ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ಮೋದಿ ಬಗ್ಗೆ ಅವಹೇಳನ ಪೋಸ್ಟ್ ಹಾಕಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಟ್ಕಳ ಬಿಜೆಪಿ ಮಂಡಳದ ವತಿಯಿಂದ ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಹೊನ್ನಾವರ ಫ್ರೆಂಡ್ಸ್ ಗ್ರೂಪ್ ಇನ್ ಎಂಎಸ್ವಿ ಮೀಡಿಯಾ’ ಮತ್ತು ‘ಯಂಗ್ ಒನ್ ಇಂಡಿಯಾ’ ವಿರುದ್ಧ ಬಿಜೆಪಿ ಮಂಡಲಾಧ್ಯಕ್ಷರು ದೂರು ನೀಡಿದ್ದಾರೆ.
‘ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿಗಳ ಮಾನಹಾನಿ, ತೇಜೋವಧೆಯಂತಹ ಸಂದೇಶ ಹಾಕಲಾಗಿದೆ. ದೇಶದ ಪ್ರಧಾನಿ ವಿರುದ್ಧ ಇಂತಹ ಅವಮಾನಕರ ಕೃತ್ಯ ನಡೆಸುವ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ತಿಳಿಸಲಾಗಿದೆ.