News Karnataka Kannada
Monday, May 06 2024
ಮಂಗಳೂರು

ಚುನಾವಣೆ ಪೂರ್ವ ಮಸ್ಟರಿಂಗ್, ಉಜಿರೆ ಎಸ್.ಡಿ.ಎಂ.‌ಪ.ಪೂ. ಕಾಲೇಜಿನಲ್ಲಿ ಸ್ಟ್ರಾಂಗ್ ರೂಮ್

Pre-election mustering, Ujire SDM Strong Room in PU College
Photo Credit : News Kannada

ಬೆಳ್ತಂಗಡಿ: ಇಂದು ನಡೆಯುವ ಸಾರ್ವತ್ರಿಕ ಚುನಾವಣೆ ಪ್ರಯುಕ್ತ 200-ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಮೇ 9 ರಂದು ಉಜಿರೆಯ ಎಸ್.ಡಿ.ಎಂ. ಪ.ಪೂ. ಕಾಲೇಜಿನ ಸ್ಟ್ರಾಂಗ್ ರೂಮಿ‌ನಲ್ಲಿ  ಮಸ್ಟರಿಂಗ್ ಪ್ರಕ್ರಿಯೆ ನಡೆಯಿತು.

ತಾಲೂಕಿನ 241 ಮತಗಟ್ಟೆ ಸಿಬ್ಬಂದಿಗಳಿಗೆ ಚುನಾವಣೆ ಪರಿಕರ ವಿತರಿಸಲಾಯಿತು. ಬೆಳಗ್ಗೆ 5.30 ಕ್ಕೆ ಸಿಬಂದಿಗಳು ಮಸ್ಟರಿಂಗ್ ಕೆಂದ್ರಕ್ಕೆ ಆಗಮಿಸಿ ಬಳಿಕ ಚುನಾವಣಾ ಅಧಿಕಾರಿ, ಸಹಾಯಕ ಚುನಾವಣಾ ಅಧಿಕಾರಿ ಸಮ್ಮುಖದಲ್ಲಿ ಬೆಳಗ್ಗೆ 8 ಗಂಟೆಗೆ ಸ್ಟ್ರಾಂಗ್ ರೂಮ್ ತೆರೆಯಲಾಯಿತು. ಒಟ್ಟು 25 ಕೊಠಡಿಯಲ್ಲಿ ಮತಗಟ್ಟೆ ಸಿಬ್ಬಂದಿಗಳಿಗೆ ನೀಡಿದ ಪರಿಕರವನ್ನು 27 ಸೆಕ್ಟರ್ ಅಧಿಕಾರಿಗಳು ಪರಿಶೀಲಿಸಿ ದಾಖಲೀಕರಿಸಿದರು. ಸಮಸ್ಯೆ ಕಂಡುಬಂದಲ್ಲಿ ಸ್ಥಳದಲ್ಲೇ ಸಮಸ್ಯೆ ಪರಿಹರಿಸಲಾಯಿತು.

ಅತೀ ಸೂಕ್ಷ್ಮ ಮತಗಟ್ಟೆಗಳು: ತಾಲೂಕಿನ 241 ಬೂತ್‌ಗಳ ಪೈಕಿ 32 ಅತಿ ಸೂಕ್ಷ್ಮ ಮತಗಟ್ಟೆಗಳಿದ್ದು ಅಲ್ಲಿಗೆ ಸೂಕ್ಷ್ಮ ವೀಕ್ಷಕರನ್ನು ನೇಮಿಸಲಾಗಿದೆ. ಪ್ರತಿ ಕಡೆಗಳಲ್ಲಿಯೂ ವಿಡಿಯೋ, ಫೋಟೋಗ್ರಾಫಿ ವ್ಯವಸ್ಥೆ ಮಾಡಲಾಗಿದೆ. ಒಟ್ಟು 1156 ಸಿಬಂದಿಗಳಿದ್ದು ಪ್ರತಿ ಬೂತ್ ಗೆ 1 ಪಿ.ಆರ್.ಒ., 1 ಎ.ಪಿ.ಆರ್.ಒ., 2 ಪಿಒ, 1 ಡಿ‌ಗ್ರೂಪ್, 1 ಪೊಲೀಸ್ ಸಹಿತ 6 ಮಂದಿ ತಂಡದಲ್ಲಿರುವರು. 192 ಮಂದಿ ಹೆಚ್ಚುವರಿ ಸಿಬಂದಿ ಇರಿಸಿಕೊಳ್ಳಲಾಗಿತ್ತು. ಬೆಳಗಿನ ಉಪಹಾರ, ಮಧ್ಯಾಹ್ನ ಊಟದ ವ್ಯವಸ್ಥೆ ಬಳಿಕ ತಮ್ಮ ತಮ್ಮ ಮತಗಟ್ಟೆಗೆ ಮತಯಂತ್ರದೊಂದಿಗೆ ಸಾಗಿದರು.

ಚುನಾವಣಾ ಅಧಿಕಾರಿ ಯೋಗೇಶ್ ಎಚ್.ಆರ್., ಸಹಾಯಕ ಚುನಾವಣಾ ಅಧಿಕಾರಿ ಸುರೇಶ್ ಟಿ., ಮಾಸ್ಟರ್ ಟ್ರೇನರ್ ಧರಣೇಂದ್ರ ಕುಮಾರ್, ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಕುಸುಮಾಧರ್ ಬಿ, ಸೆಕ್ಟರ್ ಅಧಿಕಾರಿ ನಟರಾಜ್ ಸಹಿತ ಚುನಾವಣಾ ಶಾಖೆ ಸಿಬಂದಿ ಪ್ರಕ್ರಿಯೆ ಸುಸೂತ್ರವಾಗಿ ನಡೆಸುವಲ್ಲಿ ಯಶಸ್ವಿಯಾದರು‌. ಚುನಾವಣಾ ಸಾಮಾನ್ಯ ವೀಕ್ಷಕರಾಗಿ ಡಾ.ಸರೋಜ್ ಕುಮಾರ್ ಭೇಟಿ ನೀಡಿ ಡಿ ಮಸ್ಟರಿಂಗ್ ಪ್ರಕ್ರಿಯೆ ಪರಿಶೀಲಿಸಿದರು. ಆರೋಗ್ಯ ಇಲಾಖೆ ಅಧಿಕಾರಿಗಳು ಸಹಕರಿಸಿದರು.

ವಿಶೇಷ ಮತಗಟ್ಟೆಗಳಾಗಿ ಮೀಸಲು ಮತಗಟ್ಟೆ ಸಂಖ್ಯೆ: ತಾಲೂಕಿನಲ್ಲಿ 13 ಮತಗಟ್ಟೆಗಳನ್ನು ಗುರುತಿಸಿ ವಿಶೇಷ ಮತಗಟ್ಟೆಗಳಾಗಿ ಗುರುತಿದಲಾಗಿದೆ. ಬೂತ್ ಸಂಖ್ಯೆ 164 ಎಸ್.ಡಿ.ಎಂ.ಅ.ಹಿ.ಪ್ರಾ.ಶಾಲೆ ಉಜಿರೆ (ಯಕ್ಷಗಾನ), ಬೂತ್ 935 ಸ.ಹಿ.ಪ್ರಾ.ಶಾಲೆ ಮಚ್ಚಿನ (ಕಂಬಳ), ಬೂತ್ 120 ದ.ಜಿ.ಪಂ.ಹಿ.ಪ್ರಾ.ಶಾಲೆ ಪಡಂಗಡಿ (ಮೀನುಗಾರಿಕೆ), ಬೂತ್ 131 ವಿದ್ಯೋದಯ ಅ.ಹಿ.ಪ್ರಾ.ಶಾಲೆ ವೇಣೂರು (ಪಾರಂಪರಿಕ), ಬೂತ್ 114 ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಪಿಲಿಚಂಡಿಕಲ್ಲು(ಹಸಿರು), ಬೂತ್ 63 ದ.ಜ.ಪಂ.ಹಿ.ಪ್ರಾ.ಶಾಲೆ ಪೆರಾಡಿತ್ತಾಯಕಟ್ಟೆ (ಸಾಂಪ್ರದಾಯಿಕ), ಬೂತ್ 98 ಉಜಿರೆ ಎಸ್.ಡಿ.ಎಂ. ಅ.ಶಾಲೆ(ಯುವ), ಬೂತ್ 68 ಕರ್ನೋಡಿ ಲಾಯಿಲ (ಸಖಿ), ಬೂತ್ 4 ನಾರಾವಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ (ಸಖಿ), ಬೂತ್ 24 ಚಾರ್ಮಾಡಿ ರಾಜೀವ್ ಗಾಂಧಿ ಸೇವಾ ಕೇಂದ್ರ (ಸಖಿ), ಬೂತ್ 152 ದ.ಕ.ಜಿ.ಪಂ.ಹಿ.ಪ್ರಾ‌.ಶಾಲೆ ಗೇರುಕಟ್ಟೆ (ಸಖಿ), ಬೂತ್ 189 ಕೆಪಿಎಸ್ ಪೂಂಜಾಲಕಟ್ಟೆ(ಸಖಿ), ಬೂತ್ 236 ದ.ಕ.ಜಿ.ಪಂ.ಹಿ.ಪ್ರಾ.ಶಾಲೆ (ಅಂಗವಿಕಲ) ವಿಶೇಷವಾಗಿ ಅಲಂಕರಿಸಲಾಗಿದೆ.

ವಾಹನದ ವ್ಯವಸ್ಥೆ: ಮಸ್ಟರಿಂಗ್ ಕೇಂದ್ರದಿಂದ ತೆರಳಲು ಮತಗಟ್ಟೆಗಳಿಗೆ ತೆರಳುವ ಅಧಿಕಾರಿಗಳು ಹಾಗೂ ಸಿಬಂದಿಗೆ ಸೂಕ್ತ ವಾಹನ ಸೌಲಭ್ಯ ಒದಗಿಸಲಾಗಿತ್ತು. 33 ಬಸ್, 22 ಜೀಪ್, 15 ಮಾಕ್ಸಿಕ್ಯಾಬ್ ಸಹಿತ 70 ವಾಹನ, ಹೆಚ್ಚುವರಿಯಾಗಿ 3 ಬಸ್, 2 ಜೀಪ್, 2 ಮ್ಯಾಕ್ಸಿಕ್ಯಾಬ್ ನಿಯೋಜಿಸಲಾಗಿತ್ತು.

ಪೊಲೀಸ್ ಬಂದೋಬಸ್ತ್ :ತಾಲೂಕಿನಲ್ಲಿ ಶಾಂತಿಯುತ ಮತದಾನ ಹಾಗೂ ನಿರ್ಭೀತ ಮತದಾನಕ್ಕಾಗಿ ಮತಗಟ್ಟೆ ಅಧಿಕಾರಿಗಳೊಂದಿಗೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ಪೊಲೀಸರ ನಿಯೋಜನೆ: ತಾಲೂಕಿನ 241 ಬೂತ್‌ಗಳಿಗೆ ಶಾಂತಿಯುತ ಮತ್ತು ನಿರ್ಭೀತ ಮತದಾನಕ್ಕಾಗಿ ಸೂಕ್ತ ಬಂದೋಬಸ್ತ್ ಒದಗಿಸಲಾಗಿದೆ. ಈಗಾಗಲೇ ಒಂದು ಡಿವೈಎಸ್‌ಪಿ, ಸಿಪಿಐ, ಪಿಎಸ್‌ಐ, ಎಎಸ್‌ಐ, ಎಚ್‌ಸಿ, ಪಿಸಿ, ಹೋಮ್‌ಗಾರ್ಡ್‌ಗಳನ್ನು ಆಯಾಯ ಬೂತ್‌ಗಳಿಗೆ ಅನುಕ್ರಮದಂತೆ ನಿಯೋಜಿಸಲಾಗಿದೆ. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸೇರಿ 64 ಮತಗಟ್ಟೆಗಳಲ್ಲಿ ಅರೆಸೇನಾಪಡೆ ನಿಯೋಜಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು