News Karnataka Kannada
Monday, May 13 2024
ಮಂಗಳೂರು

ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಪ್ಯಾಸೆಂಜರ್ ರೈಲಿನಡಿಗೆ ವ್ಯಕ್ತಿಯೊಬ್ಬರು ಬಿದ್ದು ಮೃತ

Bidar: Jescom employee dies of electrocution
Photo Credit : By Author

ಬಂಟ್ವಾಳ: ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಪ್ಯಾಸೆಂಜರ್ ರೈಲಿನಡಿಗೆ ವ್ಯಕ್ತಿಯೊಬ್ಬರು ಬಿದ್ದು ಮೃತಪಟ್ಟ ಘಟನೆ ಅ.16ರಂದು ರಾತ್ರಿ ಮಿತ್ತೂರು ಸಮೀಪ ನಡೆದಿದೆ.

ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ರೈಲು ನೇರಳಕಟ್ಟೆಯಿಂದ ಮುಂದಕ್ಕೆ ನಿಧಾನವಾಗಿ ಚಲಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ರೈಲ್ವೇ ಹಳಿಗೆ ಆಕಸ್ಮೀಕವಾಗಿ ಬಂದು ರೈಲಿನಡಿಗೆ ಬಿದ್ದಿದ್ದರು. ರೈಲು ನಿಧಾನವಾಗಿ ಚಲಿಸುತ್ತಿದ್ದರಿಂದ ಲೋಕೊ ಪೈಲೆಟ್, ಚಲಿಸುತ್ತಿರುವ ರೈಲನ್ನು ನಿಲ್ಲಿಸಿ ತೀವ್ರ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ಅದೇ ರೈಲಿನಲ್ಲಿ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ಕರೆ ತಂದಾಗ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಘಟನೆ ನಡೆದ ಸಂದರ್ಭ ರೈಲ್ವೇ ಪೈಲೆಟ್ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ನೀಡಿದ ಮಾಹಿತಿಯಂತೆ ಪುತ್ತೂರು ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಬಂದಿತ್ತಾದರೂ ವ್ಯಕ್ತಿ ಆಗಲೇ ಮೃತಪಟ್ಟಿದ್ದರಿಂದ ಮುಂದೆ ರೈಲ್ವೇ ಇಲಾಖೆಯ ಪೊಲೀಸ್ ಬಂದ ಬಳಿಕ ಮೃತ ದೇಹವನ್ನು ಆಸ್ಪತ್ರೆಗೆ ಸಾಗಿಸುವ ನಿಟ್ಟಿನಲ್ಲಿ ರೈಲು ನಿಲ್ದಾಣದಲ್ಲಿ ಮೃತ ದೇಹವನ್ನು ಇರಿಸಲಾಗಿದೆ ಎಂದು ತಿಳಿದು ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು