News Karnataka Kannada
Friday, May 10 2024
ಮಂಗಳೂರು

ಧರ್ಮಸ್ಥಳ ಶಾಲೆಯಲ್ಲಿ ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯದ ತರಗತಿಗಳ ಉದ್ಘಾಟನಾ ಸಮಾರಂಭ

Inauguration ceremony of classical music, classical dance classes at Dharmasthala English Medium School
Photo Credit : News Kannada

ಬೆಳ್ತಂಗಡಿ: ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ವಿಶೇಷ ಒತ್ತು ನೀಡುವ ಸಲುವಾಗಿ ಧರ್ಮಸ್ಥಳದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಸ್ತ್ರೀಯ ಸಂಗೀತ ಹಾಗೂ ಶಾಸ್ತ್ರೀಯ ನೃತ್ಯದ ತರಗತಿಗಳ ಉದ್ಘಾಟನಾ ಸಮಾರಂಭ ಜೂ 7ರಂದು ನೆರವೇರಿತು.

ಅದೇ ಶಾಲೆಯ ಹಳೆಯ ವಿದ್ಯಾರ್ಥಿನಿ ಭರತನಾಟ್ಯದಲ್ಲಿ ವಿಶೇಷ ಸಾಧನೆ ಮಾಡಿರುವ ಕುಮಾರಿ ಧರಿತ್ರಿ ಬಿಡೆ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಮನಸ್ಸನ್ನು ಕೇಂದ್ರೀಕರಿಸಲು ನೃತ್ಯ ಹಾಗೂ ಸಂಗೀತ ಎರಡು ಉತ್ತಮ ಸಾಧನಗಳು. ಎರಡೂ ಒಂದೇ ನಾಣ್ಯದ ಮುಖಗಳಿದ್ದಂತೆ. ಶ್ರದ್ಧೆ ಹಾಗೂ ಏಕಾಗ್ರತೆ ಇದ್ದರೆ ಬದುಕಿನಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು. ಹಲವು ರೋಗಗಳಿಗೆ ಇದು ರಾಮಬಾಣವೂ ಹೌದು ಎಂದು ತನ್ನ ವೈಯಕ್ತಿಕ ಜೀವನದ ಹಲವು ಯಶಸ್ಸಿನ ಉದಾಹರಣೆಗಳನ್ನು ನೀಡಿ ಶುಭ ಕೋರಿದರು.

ಶಾಸ್ತ್ರೀಯ ಸಂಗೀತದ ತರಬೇತುದಾರರಾಗಿರುವ ನಿವೃತ್ತ ಶಿಕ್ಷಕಿ  ಮನೋರಮ ತೋಳ್ಪಡಿತ್ತಾಯ ವಿದ್ಯಾರ್ಥಿ ಜೀವನದಲ್ಲಿ ಸಂಗೀತದ ಮಹತ್ವವನ್ನು ವಿವರಿಸಿದರು. ಭರತನಾಟ್ಯದ ತರಭೇತುದಾರರಾದ ವಿದ್ಯಾ ಟೋಸರ್ ನಾಟ್ಯದ ಆರಂಭಿಕ ಹಂತದ ವಿಧಾನ ತಿಳಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ  ಪರಿಮಳ ಎಂ.ವಿ.ಶಾಲೆಯಲ್ಲಿ ಸಂಗೀತ,ನೃತ್ಯ ತರಬೇತಿ ಆರಂಭಿಸಿದ ಉದ್ದೇಶ ,ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಳ್ಳುವ ರೀತಿ ಹಾಗೂ ಅದರ ಪರಿಣಾಮಗಳನ್ನು ಸವಿಸ್ತಾರವಾಗಿ ವಿವರಿಸಿದರು.

ಆರಾಧ್ಯ ಪಿ ಜೋಶಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಸನಾ ರಾಜೀವ್ ಸ್ವಾಗತಿಸಿ,ವೈಷ್ಣವಿ ವಂದಿಸಿದರು . ಅತಿಥಿಗಳ ನ್ನು ವಿದ್ಯಾರ್ಥಿಗಳಾದ ಸಮ್ಯಕ್, ವಿದ್ವತ್ ಜೈನ್ ಮತ್ತು ಪ್ರಣವ್ ಜೋಯಿಷಾ ಪರಿಚಯಿಸಿದರು .ಶಾಲಾ ಶಿಕ್ಷಕರು, ವಿದ್ಯಾರ್ಥಿ ಪೋಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿಭಾಗವಹಿಸಿದ್ದರು .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು