News Karnataka Kannada
Sunday, April 28 2024
ಮಂಗಳೂರು

ಮಂಗಳೂರು: ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ನಡೆಸಿದ ಜೆಡಿಎಸ್ ಅಭ್ಯರ್ಥಿ ಡಾ.‌ಸುಮತಿ ಹೆಗ್ಡೆ

Jd(S) candidate Dr. Sumathi Hegde
Photo Credit : News Kannada

ಮಂಗಳೂರು: ಇಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ‌ ಜೆಡಿಎಸ್ ಅಭ್ಯರ್ಥಿ ಸುಮತಿ ಹೆಗ್ಡೆಯವರು ಮಂಗಳೂರು ನಗರದ ಅತ್ತಾವರ ಹಾಗೂ ಹಲವು ಕಡೆ ಮನೆ ಮನೆಗೆ ತೆರಳಿ ಬಿರುಸಿನ ಮತ ಯಾಚನೆ ಮಾಡಿದರು‌.

ಈ‌ ಸಂದರ್ಭ ಜೆಡಿಎಸ್ ರಾಜ್ಯ ಮೀನುಗಾರಿಕೆ ಅದ್ಯಕ್ಷ ರತ್ನಾಕರ್ ಸುವರ್ಣ, ರಾಜ್ಯ ಸಂಘಟಣಾ ಕಾರ್ಯದರ್ಶಿ ಝಮೀರ್ ಶಾ, ಮಾಜಿ ರಾಜ್ಯ ಯುವ ಜನತಾದಳ ಕಾರ್ಯದರ್ಶಿ ಶ್ರೀನಾಥ್ ರೈ, ದಿನೇಶ್ ಮೈಕಲ್ ಪಯಿಸ್, ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಉಷಾ ಟೀಚರ್ , ಪ್ರಿಯಾ ಸಾಲಿಯನ್, ಅಲ್ತಾಫ್ ತುಂಬೆ , ಅನ್ಸಾರ್ , ಲತೀಫ್ ಶಿವಭಾಗ್, ಕವಿತಾ , ಹಾಗೂ ಹಲವಾರು ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಮತಯಾಚನೆ ಸಂದರ್ಭ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕಿತ್ತಿದ್ದು, ಪಕ್ಷ‌ದ ಅಭ್ಯರ್ಥಿ ಕ್ಷೇತ್ರದ ಮತದಾರರ ಅಹವಾಲುಗಳನ್ನು ಸ್ಪೀಕರಿಸಿ , ಗೆದ್ದು ಬಂದರೆ ಪರಿಹರಿಸುವ ಭರವಸೆ ನೀಡಿದರು.‌ ಮತಯಾಚನೆಯ ಸಂದರ್ಭ ಸಾರ್ವಜನಿಕರು ಈ‌ ಬಾರಿ ಬದಲಾವಣೆ ಬಯಸಿ, ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ದೂರ ಇಡುವ ಬಗ್ಗೆ ತಿಳಿಸಿದ್ದು ಜೆಡಿಎಸ್ ಪಕ್ಷಕ್ಕೆ ಸಕಾರಾತ್ಮಕವಾದ ಸ್ಪಂದನೆ ದೊರಕುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು