಮಾದರಿಗಳನ್ನು ಅಲಂಕರಿಸಿ ಮತಗಟ್ಟೆಗಳನ್ನು ಶೃಂಗರಿಸುವ ಕೆಲಸ ನಡೆದಿದೆ. ಇದರೊಂದಿಗೆ ಸಖಿ ಮತಗಟ್ಟೆ, ಗೋಗ್ರೀನ್‌ ಮತಗಟ್ಟೆಗಳೂ ಗಮನ ಸೆಳೆಯುತ್ತಿವೆ. ನೀಲತರಂಗ, ಪರಂಪರೆ, ಯುವ ಎಂಬ ಪರಿಕಲ್ಪನೆಯಲ್ಲೂ ಮತಗಟ್ಟೆಗಳು ಸಿಂಗಾರಗೊಂಡು ಮತದಾನಕ್ಕೆ ಸಿದ್ಧವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 100 ಮತಗಟ್ಟೆಗಳನ್ನು ಚಿತ್ರಗಳಿಂದ ಅಲಂಕರಿಸುವ ಯೋಜನೆ ರೂಪಿಸಿರುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕುಮಾರ ತಿಳಿಸಿದ್ದಾರೆ. ಬಂಟ್ವಾಳ ತಾಲೂಕಿನ 13 ಶಾಲೆಗಳಲ್ಲಿನ ಮತಗಟ್ಟೆಗಳಲ್ಲಿ ಬಣ್ಣದ ಚಿತ್ರಗಳನ್ನು ಚಿತ್ರಿಸಲಾಗಿದೆ.

ಮತದಾರರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲು, ಎಲ್ಲರೂ ಈ ಚುನಾವಣೆಯಲ್ಲಿ ಮುಕ್ತ ಹಾಗೂ ಪಾರದರ್ಶಕವಾಗಿ ಭಾಗಿಯಾಗಬೇಕು ಎನ್ನುವ ಉದ್ದೇಶವನ್ನಿಟ್ಟುಕೊಂಡು ಮತಗಟ್ಟೆಗಳನ್ನು ಚಿತ್ರಗಳ ಮೂಲಕ ಆಕರ್ಷಿಸುವ ಹೊಸ ಪ್ರಯೋಗ ಮಾಡಲಾಗಿದೆ. ಮತದಾರ ಸಂಖ್ಯೆ ಎಲ್ಲಿ ಹೆಚ್ಚಾಗಿದೆ, ಎಲ್ಲಿ ಕಡಿಮೆ ಇದೆ ಅಂತಹ ಮತಗಟ್ಟೆಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಕಂಬಳ, ಯಕ್ಷಗಾನ, ನೀಲತರಂಗ, ಪರಂಪರೆ ಮತ್ತು ಸಂಸ್ಕೃತಿ, ಗೋಗ್ರೀನ್‌ ಈ ಪರಿಕಲ್ಪನೆಯ ಮತಗಟ್ಟೆಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಮತಗಟ್ಟೆಗಳಲ್ಲಿ ಮಾತ್ರ ಅಳವಡಿಸಿಕೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಿಇಒ ಡಾ. ಕುಮಾರ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು