News Karnataka Kannada
Sunday, May 12 2024
ಮಂಗಳೂರು

ಬೆಳ್ತಂಗಡಿ: ಗೂಡ್ಸ್ ಟೆಂಪೋ ಗೆ ಬೈಕ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು

Bike rider killed as bike collides with goods tempo in Belthangady
Photo Credit : News Kannada

ಬೆಳ್ತಂಗಡಿ: ಇಲ್ಲಿನ ನಾರಾವಿ ಗ್ರಾಮದ ಅರಸುಕಟ್ಟೆ ಹೆಗ್ಡೆ ಫರ್ನಿಚರ್ ಅಂಗಡಿ ಬಳಿ ಬೈಕ್ ಗೂಡ್ಸ್ ಟೆಂಪೋ ಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಎ. 27 ರಂದು ಸಂಭವಿಸಿದೆ.

ಬೈಕ್ ಸವಾರ ತಣ್ಣೀರುಪಂತ ನಿವಾಸಿ ಜೋಕಿ ರೋಡ್ರಿಗಸ್‌(68) ಸ್ಥಳದಲ್ಲೇ ಮೃತಪಟ್ಟವರು.

ಎ. 27 ರಂದು ಸುಮಾರು ಮಧ್ಯಾಹ್ನ 1 ಗಂಟೆಗೆ ಬೆಳ್ತಂಗಡಿ ತಾಲೂಕು ನಾರಾವಿ ಗ್ರಾಮದ ಅರಸುಕಟ್ಟೆ ಹೆಗ್ಡೆ ಫರ್ನಿಚರ್ ಅಂಗಡಿ ಬಳಿ  ಬೈಕ್‌  ಸವಾರ ಜೋಕಿ ರೋಡ್ರಿಗಸ್‌ ಎಂಬವರು ಗುರುವಾಯನಕೆರೆ ಕಡೆಯಿಂದ ನಾರಾವಿ ಕಡೆಗೆ ಬರುತ್ತಿದ್ದು, ಒಮ್ಮೆಲೇ ರಸ್ತೆಯ ರಾಂಗ್‌ ಸೈಡಿಗೆ ಚಲಾಯಿಸಿ ನಾರಾವಿ ಕಡೆಯಿಂದ ಖಾಲಿದ್‌ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ 407 ಟೆಂಪೋ ಗೂಡ್ಸ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಬೈಕ್‌  ರಸ್ತೆಗೆ ಎಸೆಯಲ್ಪಟ್ಟು ತಲೆಗೆ, ಬಲ ಕಾಲಿಗೆ, ಎಡ ಕೈಗೆ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರೃನ್ನಲಾಗಿದೆ.

ಈ ಬಗ್ಗೆ ವೇಣೂರು ಪೊಲೀಸರು ಠಾಣಾ 24/2023 ಕಲಂ: 279,304(A) IPCಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು