ಲಲಿತ್ಪುರ: ಉತ್ತರ ಪ್ರದೇಶದ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದ ಮಹಿಳೆಯ ದೇಹವನ್ನು ಇಲಿಗಳು ಕಚ್ಚಿ ತಿಂದಿರುವ ಘಟನೆ ನಡೆದಿದೆ. ಮಹಿಳೆ ಡಿಸೆಂಬರ್ 2 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ.
ಆಕೆಯ ದೇಹವನ್ನು ಅದೇ ದಿನ ರಾತ್ರಿ ಪೊಲೀಸರು ಶವಾಗಾರಕ್ಕೆ ಸ್ಥಳಾಂತರಿಸಿದ್ದಾರೆ. ಮಹಿಳೆಯ ದೇಹವನ್ನು ಸರಿಯಾಗಿ ಮುಚ್ಚಿಲ್ಲದ ಕಾರಣ ಮಹಿಳೆಯ ದೇಹವನ್ನುಇಲಿಗಳು ಕಚ್ಚಿ ತಿಂದಿವೆ. ಶವಪರೀಕ್ಷೆ ನಡೆಸುವ ಮೊದಲು ಮಹಿಳೆಯ ಕುಟುಂಬದ ಸದಸ್ಯರು, ಪೊಲೀಸರು ಮತ್ತು ಆಸ್ಪತ್ರೆಯ ಸಿಬ್ಬಂದಿ ಕಚ್ಚಿದ ಗುರುತುಗಳನ್ನು ಗಮನಿಸಿದ ನಂತರ ಡಿಸೆಂಬರ್ 3 ರಂದು ಈ ವಿಷಯ ಬೆಳಕಿಗೆ ಬಂದಿದೆ.