News Karnataka Kannada
Saturday, April 27 2024
ಮಂಗಳೂರು

ಮಂಗಳೂರು: ಬ್ಯಾಂಕ್ ಆಫ್ ಬರೋಡಾದಿಂದ ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಹಿಂದಿ ಭಾಷೆಯಲ್ಲಿ ಆರಂಭ

Bank of Baroda launches internet banking service in Hindi
Photo Credit : By Author

ಮಂಗಳೂರು: ಅಧಿಕೃತ ಭಾಷಾ ಇಲಾಖೆಯ ಆಶ್ರಯದಲ್ಲಿ ಆಯೋಜಿಸಲಾದ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಯನ್ನು ಹಿಂದಿ ಭಾಷೆಯಲ್ಲಿ ಭಾರತ ಸರ್ಕಾರದ ಕಾರ್ಯದರ್ಶಿ ಅಂಶುಲಿ ಆರ್ಯ( ಐಎಎಸ್ ) ಉದ್ಘಾಟಿಸಿದರು.

ಕಾರ್ಯದರ್ಶಿಯವರು ಬ್ಯಾಂಕಿನ ವಾರ್ಷಿಕ ಅಧಿಕೃತ ಭಾಷಾ ಕ್ರಿಯಾ ಯೋಜನೆ 2022-23 ಬಿಡುಗಡೆ ಮಾಡಿದರು. ನವದೆಹಲಿಯಲ್ಲಿ ಗೃಹ ಸಚಿವಾಲಯದ ಸಹಯೋಗದೊಂದಿಗೆ ಬ್ಯಾಂಕ್ ಆಫ್ ಬರೋಡಾ, ನವದೆಹಲಿ ವಲಯ ಕಚೇರಿಯು ಬ್ಯಾಂಕಿನ ಹಿರಿಯ ಕಾರ್ಯನಿರ್ವಾಹಕರಿಗೆ “ತಂತ್ರಜ್ಞಾನದೊಂದಿಗೆ ಅಧಿಕೃತ ಭಾಷೆಯ ಅಭಿವೃದ್ಧಿ” ಎಂಬ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು.

ಅಂಶುಲಿ ಆರ್ಯ (ಐಎಎಸ್), ಕಾರ್ಯದರ್ಶಿ, ಭಾರತ ಸರ್ಕಾರ, ಗೃಹ ಸಚಿವಾಲಯ, ಅಧಿಕೃತ ಭಾಷಾ ಇಲಾಖೆ ರವರು, ಬ್ಯಾಂಕ್ ಆಯೋಜಿಸಿದ್ದ ವಿಚಾರ ಸಂಕಿರಣದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವದೆಹಲಿ ವಲಯದ ಪ್ರಧಾನ ವ್ಯವಸ್ಥಾಪಕ ಮತ್ತು ವಲಯ ಮುಖ್ಯಸ್ಥರಾದ ಅಮಿತ್ ತುಲಿ ವಹಿಸಿದ್ದರು.

ಕಾರ್ಯಕ್ರಮಕ್ಕೆ  ಮುಖ್ಯ ಅತಿಥಿ  ಆಗಮಿಸಿದ ಅಂಶುಲಿ ಆರ್ಯ (ಐಎಎಸ್), ಕಾರ್ಯದರ್ಶಿ, ಭಾರತ ಸರ್ಕಾರ, ಅಧಿಕೃತ ಭಾಷಾ ಇಲಾಖೆ ಅವರು ಬ್ಯಾಂಕ್‌ನ ಇಂಟರ್ನೆಟ್ ಬ್ಯಾಂಕಿಂಗ್‌ನ ಸೇವೆಯನ್ನು ಹಿಂದಿ ಭಾಷೆಯಲ್ಲಿ ಹಾಗೂ ಬ್ಯಾಂಕಿನ 2022-23ರ ವಾರ್ಷಿಕ ಅಧಿಕೃತ ಭಾಷಾ ಕ್ರಿಯಾ ಯೋಜನೆಯನ್ನು ಉದ್ಘಾಟಿಸಿದರು.

ಸಂಜಯ್ ಸಿಂಗ್, (ಅಧಿಕೃತ ಭಾಷೆ ಮತ್ತು ಸಂಸದೀಯ ಸಮಿತಿ) ಮುಖ್ಯಸ್ಥರು ಬ್ಯಾಂಕ್ ಕೈಗೊಂಡ ಅಧಿಕೃತ ಭಾಷಾ ಉಪಕ್ರಮಗಳ ಬಗ್ಗೆ ವಿವರವಾದ ಪ್ರಸ್ತುತಿಯನ್ನು ನೀಡಿದರು. ನಂತರ ಕಾರ್ಯದರ್ಶಿಯವರು ‘ ಅಧಿಕೃತ ಭಾಷೆ ಅನುಷ್ಠಾನದಲ್ಲಿ ಹಿರಿಯ ಕಾರ್ಯನಿರ್ವಾಹಕರ ಪಾತ್ರ ‘ ವಿಷಯದ ಕುರಿತು ತಮ್ಮ ಮಾರ್ಗದರ್ಶಿ ಭಾಷಣ ನೀಡಿದರು, ಇದರಲ್ಲಿ ಅವರು ಬ್ಯಾಂಕ್ನ ಪ್ರಸ್ತುತಿಯನ್ನು ಶ್ಲಾಘಿಸಿದರು. ಅವರು ವಿಶೇಷವಾಗಿ ಬ್ಯಾಂಕ್‌ನ ‘ ಭಾಷಾಯಿ ಚೌಪಲ್ ‘ ಉಪಕ್ರಮವನ್ನು ಎತ್ತಿ ತೋರಿಸುವುದು ಮತ್ತು ಅಧಿಕೃತ ಭಾಷೆಯಲ್ಲಿ ಗಮನಾರ್ಹ ಕೊಡುಗೆಗಾಗಿ ವಾರ್ಷಿಕ ಕಾರ್ಯಕ್ಷಮತೆ ಮೌಲ್ಯಮಾಪನದಲ್ಲಿ ನೀಡಬೇಕಾದ ಅಂಕಗಳನ್ನು ಒದಗಿಸುವುದು, ಬ್ಯಾಂಕ್ ಮಾಡಿದ ವಿನೂತನ ಕಾರ್ಯ ಅಧಿಕೃತ ಕ್ಷೇತ್ರದ ಒಂದು ಮೈಲಿಗಲ್ಲು ಎಂದು ಬಣ್ಣಿಸಿದರು.

ಈ ಕಾರ್ಯಕ್ರಮದಲ್ಲಿ  ಅಮಿತ್ ತುಲಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹಿಂದಿಯನ್ನು ಮನಃಪೂರ್ವಕವಾಗಿ ಅಳವಡಿಸಿಕೊಳ್ಳಲು ಮತ್ತು ಇಂಗ್ಲಿಷ್ ವ್ಯಾಮೋಹವನ್ನು ಹೋಗಲಾಡಿಸಲು ವಿನಂತಿಸಿದರು. ತಾಂತ್ರಿಕ ಅಧಿವೇಶನವನ್ನು ಅಧಿಕೃತ ಭಾಷಾ ಇಲಾಖೆಯ ಉಪ ನಿರ್ದೇಶಕರಾದ  ರಾಜೇಶ್ ಶ್ರೀವಾಸ್ತವ ಮತ್ತು ನವದೆಹಲಿ ವಲಯದ ಮುಖ್ಯ ಪ್ರಬಂಧಕರು (ಅಧಿಕೃತ ಭಾಷೆ)  ಪಂಕಜ್ ಕುಮಾರ್ ವರ್ಮಾ ಅವರು ನಡೆಸಿಕೊಟ್ಟರು.

ಪ್ರಧಾನ ಕಛೇರಿಯ ಅಧಿಕೃತ ಭಾಷಾ ಇಲಾಖೆಯ ಸಹಾಯಕ ಮಹಾ ಪ್ರಬಂಧಕರಾದ  ಪುನೀತ್ ಕುಮಾರ್ ಮಿಶ್ರಾ ಕಾರ್ಯಕ್ರಮವನ್ನು ನಿರ್ವಹಿಸಿದರು. ವಲಯದ ವಿವಿಧ ಶಾಖೆಗಳಲ್ಲಿ ಶಾಖೆಯ ಮುಖ್ಯಸ್ಥರಾಗಿ ನೇಮಕಗೊಂಡ ಕಾರ್ಯನಿರ್ವಾಹಕರು, ವಿಭಾಗಗಳ ಮುಖ್ಯಸ್ಥರು, ನವದೆಹಲಿ ವಲಯದ ಪ್ರಾದೇಶಿಕ ಮತ್ತು ಉಪ-ಪ್ರಾದೇಶಿಕ ಮುಖ್ಯಸ್ಥರು ಸೇರಿದಂತೆ ಸುಮಾರು 100 ಕ್ಕಿಂತ ಹೆಚ್ಚು ಜನ ಸೆಮಿನಾರ್‌ನಲ್ಲಿ ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು