News Karnataka Kannada
Thursday, May 09 2024
ಮಂಗಳೂರು

ಮಂಗಳೂರು: ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣ, ಆರೋಪಿಗಳ ಬಿಡುಗಡೆ ವಿರೋಧಿಸಿ ಪ್ರತಿಭಟನೆ

Imtiyaz says there is no difference between BJP, RSS and ISIS
Photo Credit : By Author

ಮಂಗಳೂರು: ಗುಜರಾತಿನ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳ ಬಿಡುಗಡೆಯನ್ನು ವಿರೋಧಿಸಿ., ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳದ ಆರೋಪಿ ಮುರುಘಾ ಮಠದ ಶಿವಮೂರ್ತಿಯವರ ಮೇಲೆ ಕಠಿಣ ಕ್ರಮಕ್ಕೆ ಒತ್ತಾಯಿಸಿ ಡಿವೈಎಫ್ಐ, ಜೆಎಮ್ಎಸ್, ಎಸ್ಎಫ್ಐ, ಡಿಎಚ್ಎಸ್ ಮತ್ತು ಸಮಾನ ಮನಸ್ಕ ಸಂಘಟನೆಗಳ ಜಂಟಿ ಆಶ್ರಯದಲ್ಲಿ 7-09-2022 ಮಂಗಳೂರು ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನಾ ಪ್ರದರ್ಶನ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಡಿವೈಎಫ್ಐ ಜಿಲ್ಲಾ ಅಧ್ಯಕ್ಷರಾದ ಬಿ.ಕೆ ಇಮ್ತಿಯಾಜ್, ಮಾತನಾಡುತ್ತಾ ದೇಶದಲ್ಲಿ ಬಿಜೆಪಿ ಸರ್ಕಾರ ಆಳ್ವಿಕೆಗೆ ಬಂದ ನಂತರ ದೇಶದ ಕಾನೂನು ಸ್ಥಿತಿಯು ಸಂಪೂರ್ಣ ಹದಗೆಟ್ಟಿದ್ದು ಬಿಜೆಪಿ ಆರ್ ಎಸ್ ಎಸ್ ನೀತಿಗಳಿಂದ ನ್ಯಾಯಾಂಗವನ್ನು ಬುಡಮೇಲು ಮಾಡಲಾಗುತ್ತಿದೆ.

ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸ್ವಾತಂತ್ರ್ಯದ 75ರ ಸಂಭ್ರಮದಲ್ಲಿ ಗುಜರಾತ್ ಹತ್ಯಾಕಾಂಡದಲ್ಲಿ ಸರಣಿ ಅತ್ಯಾಚಾರವೆಸಗಿದ ಮತ್ತು ಗರ್ಭಿಣಿ ಮಹಿಳೆ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರವೆಸಗಿರುವ ಅಪರಾಧಿಗಳನ್ನು ಕೇಂದ್ರ ಸರ್ಕಾರದ ಕೃಪಾಕಟಾಕ್ಷದಲ್ಲಿ ಬಿಡುಗಡೆಗೊಳಿಸಲಾಗಿದೆ ಮತ್ತು ಬಿಡುಗಡೆಯ ಸಂದರ್ಭದಲ್ಲಿ ಬಿಜೆಪಿ ಆರ್ ಎಸ್ ಎಸ್ ಮುಖಂಡರಿಂದ ಅಪರಾಧಿಗಳಿಗೆ ಅದ್ದೂರಿ ಸ್ವಾಗತ ದೊರೆತಿದೆ.

ಈ ಪ್ರಕರಣ ಒಂದು ಕಡೆಯಾದರೆ ಕರ್ನಾಟಕದಲ್ಲಿ ಕಲಿಕೆಗಾಗಿ ಬಂದ ವಿದ್ಯಾರ್ಥಿನಿಯರ ಮೇಲೆ ಮುರುಗಮಠದ ಶಿವಮೂರ್ತಿ ಸ್ವಾಮಿಗಳು ಎಸಗಿರುವ ಲೈಂಗಿಕ ದೌರ್ಜನ್ಯವನ್ನು ಕೂಡ ಇಲ್ಲಿನ ಬಿಜೆಪಿ ರಾಜ್ಯ ಸರ್ಕಾರವು ಕಂಡು ಕೂಡ ಸುಮ್ಮನಿದೆ ಇದು ಬಿಜೆಪಿ ಮುಖಂಡರ ಕ್ರೌರ್ಯದ ಮುಖ ಸ್ಥಿತಿಯನ್ನು ಬಿಂಬಿಸುತ್ತದೆ ಹಾಗಾಗಿ ಅಪರಾಧಿಗಳನ್ನು ಕೊಲೆಗಡುಕರನ್ನು ಅತ್ಯಾಚಾರಿಗಳನ್ನು ಬೆಂಬಲಿಸುವ ಬಿಜೆಪಿ ಆರ್ ಎಸ್ ಎಸ್ ಸಂಘಟನೆ ಐ ಎಸ್ ಐ ಎಸ್ ಭಯೋತ್ಪಾದಕ ಸಂಘಟನೆಗೂ ಯಾವುದೇ ವ್ಯತ್ಯಾಸವಿಲ್ಲ ಎಂದರು.

ಪ್ರತಿಭಟನೆಯನ್ನು ಉದ್ದೇಶಿಸಿ ಪ್ರಗತಿಪರ ಸಂಘಟನೆಯ ಮುಖಂಡರಾದ ಡಾ ಕೃಷ್ಣಪ್ಪ ಕೊಂಚಾಡಿ ಮಾತನಾಡುತ್ತಾ ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳನ್ನು ಬಿಡುಗಡೆಗೊಳಿಸಿರುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶವು ತಲೆತಗ್ಗಿಸುವಂತೆ ಮಾಡಿದೆ ಮುರುಗಮಠದ ಶಿವಮೂರ್ತಿ ಸ್ವಾಮಿಗಳು ಎಸಗಿರುವ ಲೈಂಗಿಕ ಕ್ರೌರ್ಯದಲ್ಲಿ ಒಬ್ಬಾಕೆ ದಲಿತ ವಿದ್ಯಾರ್ಥಿನಿಯು ಇದ್ದು ದಲಿತ ದೌರ್ಜನ್ಯ ತಡೆ ಕಾನೂನಿನ ಮುಖಾಂತರವಾಗಿ ಆರೋಪಿಯಾದ ಶಿವಮೂರ್ತಿ ಸ್ವಾಮಿಯನ್ನು ತಕ್ಷಣ ಬಂಧಿಸಬಹುದಿತ್ತು ಆದರೆ ಸರಕಾರ ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನದಲ್ಲಿದೆ ತಡವಾಗಿಎಫ್ಐಆರ್ ಮಾಡಲಾಗಿದೆ. ಎಫ್ ಫೈಯರ್ ನಲ್ಲಿಯೂ ಆರೋಪಿಗೆ ಪೂರಕವಾಗುವಂತೆ ಬರೆಯಲಾಗಿದೆ. ಅನಾರೋಗ್ಯದ ನಾಟಕವಾಡಿ ಆರೋಪಿಯನ್ನು ಆಸ್ಪತ್ರೆಯಲ್ಲಿಡುವ ಮೂಲಕ ರಾಜ್ಯದ ಜನತೆಯ‌ ಕಣ್ಣೆಗೆ ಮಣ್ಣೆರಚುವ ಕಾರ್ಯವನ್ನು ಈ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಡುತ್ತಿದ್ದಾರೆ ಎಂದರು. ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ,ಸಾಮರಸ್ಯ ಮಂಗಳೂರು ಸಂಚಾಲಕರಾದ ಮಂಜುಳಾ ನಾಯಕ್ ಮಾತನಾಡಿದರು.

ಈ ವೇಳೆ ಡಿವೈಎಫ್ಐ ಜಿಲ್ಲಾ ಮುಖಂಡರಾದ ಮನೋಜ್ ವಾಮಂಜೂರು, ನವೀನ್ ಕೊಂಚಾಡಿ, ಭಾರತ ವಿದ್ಯಾರ್ಥಿ ಫೆಡರೇಷನ್ಎಸ್ಎಫ್ಐ ಜಿಲ್ಲಾ ಅಧ್ಯಕ್ಷರಾದ ವಿನಿತ್ ದೇವಾಡಿಗ, ಕಾರ್ಯದರ್ಶಿ, ರೇವಂತ್ ಕದ್ರಿ, ಜನವಾದಿ ಮಹಿಳಾ ಸಂಘಟನೆಯ ಜಯಲಕ್ಷ್ಮಿ ಜಪ್ಪಿನಮೊಗರು, ದಲಿತ ಹಕ್ಕುಗಳ ಸಮಿತಿಯ ಕೃಷ್ಣ ತಣ್ಣೀರು ಬಾವಿ, ತಿಮ್ಮಯ್ಯ ಕೊಂಚಾಡಿ, ಕಾರ್ಮಿಕ ಮುಖಂಡರಾದ ಸುನೀಲ್ ಕುಮಾರ್ ಬಜಾಲ್, ಸುಕುಮಾರ್ ತೊಕ್ಕೊಟ್ಟು, ಸಮುದಾಯ ಸಂಘಟನೆಯ ಮುಖಂಡರಾದ ವಾಸುದೇವ ಉಚ್ಚಿಲ, ಅಖಿಲ ಭಾರತ ವಕೀಲರ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ನಿತಿನ್ ಕುತ್ತಾರ್, ಬೀದಿ ಬದಿ ಸಂಘಟನೆಯ ಮುಸ್ತಫಾ, ಹಮಾಲಿ ಕಾರ್ಮಿಕ ಸಂಘಟನೆಯ ವಿಲ್ಲಿ ವಿಲ್ಸನ್, ಪಲ್ಗುಣಿ ಮೀನುಗಾರರ ಸಂಘಟನೆಯ ತಯ್ಯೂಬ್ ಬೆಂಗರೆ, ಮಹಿಳಾ ಸಂಘಟನೆಯ ಮುಖಂಡರಾದ ಅಸುಂತ ಡಿಸೋಜಾ, ಪ್ರಮಿಳಾ ದೇವಾಡಿಗ, ಅನುರಾಧ ಬಾಳಿಗಾ, ಸಮರ್ಥ್ ಭಟ್ ಮುಂತಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
15229
Jaya Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು