News Karnataka Kannada
Friday, May 17 2024
ಮಂಗಳೂರು

ಮೂಡುಬಿದಿರೆ: ಜೂನ್ 11ರಂದು ಪವರ್ ಫ್ರೆಂಡ್ಸ್ ನಿಂದ ಮನೆ ಹಸ್ತಾಂತರ

Power friends to hand over house on June 11
Photo Credit : News Kannada

ಮೂಡುಬಿದಿರೆ: ಪವರ್ ಫ್ರೆಂಡ್ಸ್ ಬೆದ್ರ ಇದರ ಸೇವಾ ಯೋಜನೆಯಡಿ ಇರುವೈಲು ಗ್ರಾಮದ ಕಲ್ಲಾಡಿ ಎಂಬಲ್ಲಿನ ಬಡ ಕುಟುಂಬಕ್ಕೆ ಮನೆ ನಿರ್ಮಿಸಲಾಗಿದ್ದು,ಹಸ್ತಾಂತರ ಕಾರ್ಯಕ್ರಮ ಜೂನ್. 11ರಂದು ನಡೆಯಲಿದೆ ಎಂದು ಪವರ್ ಫ್ರೆಂಡ್ಸ್ ಬೆದ್ರ ಅಧ್ಯಕ್ಷ ವಿನಯ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಲ್ಲಾಡಿಯ ನೋಣಯ್ಯ ಪರವ ಎಂಬವರ ಬಡ ಕುಟುಂಬವು ಸಣ್ಣದಾದ ಮನೆಯಲ್ಲಿ ವಾಸವಾಗಿದ್ದರು. ಯಾವುದೇ ಮೂಲಭೂತ ಸೌಕರ್ಯಗಳು ಇರಲಿಲ್ಲ. ಇದನ್ನು ಮನಗಂಡು ಪವರ್ ಫ್ರೆಂಡ್ಸ್ ಸದಸ್ಯರು ಆ ಬಡ ಕುಟುಂಬಕ್ಕೆ ಆಸರೆಯಾಗಲು ನಿರ್ಧರಿಸಿದ್ದೆವು. ಇದೀಗ ಎಲ್ಲ ಸೌಲಭ್ಯಗಳೊಂದಿಗೆ ಮನೆ ನಿರ್ಮಿಸಲಾಗಿದ್ದು ,ನಮಗೆ ಮಾರ್ಗದರ್ಶಕರಾಗಿದ್ದ ಮೂಡುಬಿದಿರೆ ಮಾರುಕಟ್ಟೆಯಲ್ಲಿ ತರಕಾರಿ ಉದ್ಯಮಿಯಾಗಿದ್ದ ದಿ.ಹರೀಶ್ ಮಾಂಟ್ರಾಡಿ ಅವರ ನೆನಪಿಗಾಗಿ ಮನೆಗೆ ಹರೀಶ್ ನಿವಾಸ ಎಂದು ಹೆಸರಿಡಲಾಗಿದೆ ಎಂದು ತಿಳಿಸಿದರು.

ಈಗಾಗಲೇ ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸಲಾಗಿದ್ದು ಮುಂದೆಯೂ ಹಲವಾರು ಸಾಮಾಜಿಕ ಸೇವೆಗಳನ್ನು ನಡೆಸುವ ಗುರಿ ಇದೆ ಎಂದು ಹೇಳಿದರು.

ಜೂನ್ 11 ರಂದು ಬೆಳಿಗ್ಗೆ 11 ಕ್ಕೆ ನಡೆಯಲಿರುವ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ವಜ್ರದೇಹಿ ಮಠದ ದೀಪ ಪ್ರಜ್ವಲನೆ ಮಾಡಲಿದ್ದು, ಶಾಸಕ ಉಮಾನಾಥ ಕೋಟ್ಯಾನ್,ಮಾಜಿ ಶಾಸಕ ಅಭಯಚಂದ್ರ ಜೈನ್‌ಮಿಥುನ್ ರೈ, ಶ್ರೀಪತಿ ಭಟ್, ಸುದರ್ಶನ್ ಎಂ, ಭಾಸ್ಕರ ಕಟ್ಟೆಮಾರ್,ವಲೇರಿಯನ್ ಕುಟನ್ಹಾ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ತಿಳಿಸಿದರು.

ಉಪಾಧ್ಯಕ್ಷ ಜಯಪ್ರಕಾಶ್ ಭಂಡಾರಿ, ಸದಸ್ಯರಾದ ಗುರುಪ್ರಸಾದ್, ಅವಿನಾಶ್, ಪ್ರದೀಪ್ ಸುದ್ದಿಗೋಷ್ಠಿಯಲ್ಲಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು