News Karnataka Kannada
Tuesday, April 23 2024
Cricket
ಮಂಗಳೂರು

ಮಂಗಳೂರು: ಬಿಜೆಪಿ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆ

CBI probe into DK Shivakumar should continue: Kageri
Photo Credit : News Kannada

ಮಂಗಳೂರು: ಕಾಂಗ್ರೆಸ್ ಸರ್ಕಾರ ಪ್ರಾರಂಭದ ಲಕ್ಷಣ ನೋಡಿದರೆ ಅವರು ಯಾರ ಮಾತು ಕೇಳೋ ಹಾಗಿಲ್ಲ. ಅವರು ಮಾಡಿದ್ದೇ ಮೊದಲು ಅನ್ನೋ ಧೋರಣೆಯಲ್ಲಿ‌ ಇದ್ದಾರೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಮಂಗಳೂರಿನಲ್ಲಿ ನಡೆದ ಬಿಜೆಪಿ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಗ್ಯಾರಂಟಿ ಯೋಜನೆಯಿಂದ ಆರಂಭ ಆಗಿದೆ. ಆದರೆ ಈಗ ಯಾಕಾದ್ರೂ ಈ ಸರ್ಕಾರ ಬಂತೋ ಅನ್ನೋ ಹಾಗಾಗಿದೆ. ಸರ್ಕಾರ ವೈಫಲ್ಯ ಮುಚ್ಚಿ ಹಾಕಿ ಗೊಂದಲ ಸೃಷ್ಟಿಸುವ ಕೆಲಸದಲ್ಲಿದೆ. ಅಭಿವೃದ್ಧಿ ಬಿಟ್ಟು ಕೇವಲ ಗ್ಯಾರಂಟಿ ಗೊಂದಲದಲ್ಲಿದೆ ಎಂದರು.

ಚುನಾವಣೆ ಪೂರ್ವ ಗ್ಯಾರಂಟಿಯನ್ನು ಅದೇ ರೀತಿ ಜಾರಿಗೆ ತನ್ನಿ ಎಂದರು. ಸರ್ವರ್ ಡೌನ್ ಆದ್ರೆ ಕೇಂದ್ರ ಹ್ಯಾಕ್ ಮಾಡಿದೆ ಅನ್ನೋ ಕೀಳು ಮಟ್ಟಕ್ಕೆ ಹೋಗ್ತಾರೆ. ಇದು ಒಬ್ಬ ಮಂತ್ರಿಯ ಭೌದ್ದಿಕ ದಿವಾಳಿತನ. ಮೊದಲ ಕ್ಯಾಬಿನೆಟ್ ನಲ್ಲಿ ಸರ್ವರ್ ಡೌನ್ ಬಗ್ಗೆ ಗೊತ್ತಿರಲಿಲ್ವಾ, ಇಷ್ಟೊಂದು ಅರ್ಜಿ ಸಲ್ಲಿಸೋವಾಗ ಸರ್ವರ್ ಬಗ್ಗೆ ನಿಮಗೆ ಗೊತ್ತಿಲ್ವಾ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಕಾಲದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಆಗಿದೆ. ಪ್ರಧಾನಿ ಮೋದಿಯವರ ಅವಧಿಯಲ್ಲಿ ಅಂಥದ್ದು‌ ಆಗಿಲ್ಲ. ಕಾಂಗ್ರೆಸ್ ಭ್ರಷ್ಟಾಚಾರ, ದ್ರೋಹ, ಅನ್ಯಾಯವನ್ನ ಮೋದಿ ಸರಿ ಮಾಡ್ತಿದ್ದಾರೆ. ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಸರ್ಕಾರ ಈಗ ರಾಜಕೀಯ ಮಾಡ್ತಿದೆ. ಶಿಕ್ಷಣದಲ್ಲಿ ಶಿವಾಜಿಯ ಬಗ್ಗೆ ಕಲಿಸಿ ಅಂತ ನಾವು ಹೇಳಿದೆವು. ಆದರೆ ಇದನ್ನ ಸಿದ್ದರಾಮಯ್ಯರಿಗೆ ತಡೆದುಕೊಳ್ಳಲು ಆಗಲಿಲ್ಲ. ಪರಿಣಾಮ ಅವರು ಎಡಪಂಥೀಯರ ಕೈಗೊಂಬೆಯಾದ್ರು. ಗುಲಾಮಿ ಮಾನಸಿಕತೆ ಹಾಗೂ ಎಡಪಂಥೀಯ ಚಿಂತನೆಗಳನ್ನು ತುಂಬಿಸಿದ್ರು. ಸದ್ಯ ರೋಹಿತ್ ಚಕ್ರತೀರ್ಥ ಪುಸ್ತಕ ಜಾರಿಯಲ್ಲಿ ಇದೆ. ಆದರೆ ಸರ್ಕಾರ ಬಂದ ಕೆಲವೇ ದಿನಗಳಲ್ಲಿ ರಾಜಕೀಯ ಉದ್ದೇಶ ಈಡೇರಿಸಿದ್ದಾರೆ. ದುರಾಡಳಿತದ ಮೂಲಕ ಪಠ್ಯ ಪರಿಷ್ಕರಣೆ ಮಾಡಿದ್ದಾರೆ ಎಂದರು.

ಎಡಪಂಥೀಯರನ್ನ ತೃಪ್ತಿಪಡಿಸಲು ಕಾಂಗ್ರೆಸ್ ಇದನ್ನ ಮಾಡಿರೋದು ಅಕ್ಷಮ್ಯ ಅಪರಾಧ ಎಂದರು. ಮಧುಬಂಗಾರಪ್ಪ‌ ಮಂತ್ರಿಯಾಗಿ ಸರಿಯಾಗಿ ತಿಂಗಳಾಗಿಲ್ಲ. ಎಲ್ಲಿ ಯಾವ ಪಠ್ಯ ಇದೆ ಅಂತ ಇನ್ನೂ ಅವರಿಗೆ ಗೊತ್ತಿಲ್ಲ. ಸಿದ್ದರಾಮಯ್ಯ ಹೇಳಬೇಕು, ಕಿತ್ತು ಹಾಕಿದ ಪಾಠಗಳಲ್ಲಿ‌ ಏನು ದೋಷ ಇದೆ ಎಂದು ಹೇಳಬೇಕೆಂದರು.

ಚಕ್ರವರ್ತಿ ಸೂಲಿಬೆಲೆಯವರ ತಾಯಿ ಭಾರತೀಯ ಅಮರ ಪುತ್ರರು ಪಠ್ಯ ತೆಗೆದಿದ್ದಾರೆ. ಅವರು ರಾಜ್ ಗುರು, ಭಗತ್ ಸಿಂಗ್, ಸುಖದೇವ್ ಬಗ್ಗೆ ಬರೆದಿದ್ದಾರೆ. ಈ ಪಾಠದಲ್ಲಿ ತೆಗೆದು ಹಾಕುವ ಒಂದು ಶಬ್ದ ಇಲ್ಲ. ಲೇಖಕರು ಇವರಿಗೆ ಅಪಥ್ಯ ಎಂಬ ಕಾರಣಕ್ಕೆ ತೆಗೆದು ಹಾಕಿದ್ದಾರೆ. ಲೇಖಕರು ಅಪಥ್ಯ ಅಂತ ಲೇಖನಗಳನ್ನು ತೆಗೆದಿರೋದು ತಪ್ಪು ಎಂದು ಕಿಡಿಕಾರಿದರು.

ಈ ಕ್ಷುಲ್ಲಕ ಪ್ರಯತ್ನವನ್ನ ನಾವು ಖಂಡಿಸಬೇಕಿದೆ. ಈಗ ಚುನಾವಣೆ ಆದ್ರೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ವಿದ್ಯುತ್ ಶುಲ್ಕದಲ್ಕಿ ಎಲ್ಲಿ ಮುಟ್ಟಿದ್ರೂ ಶಾಕ್ ಹೊಡಿತಿದೆ ಎಂದು ಹೇಳಿದರು.

ನಾವು ಚುನಾವಣೆಯಲ್ಲಿ ಸೋತಿದ್ದೇವೆ ಆದರೆ ಸಿದ್ದಾಂತದಲ್ಲಿ‌ ನಾವು ಸೋತಿಲ್ಲ- ಸಿ.ಟಿ.ರವಿ

ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳಲು ನಮ್ಮ ಸೋಲು ಕಾರಣ ಹಾಗಾಗಿ ನಾನು ನಿಮ್ಮೆಲ್ಲರಲ್ಲಿ ಕ್ಷಮೆ ಯಾಚನೆ ಮಾಡ್ತೇನೆ. ನಾವು ಸೋತಿದ್ದೇವೆ, ಚುನಾವಣೆಯಲ್ಲಿ ಮಾತ್ರ ಸೋಲು. ಆದರೆ ಸಿದ್ದಾಂತದಲ್ಲಿ‌ ನಾವು ಸೋತಿಲ್ಲ, ಅದು ಯಾವತ್ತೂ ಇರುತ್ತೆ ಎಂದರು. ಡಿಕೆಶಿ ಉಚಿತ, ನಿಶ್ವಿತ ಮತ್ತು ಖಚಿತ ಅಂತ ಹೇಳಿದ್ದರು. ಸಿ.ಟಿ.ರವಿ ನಿಮ್ಮ ಹೆಂಡ್ತೀಗೂ ಫ್ರೀ, ಶೋಭಕ್ಕ ನಿಮಗೂ ಫ್ರೀ ಅಂದ್ರು. ಇದು ದಾಷ್ಟ್ಯ, ಇದು ಅಹಂಕಾರದ ಮಾತು, ಈಗ ಕಂಡಿಷನ್ ಯಾಕೆ ಹಾಕ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ತುಕಾಡೆ‌ ಗ್ಯಾಂಗ್ ಗಳಿಗೆ‌ ಕಾಂಗ್ರೆಸ್ ಬೆಂಬಲ ಕೊಡ್ತಾ ಇದೆ. ನೀತಿ ಮತ್ತು ನಿಯತ್ತು ಇಲ್ಲದ ನೇತೃತ್ವ ಹಾನಿಕಾರಕ. ಕಾಂಗ್ರೆಸ್ ಗೆ‌ ನಿಯತ್ತು‌ ಮತ್ತು ನೀತಿ ಎರಡೂ ಇಲ್ಲ ಎಂದು ಹೇಳಿದರು. ಕಾಂಗ್ರೆಸ್ ಮಾಯಾ ಯುದ್ದದಲ್ಲಿ ತಾತ್ಕಾಲಿಕ ಗೆಲುವು ಪಡೆದಿದೆ. ಅವರ ಮಾಯಾ ಯುದ್ಧದಲ್ಲಿ ನಾವು ಅಧಿಕಾರ ಕಳೆದುಕೊಂಡಿದ್ದೇವೆ. 2024ರಲ್ಲಿ ಮೈ ಮರೆತರೆ ನಾವು ದೇಶ ಕಳೆದುಕೊಳ್ತೀವಿ. ಹಾಗಾಗಿ ಜನರಿಗೆ ಈ ಮಾಯ ಯುದ್ದವನ್ನ ಅರ್ಥ ಮಾಡಿಸಬೇಕಿದೆ.

ಸಮಾನ ನಾಗರಿಕ ಸಂಹಿತೆ ಜಾರಿ‌ ಒಂದು ಬಾಕಿ ಇದೆ. ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡಿ ಅದನ್ನ ಜಾರಿಗೆ ಬಿಡಲಿಲ್ಲ. ಸಮಾನ ನಾಗರಿಕ ಸಂಹಿತೆ ಬೇಡ ಅಂದ್ರೆ ಕ್ರಿಮಿನಲ್ ಕೋಡ್ ಯಾಕೆ? ಷರಿಯಾದ ಕಾನೂನನ್ನೇ ಇಸ್ಲಾಂ ಪ್ರಕಾರ ಇಲ್ಲಿ ಅನುಸರಿಸಲಿ. ಕಳ್ಳತನ ಮಾಡಿದರೆ ಕೈ ಕಟ್, ಅತ್ಯಾಚಾರ ಮಾಡಿದರೆ‌ ಹತ್ಯೆ ಅಂತ ಷರಿಯಾ ಕಾನೂನು ಹೇಳುತ್ತದೆ. ಆ ಕಾನೂನು ಜಾರಿ ಮಾಡಿದ್ರೆ ಇವರಲ್ಲಿ ಎಷ್ಟು ಜನ ಉಳೀಬಹುದು. ಇಲ್ಲಿನ ಕ್ರಿಮಿನಲ್ ಕೋಡ್ ಬೇಕು, ಆದರೆ ಇವರಿಗೆ ಸಿವಿಲ್ ಕೋಡ್ ಬೇಡ. ಹೀಗಾಗಿ ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ಬರಲಿದೆ. ಇಡೀ ದೇಶ ಒಂದು ಎಂಬ ಭಾವನೆಯಲ್ಲಿ ನಾಗರಿಕ ಸಂಹಿತೆ ಬರಬೇಕು ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು