ಮಂಗಳೂರ: ಮಂಗಳೂರಿನಲ್ಲೊಂದು ಅಮಾನವೀಯ ಘಟನೆ ನಡೆದಿದ್ದು ವೃದ್ಧ ಮಾವನಿಗೆ ವಾಕಿಂಗ್ ಸ್ಟಿಕ್ ನಲ್ಲಿ ಸೊಸೆ ಥಳಿಸಿದ್ದಾಳೆ. ಉಮಾಶಂಕರಿ ಎಂಬಾಕೆಯಿಂದ ಈ ಕೃತ್ಯ ನಡೆದಿದ್ದು ತಂದೆ ಸಮಾನರಾದ ಮಾವ ಪದ್ಮನಾಭ ಸುವರ್ಣ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾಳೆ. ಈ ಘಟನೆ ಮಾರ್ಚ್ 9 ರಂದು ನಡೆದಿದೆ.
ಪತಿ ವಿದೇಶದಲ್ಲಿದ್ದು, ಮನೆಯಲ್ಲಿ ಮಾವ ಅತ್ತೆ ಮಾತ್ರ ಇದ್ದರು. ಈಕೆ ಮಂಗಳೂರಿನ ಅತ್ತಾವರ ಮೆಸ್ಕಾಂ ನಲ್ಲಿ ಕೆಲಸದಲ್ಲಿದ್ದಳು. ಸಿಸಿಟಿವಿ ಯಲ್ಲಿ ಆ ದೃಶ್ಯ ಕಂಡ ಆರೋಪಿ ಉಮಾಶಂಕರಿ ಪತಿ ಸಿಸಿಟಿವಿ ಫೂಟೇಜ್ ನ್ನು ಆಧರಿಸಿ ಠಾಣೆಗೆ ದೂರು ನೀಡಿದ್ದಾನೆ. ಇದೀಗ
ಕಂಕನಾಡಿ ಪೊಲೀಸರು ಉಮಾಶಂಕರಿಯನ್ನು ಬಂಧಿಸಿದ್ದಾರೆ.