News Karnataka Kannada
Saturday, May 18 2024
ತುಮಕೂರು

ಪ್ರಜ್ವಲ್ ರೇವಣ್ಣ ಅಂತಹ ಸ್ವಭಾವದ ಹುಡುಗ ಅಲ್ಲ ಎಂದ ಸಂಸದ ಜಿ.ಎಸ್ ಬಸವರಾಜ್

ಪ್ರಜ್ವಲ್ ರೇವಣ್ಣ ನನ್ನ ಆತ್ಮೀಯ ಸ್ನೇಹಿತ. ಅಂತಹ ಸ್ವಭಾವದ ಹುಡುಗ ಅಲ್ಲ. ಪ್ರಜ್ವಲ್ ಅವರ ಮೇಲಿನ ಪ್ರಕರಣ ಸತ್ಯನೋ ಸುಳ್ಳೋ ಎಂಬುದು ತನಿಖೆ ಬಳಿಕ ತಿಳಿಯಲಿದೆ.  ಎಂದು ಸಂಸದ ಜಿ.ಎಸ್ ಬಸವರಾಜ್ ಹೇಳಿದ್ದಾರೆ.
Photo Credit : NewsKarnataka

ತುಮಕೂರು: ಪ್ರಜ್ವಲ್ ರೇವಣ್ಣ ನನ್ನ ಆತ್ಮೀಯ ಸ್ನೇಹಿತ. ಅಂತಹ ಸ್ವಭಾವದ ಹುಡುಗ ಅಲ್ಲ. ಪ್ರಜ್ವಲ್ ಅವರ ಮೇಲಿನ ಪ್ರಕರಣ ಸತ್ಯನೋ ಸುಳ್ಳೋ ಎಂಬುದು ತನಿಖೆ ಬಳಿಕ ತಿಳಿಯಲಿದೆ.  ಎಂದು ಸಂಸದ ಜಿ.ಎಸ್ ಬಸವರಾಜ್ ಹೇಳಿದ್ದಾರೆ.

ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಏನು ಗ್ರಹಚಾರವೋ, ಯಾರ ಕೈವಾಡವೋ ಗೊತ್ತಿಲ್ಲ. ಇತ್ತೀಚೆಗೆ ಈ ರೀತಿ ತೇಜೋವಧೆ ಮಾಡುವುದು ಹೆಚ್ಚಾಗಿದೆ. ಜಾರಕಿಹೊಳಿಗೂ ಕೂಡ ಪಿತೂರಿ ಮಾಡಿ ಮನೆ ಹಾಳು ಮಾಡಿ ಮಾನ ಹರಾಜು ಹಾಕಿದ್ದಾರೆ ಎಂದರು.

ಜಾರಕಿಹೋಳಿ ಪ್ರಕರಣದಲ್ಲಿ ವಿರೋಧ ಪಕ್ಷದವರೇ ಪಿತೂರಿ ಮಾಡಿದ್ದರು. ಈಗಲೂ ಕೂಡ ವಿರೋಧ ಪಕ್ಷದವರೇ ಪಿತೂರಿ ಮಾಡಿರಬಹುದು. ಒಂದು ವೇಳೆ ಮಹಿಳೆಯರಿಗೆ ಅನ್ಯಾಯ ಆಗಿದ್ದರೆ ಶಿಕ್ಷೆ ಆಗಲೇಬೇಕು ಎಂದಿದ್ದಾರೆ.

ಏನಿದು ಪ್ರಕರಣ?: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋಗಳು ವೈರಲ್ ಆಗುತ್ತಿದ್ದಂತೆ ಸಂತ್ರಸ್ತೆಯರು ಮಹಿಳಾ ಆಯೋಗದ ಮೊರೆ ಹೋಗಿದ್ದು, ಸರ್ಕಾರ ಪ್ರಕರಣದ ತನಿಖೆಗೆ ಎಸ್‍ಐಟಿ ರಚನೆ ಮಾಡಿತ್ತು. ಇದಾದ ಬೆನ್ನಲ್ಲೇ ಮಾಜಿ ಸಚಿವ ರೇವಣ್ಣ ವಿರುದ್ಧ ಸಹ ಲೈಂಗಿಕ ದೌರ್ಜನ್ಯ ಹಾಗೂ ಸಂತ್ರಸ್ತೆಯ ಅಪಹರಣದ ಆರೋಪದಡಿ ಪ್ರಕರಣ ದಾಖಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು