News Karnataka Kannada
Monday, April 29 2024
ಮಂಗಳೂರು

ಮಂಗಳೂರು: ವಿಪರೀತ ಮಳೆಯಿಂದ ಔಷಧಿ ಸಿಂಪಡಣೆ ದೊಡ್ಡ ಸವಾಲು, ಅಡಿಕೆ ತೋಟಗಳಲ್ಲಿ ಕೊಳೆ ರೋಗದ ಲಕ್ಷಣ

Spraying of medicines due to heavy rains is a big challenge, symptoms of rot in arecanut plantations
Photo Credit : By Author

ಮಂಗಳೂರು: ಕರಾವಳಿಯ ಚಾಲಿ ಅಡಿಕೆ ಧಾರಣೆ ಸತತ ಏರಿಕೆ ಹಂತದಲ್ಲಿರುವ ಗಳೇ ಅಡಿಕೆ ಬೆಳೆಗಾರರು ತೋಟಕ್ಕೆ ತಗಲಿರುವ ಕೊಳೆರೋಗದಿಂದ ಕಳವಳಗೊಂಡಿದ್ದಾರೆ . ಒಂದು ತಿಂಗಳಿಂದ ವಿಪರೀತ ಮಳೆಯಿಂದ ಔಷಧ ಸಿಂಪಡಣೆ ಮಾಡಲು ಸಮಸ್ಯೆಯಾಗಿದೆ ಇದರಿಂದ ಪುತ್ತೂರು ಸುಳ್ಯ ಕಡಬ ತಾಲ್ಲೂಕಿನ ಅಡಿಕೆ ತೋಟಗಳಲ್ಲಿ ಕೊಳೆ ರೋಗದ ಲಕ್ಷಣಗಳು ಕಂಡು ಬಂದಿವೆ . ಶೇಕಡಾ ಐವತ್ತು ಕ್ಕಿಂತ ಅಧಿಕ ತೋಟಗಳಲ್ಲಿ ಸದ್ಯ ಸುರಿಯುತ್ತಿರುವಿಪರೀತ ಮಳೆಯಿಂದಾಗಿ ಮೊದಲ ಹಂತದಲ್ಲಿ ಔಷಧ ಸಿಂಪಡನೆ ಸಾಧ್ಯವಾಗಿಲ್ಲ ಇದರ ನೇರ ಪರಿಣಾಮ ಅಡಿಕೆ ಬೆಳೆಯ ಮೇಲೆ ಉಂಟಾಗಿದೆ . ಅಡಿಕೆಗೆ ಉತ್ತಮ ಧಾರಣೆ ಇದ್ದರೂ ಮುಂದಿನ ವರ್ಷದ ಫಸಲು ಕೊಳೆ ರೋಗಕ್ಕೆ ತುತ್ತಾದರೆ ಸಮಸ್ಯೆಯಾಗಲಿದೆ .

ಈ ಹಂತದಲ್ಲಿ ರೋಗ ತಗುಲದಂತೆ ಬೋರ್ಡೋ ದ್ರಾವಣ ಸಿಂಪಡಿಸಿ ಬೇಕಾಗುತ್ತದೆ ಪ್ರಸ್ತುತ ಸತತ ಮಳೆ ಸುರಿಯುವ ಜತೆಯಲ್ಲಿ ಶೀತಗಾಳಿ ಬೀಸುತ್ತಿದೆ ಇದು ಕೊಳೆರೋಗದ ಹೆಚ್ಚಳಕ್ಕೆ ಕಾರಣವಾಗುತ್ತಿದೆ ವಿಪರೀತ ಮಳೆ ಕಾರಣದಿಂದ ಸದ್ಯಕ್ಕೆ ಏನೂ ಮಾಡಲಾಗದ ಸ್ಥಿತಿ ಅಡಿಕೆ ಬೆಳೆಗಾರರು.

ಅಡಿಕೆ ಈಗಷ್ಟೇ ಬೆಳೆಯುತ್ತಿದ್ದು ರೋಗಕ್ಕೆ ತುತ್ತಾದರೆ ಅಲ್ಲೇ ಉದುರುತ್ತದೆ  ಒಂದು ಮರದಲ್ಲಿ ರೋಗ ಕಾಣಿಸಿಕೊಂಡರೆ ಅದು ಇಡೀ ತೋಟಕ್ಕೆ ಆವರಿಸಿ ಹಾನಿ ಮಾಡುವ ಸಂಭವ ಇರುತ್ತದೆ ಇದಕ್ಕಾಗಿ ಮಳೆ ಬಿಟ್ಟು ತಕ್ಷಣ ಅಡಿಕೆ ಗೊನೆಗಳಿಗೆ ಬೋರ್ಡೋ ದ್ರಾವಣ ಸಿಂಪಡಣೆ ಮಾಡಿದರೆ ಮಾತ್ರ ಈ ಕೊಳೆರೋಗದಿಂದ ಬೆಳೆಯನ್ನು ರಕ್ಷಿಸಲು ಸಾಧ್ಯ ಎನ್ನುತ್ತಾರೆ ತಜ್ಞರು

ಕೊಳೆರೋಗ ಫೈಟ್ ಪ್ರತ್ ಆರಕೆ ಎಂಬ ಶಿಲೀಂಧ್ರದಿಂದ ಹರಡುತ್ತದೆ ಗಾಳಿ ಮಳೆ ಹಾನಿ ಮೂಲಕ ಆರೋಗ್ಯವಂತ ಕಾಯಿಲೆಗಳನ್ನು ಆವರಿಸಿಕೊಂಡು ಶಿಲೀಂದ್ರ ಹೆಚ್ಚಿ ರೋಗ ವ್ಯಾಪಿಸಿ ತೊಡಗುತ್ತದೆ ಕಡಿಮೆ ಉಷ್ಣಾಂಶ ಹೆಚ್ಚು ಮಳೆ ತೇವಾಂಶದಿಂದ ಕೂಡಿದ ವಾತಾವರಣ ಒಟ್ಟಾಗಿ ಬರುವ ಮಳೆ ಬಿಸಿಲು ಈ ರೋಗ ಹರಡುವ ಮುಖ್ಯಪಾತ್ರವಹಿಸುತ್ತದೆ ಮೊದಲಿಗೆ ಅಡಿಕೆ ಕಾಯಿಲೆಗಳ ಮೇಲೆ ಹಚ್ಚ ಹಸಿರು ಬಣ್ಣದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ ಅನಂತರ ಇದೇ ಮಚ್ಚೆಗಳು ದೊಡ್ಡದಾಗಿ ಕಾಯಿಲೆಗಳ ಮೇಲ್ಭಾಗದಲ್ಲಿ ಆವರಿಸಿ ನಿಧಾನಕ್ಕೆ ಕೊಳೆಯುವಂತೆ ಮಾಡುತ್ತದೆ.

ರೋಗದ ತೀವ್ರತೆ ಹೆಚ್ಚಾದಾಗ ಅಡಿಕೆ ಕಾಯಿಗಳು ದಟ್ಟ ಹಸುರು ಬಣ್ಣಕ್ಕೆ ತಿರುಗಿ ತೊಟ್ಟಿನಿಂದ ಕಾಳಜಿ ಕುದುರುತ್ತದೆ ಕೊಳೆ ರೋಗ ತಗುಲಿದ ಕಾಯಿಲೆಗಳು ಒಣಗಿದ ಗೊಂಚಲುಗಳನ್ನು ನಾಶಪಡಿಸಬೇಕು ಬೋರ್ಡೋ ದ್ರಾವಣವನ್ನು ಅಡಿಕೆ ಗುಣಗಳ ಮೇಲೆ ಸಂಪೂರ್ಣ ಒದ್ದೆಯಾಗುವಂತೆ ಸಿಂಪಡಿಸಬೇಕು ಬಳಿಕ 35ರಿಂದ 45 ದಿನಗಳ ಅಂತರದಲ್ಲಿ ಎರಡನೇ ಸಿಂಪಡಣೆ ಮಾಡಬೇಕು ಮಳೆಗಾಲ ಮುಂದುವರಿದಿದ್ದಲ್ಲಿ ಮೂರನೇ ಬಾರಿಯೂ ಸಿಂಪಡಿಸಬೇಕಾಗುತ್ತದೆ ರೋಗಾಣು ಮಣ್ಣಿನ ಪದರದಲ್ಲೂ ಬದುಕುವುದರಿಂದ ಮಣ್ಣು ತೇವಾಂಶ ಇಲ್ಲದಂತೆ ನೋಡಿಕೊಳ್ಳಬೇಕು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30359
ಶರಣ್‌ ರಾಜ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು