News Karnataka Kannada
Wednesday, May 08 2024
ಮಂಗಳೂರು

ಬೆಳ್ತಂಗಡಿ ಕುಲಾಲ ಭವನಕ್ಕೆ ಮಾ.19ರಂದು ಶಿಲಾನ್ಯಾಸ: ಕಾರ್ಯಕ್ರಮ ಆಯೋಜನೆ ಬಗ್ಗೆ ಪೂರ್ವಭಾವಿ ಸಭೆ

Foundation stone laying ceremony of Belthangady Kulala Bhavan on March 19: Preparatory meeting on organising the event
Photo Credit : News Kannada

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ನೂತನ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಹರೀಶ್ ಪೂಂಜ ಅವರು ರೂ. ೧.೫೦ ಕೋಟಿ ಅನುದಾನ ಒದಗಿಸಿದ್ದು, ಆ ಪ್ರಯುಕ್ತ ಮಾ. ೧೯ರಂದು ಜರಗಲಿರುವ ಶಿಲಾನ್ಯಾಸ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಮಾ. ೫ರಂದು ಬೆಳ್ತಂಗಡಿ ಸೇವಾ ಸಂಘದ ಸಭಾಭವನದಲ್ಲಿ ಜರಗಿತು.

ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ ಅವರು ಮಾತನಾಡಿ, ಸಮುದಾಯ ಭವನದ ನಿರ್ಮಾಣಕ್ಕೆ ಶಾಸಕ ಹರೀಶ್ ಪೂಂಜರು ಬೃಹತ್ ಮೊತ್ತದ ಅನುದಾನ ಒದಗಿಸಿದ್ದು, ಸಮುದಾಯದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಮಾ. ೧೯ರಂದು ಬೆಳಿಗ್ಗೆ ೧೧.೩೦ಕ್ಕೆ ಶಿಲಾನ್ಯಾಸ ನೆರವೇರಲಿದ್ದು, ಕನಿಷ್ಠ ೫೦೦೦ ಮಂದಿ ಸಹೋದರ, ಸಹೋದರಿ ಬಂಧುಗಳು ಕಾರ್ಯಕ್ರಮದ ಮುಂಚಿತವಾಗಿ ಪಾಲ್ಗೊಳ್ಳುವಂತೆ ಅವರು ವಿನಂತಿಸಿದರು. ಕಾರ್ಯಕ್ರಮದಲ್ಲಿ ಮಾಣಿಲ ಯತಿವರ್ಯರು, ಶಾಸಕರಾದ ಹರೀಶ್ ಪೂಂಜ, ಅಣ್ಣಯ್ಯ ಕುಲಾಲ್ ಉಳ್ತೂರು, ಮಯೂರ್ ಉಳ್ಳಾಲ್, ಬೆಳ್ತಂಗಡಿ ವಿಧಾನ ಪರಿಷತ್ ಶಾಸಕರುಗಳು, ಬೆಂಗಳೂರು ಕುಲಾಲ ಸಂಘದ ವಿಠಲ ಕಣಿಯೂರು ದೋಟ ಸೇರಿದಂತೆ, ಸಮುದಾಯದ ಪ್ರಮುಖರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷರಾದ ಸೋಮಯ್ಯ ಮೂಲ್ಯ ಹನೈನಡೆ ಮಾತನಾಡಿ, ಕಟ್ಟಡ ನಿವೇಶನಕ್ಕೆ ಇನ್ನೂ ಸಹಾಯಧನದ ಅಗತ್ಯವಿದ್ದು, ತಾಲೂಕಿನ ಪ್ರತೀಮನೆಯ ಬಂಧುಗಳು ಸಹಕಾರ ನೀಡಬೇಕು. ನೂತನ ಸಮುದಾಯ ಭವನ ತಾಲೂಕಿನ ಸಮುದಾಯಕ್ಕೆ ಕಿರೀಟವಿದ್ದಂತೆ ಎಂದರು.

ಸಭೆಯಲ್ಲಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಕಾರ್ಯದರ್ಶಿ ಯತೀಶ್ ಸಿರಿಮಜಲು, ವಿವಿಧ ಸಮಿತಿಯ ಪ್ರಮುಖರಾದ ಲೋಕೇಶ್ ಕುಲಾಲ್ ಸಿಟಿ ಎಲೆಕ್ಟ್ರಾನಿಕ್ಸ್ ಗುರುವಾಯನಕೆರೆ, ಕುವೆಟ್ಟು ಗ್ರಾ.ಪಂ. ಅಧ್ಯಕ್ಷೆಯಾದ ಆಶಾ ಕುಲಾಲ್, ತಿಲಕ್ ಕುಲಾಲ್, ಲಲಿತಾ ಕುಲಾಲ್, ಶೋಭಾ ಕುಲಾಲ್, ದಿನೇಶ್ ಮಾಲಾಡಿ, ಜಗದೀಶ್ ಕುಲಾಲ್, ದಯಾನಂದ ಕುಲಾಲ್ ಅಂಡಿಂಜೆ, ಮೀನಾಕ್ಷಿ ಕುಲಾಲ್, ಯೋಗೀಶ್ವರಿ ಕುಲಾಲ್ ಮತ್ತಿತತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು