News Karnataka Kannada
Thursday, May 02 2024
ಮಂಗಳೂರು

ಕಲಾಕುಲ್ ನಲ್ಲಿ ಜು. 01 ರಿಂದ ಒಂದು ವರ್ಷದ ರಂಗ ತರಬೇತಿ ಡಿಪ್ಲೋಮಾ ಕೋರ್ಸ್ ಆರಂಭ

Pmeet
Photo Credit : NewsKarnataka

ಮಂಗಳೂರು: ಒಂದು ವರ್ಷದ ರಂಗ ತರಬೇತಿ ಡಿಪ್ಲೋಮಾ ಕೋರ್ಸ್  ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರೊಡನೆ ಒಡಂಬಡಿಕೆ ಮಾಡಿಕೊಂಡ ಮಂಗಳೂರಿನ ಕೊಂಕಣಿ ನಾಟಕ ರೆಪರ್ಟರಿ ಕಲಾಕುಲ್ ಇಲ್ಲಿ ಒಂದು ವರ್ಷದ ರಂಗ ತರಬೇತಿ ಡಿಪ್ಲೋಮಾ ಕೋರ್ಸ್ ಆರಂಭಿಸಲಾಗುತ್ತದೆ ಎಂದು ಇಂದು ನಗರದಲ್ಲಿ ನಡೆದ  ಪತ್ರಿಕಾಗೋಷ್ಠಿಯಲ್ಲಿ ಶ್ರೀ ಎರಿಕ್ ಒಝೇರಿಯೊ – ಗುರಿಕಾರ, ಮಾಂಡ್ ಸೊಭಾಣ್ ತಿಳಿಸಿದ್ದಾರೆ.

ಕೊಂಕಣಿ ಸಾಂಸ್ಕøತಿಕ ಕ್ಷೇತ್ರದ ದಿಗ್ಗಜ ಮಾಂಡ್ ಸೊಭಾಣ್ ಕೊಂಕಣಿ ರಂಗಭೂಮಿಗೆ ಮಹತ್ತರ ಕೊಡುಗೆ ನೀಡಿದೆ. `ಕಲಾಕುಲ್’ ಕೊಂಕಣಿಯ ಏಕಮಾತ್ರ ನಾಟಕ ರೆಪರ್ಟರಿಯನ್ನು ಆರಂಭಿಸಿ, ಆಧುನಿಕ ನಾಟಕಗಳನ್ನು ರಚಿಸಿ ಪ್ರದರ್ಶಿಸಿದ ಕೀರ್ತಿ ಇದಕ್ಕೆ ಸಲ್ಲುತ್ತದೆ. ಕಳೆದ 13 ವರ್ಷಗಳಿಂದ ಖಾಸಗಿಯಾಗಿ ಕೊಂಕಣಿ ರಂಗಭೂಮಿ ಡಿಪ್ಲೋಮಾ ನಡೆಸುತ್ತಿದ್ದು, ಇದುವರೆಗೆ ನೂರಾರು ವಿದ್ಯಾರ್ಥಿಗಳು ಈ ಡಿಪ್ಲೋಮಾ ಪಡೆದಿದ್ದಾರೆ. ಸುಮಾರು 50 ನಾಟಕ, ಕಿರುನಾಟಕಗಳ 250 ಕ್ಕೂ ಮಿಕ್ಕಿ ಪ್ರದರ್ಶನಗಳು ದೇಶ ವಿದೇಶಗಳಲ್ಲಿ ನಡೆದಿವೆ.

ಮಾಂಡ್ ಸೊಭಾಣ್ ಸಂಸ್ಥೆಯು `ಕಲಾಂಗಣ’ ಸಾಂಸ್ಕøತಿಕ ಕೇಂದ್ರವನ್ನು ಸ್ಥಾಪಿಸಿದ್ದು ಇಲ್ಲಿ ಅನನ್ಯ ಬಯಲು ರಂಗ ಮಂದಿರದೊಡನೆ, ರಂಗ ತರಬೇತಿ ಮತ್ತು ಸಂಶೋಧನೆಗೆ ಅಗತ್ಯವಿರುವ ಎಲ್ಲಾ ಸವಲತ್ತುಗಳನ್ನು ಕಲ್ಪಿಸಲಾಗಿದೆ. ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ನೇತೃತ್ವದ ತಂಡ ಆಗಮಿಸಿ, ಪರಿಶೀಲಿಸಿದ ಬಳಿಕ ಕಲಾಕುಲ್ ವತಿಯಿಂದ ಒಂದು ವರ್ಷದ ರಂಗ ತರಬೇತಿ ಡಿಪ್ಲೋಮಾ ನಡೆಸಲು ಅನುಮೋದನೆ ನೀಡಿದೆ. ವಿಶ್ವವಿದ್ಯಾಲಯದ ನಿರ್ದೇಶನದ ಮೇರೆಗೆ ಆಡಳಿತ ಸಮಿತಿ ರಚಿಸಲಾಗಿದ್ದು, ಅದು ಸಭೆ ಸೇರಿ ಶೈಕ್ಷಣಿಕ ಮಾರ್ಗದರ್ಶಿ ಸೂತ್ರಗಳನ್ನು ರಚಿಸಿದೆ. ಅದರಂತೆ ಸೂಕ್ತ ತಯಾರಿ ನಡೆಸಿದ್ದು, ಎನ್‍ಎಸ್‍ಡಿ ಮತ್ತು ರಂಗಾಯಣದಿಂದ ಪದವಿ ಪಡೆದ ಉಪನ್ಯಾಸಕರನ್ನು ನೇಮಿಸಲಾಗುವುದು.

ಜುಲೈ 01 ರಿಂದ ಆರಂಭವಾಗುವ 2024-25 ನೇ ಶೈಕ್ಷಣಿಕ ವರ್ಷದಿಂದ ಈ ರಂಗ ತರಬೇತಿ ಡಿಪ್ಲೋಮಾ ಕೋರ್ಸನ್ನು ಆರಂಭಿಸಲಾಗುವುದು. ಕನಿಷ್ಠ ಪಿಯುಸಿ ವಿದ್ಯಾರ್ಹತೆ ಹೊಂದಿದ ಯಾವುದೇ ಮಾತೃಭಾಷಿಕ ವಿದ್ಯಾರ್ಥಿಗಳು ಈ ಡಿಪ್ಲೋಮಾ ಪಡೆಯಲು ಅರ್ಹರಾಗಿದ್ದು, ಒಂದು ವರ್ಷದ ಎರಡು ಸೆಮಿಸ್ಟರ್‍ನ ಈ ಕೋರ್ಸ್ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ನಡೆಯಲಿದೆ. ಅಂತಿಮ ಪರೀಕ್ಷೆಯನ್ನು ವಿಶ್ವವಿದ್ಯಾಲಯವೇ ನಡೆಸುತ್ತದೆ. ಇದು ಪೂರ್ಣಕಾಲೀಕ ಕೋರ್ಸ್ ಆಗಿದ್ದು, ಈ ಕೋರ್ಸ್ ಪಡೆದವರಿಗೆ ಶಾಲೆ ಕಾಲೇಜುಗಳಲ್ಲಿ ರಂಗ ತರಬೇತಿ ಶಿಕ್ಷಕರಾಗಿ ದುಡಿಯಲು ಅವಕಾಶ ಲಭಿಸಲಿದೆ. ಅಗತ್ಯವುಳ್ಳವರಿಗೆ ಹಾಸ್ಟೆಲ್ ಸೌಲಭ್ಯವಿದೆ.

ಈ ಕೋರ್ಸ್‍ಗೆ ಸೇರಲಿಚ್ಛಿಸುವ ವಿದ್ಯಾರ್ಥಿಗಳು ಅರ್ಜಿಗಳನ್ನು www.manddsobhann.org ಯಿಂದ ಡೌನ್‍ಲೋಡ್ ಮಾಡಿ, ಸರಿಯಾಗಿ ಭರ್ತಿ ಮಾಡಿ, ಸೂಕ್ತ ದಾಖಲೆಗಳೊಂದಿಗೆ, ಜೂನ್ 15ರೊಳಗೆ ಕಲಾಂಗಣ, ಮಕಾಳೆ, ಶಕ್ತಿನಗರ, ಮಂಗಳೂರು 575016 ಇಲ್ಲಿಗೆ ಅಂಚೆ ಮೂಲಕ ಅಥವಾ ಕೈಯಾರೆ ತಲುಪಿಸಬೇಕು.
Pmeet

ಹೆಚ್ಚಿನ ಮಾಹಿತಿಗಾಗಿ (63640 22333-ಆಡಳಿತಾಧಿಕಾರಿ ಅಥವಾ 81052 26626-ಕಛೇರಿ) ಇಲ್ಲಿ ಸಂಪರ್ಕಿಸಬಹುದು ಎಂದರು. ಇನ್ನು  ಪತ್ರಿಕಾ ಗೋಷ್ಠಿಯಲ್ಲಿ
ಶ್ರೀ ಎರಿಕ್ ಒಝೇರಿಯೊ – ಗುರಿಕಾರ, ಮಾಂಡ್ ಸೊಭಾಣ್.,  ಶ್ರೀ ಲುವಿ ಜೆ. ಪಿಂಟೊ – ಅಧ್ಯಕ್ಷ, ಮಾಂಡ್ ಸೊಭಾಣ್., ವಿದುಷಿ ರಾಜಶ್ರೀ ಎಸ್ ಶೆಣೈ, ಸದಸ್ಯರು, ಆಡಳಿತ ಸಮಿತಿ
ಡಾ ಎಸ್‍ಬಿಎಮ್ ಪ್ರಸನ್ನ, ಸದಸ್ಯರು, ಆಡಳಿತ ಸಮಿತಿ.,  ಶ್ರೀ ಅರುಣ್ ರಾಜ್ ರೊಡ್ರಿಗಸ್ – ಆಡಳಿತಾಧಿಕಾರಿ, ಕಲಾಕುಲ್ ಮತ್ತು ಸದಸ್ಯ ಕಾರ್ಯದರ್ಶಿ, ಆಡಳಿತ ಸಮಿತಿ ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು