News Karnataka Kannada
Tuesday, May 07 2024
ಮಂಗಳೂರು

ಮಂಗಳೂರಿನಲ್ಲಿ ಕನ್ನಡ ವರ್ಸಸ್‌ ತುಳು: ಬಸ್‌ ಗಳಿಗೆ ಕನ್ನಡ ನಾಮಫಲಕ ಸ್ಟಿಕರ್ ಅಭಿಯಾನ

Kannada vs Tulu language in Mangaluru
Photo Credit : News Kannada

ಮಂಗಳೂರು: ಮಂಗಳೂರಿನಲ್ಲಿ ಮತ್ತೆ ತುಳು ವರ್ಸಸ್‌ ಕನ್ನಡ ಫೈಟ್ ಮುನ್ನೆಲೆಗೆ ಬಂದಿದೆ. ಡಿ.5ರಂದು ಖಾಸಗಿ ಬಸ್ ರೂಟ್ ಗಳಿಗೆ ಕನ್ನಡ ನಾಮಫಲಕ ಸ್ಟಿಕರ್ ಅಭಿಯಾನ ನಡೆದಿತ್ತು.

ಅನೇಕ ಖಾಸಗಿ ಬಸ್ ಗಳಲ್ಲಿ ಆಂಗ್ಲ ಭಾಷೆಯಲ್ಲಿ ರೂಟ್ ನಾಮಫಲಕವಿದ್ದು, ಆಂಗ್ಲ ಭಾಷೆಯ ನಾಮಫಲಕವಿದ್ದ ಬಸ್ ಗಳಿಗೆ ಕನ್ನಡ ನಾಮಫಲಕದ ಸ್ಟಿಕರ್ ಅಳವಡಿಕೆ ಮಾಡಲಾಗಿತ್ತು. ಅಲ್ಲದೆ ಸ್ಥಳದಲ್ಲಿಯೇ ಕನ್ನಡ ಸ್ಟಿಕರ್ ಅಂಟಿಸಿ ಸ್ಟಿಕರ್ ಬಾಬ್ತು ವಸೂಲಿ ಮಾಡಲಾಗಿತ್ತು. ಇದೀಗ ಕನ್ನಡ ಪರ ಹೋರಾಟಗಾರರ ನಿಲುವಿನ ವಿರುದ್ಧ ಬಸ್ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಸ್ ಮಾಲೀಕ ಹಾಗು ತುಳು ಭಾಷಾ ಹೋರಾಟಗಾರ ದಿಲ್ ರಾಜ್ ಆಳ್ವ ಅಭಿಯಾನ ವಿರೋಧಿಸಿ ಹೇಳಿಕೆ ನೀಡಿದ್ದಾರೆ. ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ಕನ್ನಡ ಹೇರಲು ಸಾಧ್ಯವಿಲ್ಲ. ಬಸ್ ನಲ್ಲಿ ರೂಟ್ ನಾಮಫಲಕ ಬರೆಯಬೇಕೆ ಹೊರತು ಇಂತಹದ್ದೇ ಭಾಷೆಯಲ್ಲಿ ಬರೆಯಬೇಕೆಂದಿಲ್ಲ. ದಕ್ಷಿಣ ಕನ್ನಡ ಉಡುಪಿಯಲ್ಲಿ ಹೊರ ಜಿಲ್ಲೆಗಳಿಂದ ಬರುವವರ ಸಂಖ್ಯೆ ಹೆಚ್ಚಿದೆ. ಜನರ ಅನುಕೂಲಕ್ಕಾಗಿ ಕನ್ನಡ ಹಾಗು ಇಂಗ್ಲಿಷ್ ಎರಡನ್ನೂ ಬಳಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ಕನ್ನಡವನ್ನ ಹೇರಲು ಸಾಧ್ಯವಿಲ್ಲ. ತುಳುನಾಡಿನ ಪ್ರದೇಶದಲ್ಲಿ ತುಳು ಮಾತನಾಡುವವರ ಸಂಖ್ಯೆ ಜಾಸ್ತಿಇದೆ. ತುಳು ಭಾಷೆಯನ್ನ ರಾಜ್ಯದ ಎರಡನೇ ಅಧಿಕೃತ ಭಾಷೆ ಮಾಡಬೇಕೆಂಬ ಕೂಗು ಹೆಚ್ಚಿದೆ.

ಈ ಸಂದರ್ಭ ಇಂತಹ ಹೇರಿಕೆ ಯಾವುದೇ ಕಾರಣಕ್ಕೂ ಮಾಡಬಾರದು. ಆರ್ ಟಿಒ ಪರ್ಮಿಟ್ ನಿಬಂಧನೆಗಳಲ್ಲಿ ಈ ರೀತಿಯ ಯಾವುದೇ ನಿಯಮವಿಲ್ಲ. ರೂಟ್ ನಂಬರ್ ,ಪ್ರದೇಶಗಳ ಸೂಚನ ಫಲಕಗಳನ್ನ ಹಾಕಬೇಕು ಎಂಬ ನಿಯಮವಿದೆಯೇ ಹೊರತು ಭಾಷೆಯ ಕುರಿತು ಉಲ್ಲೇಖವಿಲ್ಲ. ಮುಂದಿನ ದಿವಸಗಳಲ್ಲಿ ಆರ್ ಟಿ ಓ ಮೂಲಕ ದಂಡ ಹಾಕಲು ಮುಂದಾದರೆ ನಾವು ಬಿಡುವುದಿಲ್ಲ ಎಂದು ಬಸ್ ಮಾಲೀಕ ಹಾಗು ತುಳು ಪರ ಹೋರಾಟಗಾರ ದಿಲ್ ರಾಜ್ ಆಳ್ವ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ಅಭಿಯಾನದಲ್ಲಿ ಭಾಗಿಯಾದ ಕನ್ನಡ ಪರ ಹೋರಾಟಗಾರ ಜಿ.ಕೆ ಭಟ್ ಪ್ರತಿಕ್ರಿಯೆ ನೀಡಿದ್ದು, ಖಾಸಗಿ ಬಸ್ ಗಳಲ್ಲಿ ಆಂಗ್ಲ ಭಾಷೆಗಳಲ್ಲಿ ಮಾತ್ರ ನಾಮಫಲಕ ಹಾಕುತ್ತಿದ್ದಾರೆ. ಕನ್ನಡ ಬಳಕೆಯ ಬಗ್ಗೆ ಜಿಲ್ಲಾಧಿಕಾರಿಗೆ  ಮನವಿ ಕೊಟ್ಟಾಗ ಸಾರಿಗೆ ಅಧಿಕಾರಿಗಳು ಇದನ್ನ ಅಭಿಯಾನ ಮಾಡುತ್ತೇವೆ ಎಂದು ಬೆಂಬಲ ನೀಡಿದ್ದಾರೆ.

ಬುಧವಾರ ಒಂದು ಗಂಟೆಯ ಅಭಿಯಾನ ಮಾಡಿದ್ದೇವೆ. ೨೦ರಿಂದ ೨೫ ಬಸ್ ಗಳಿಗೆ ಕನ್ನಡದ ನಾಮ ಫಲಕ ಹಾಕಿದ್ದೇವೆ. ಮುಂದೆ ಒಂದು ದಿನದ ಅಭಿಯಾನ ಮಾಡುತ್ತೇವೆ. ಕೆಲವು ಬಸ್, ಸಿಬ್ಬಂದಿ ಕಿರಿಕಿರಿ ಮಾಡಿದ್ದಾರೆ. ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ಕೊಡಬೇಕು ಅನ್ನೋದು ನಮ್ಮ ಉದ್ದೇಶ. ಕನ್ನಡ ನೆಲದಲ್ಲಿ ಹುಟ್ಟಿ ಕನ್ನಡಕ್ಕೆ ಗೌರವ ಕೊಡಬೇಕು. ಬಸ್ಸು ಮಾಲೀಕರಿಗೆ ಇದರ ಬಗ್ಗೆ ಪರಿಜ್ಞಾನವಿರಬೇಕು. ತುಳು ಭಾಷೆಗೆ ವಿರೋಧವಲ್ಲ ,ತುಳು ಲಿಪಿಯಲ್ಲಿ ಬರೆದಲ್ಲಿ ಎಲ್ಲರಿಗೂ ಓದಲು ಅಸಾಧ್ಯ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೫% ಜನರಿಗೆ ತುಳು ಲಿಪಿಯ ಜ್ಞಾನವಿರಬಹುದು. ತುಳು ಭಾಷೆಯನ್ನೂ ಬೇಕಾದರೆ ಹಾಕಲಿ ಆದರೆ ಪ್ರಧಾನವಾಗಿ ಕನ್ನಡವೇ ರಾಜ ಎಂದು ಭಟ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು