News Karnataka Kannada
Thursday, May 02 2024
ಮಂಗಳೂರು

ಧರ್ಮಸ್ಥಳ: ಶಾಸ್ತ್ರೋಕ್ತ ಕೆರೆಕಟ್ಟೆ ಉತ್ಸವ

The kerekatte festival was held in a traditional manner
Photo Credit : By Author

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥಸ್ವಾಮಿಯ ದೇವಳದ ಲಕ್ಷದೀಪೋತ್ಸವದ ಅಂಗವಾಗಿ ಎರಡನೇಯ ದಿನದ ರಾತ್ರಿ ಕೆರೆಕಟ್ಟೆ ಉತ್ಸವ ಧರ್ಮಾದಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆ ಸಮ್ಮುಖದಲ್ಲಿ ನಡೆಯಿತು.

ಮೊದಲಿಗೆ ದೇವಸ್ಥಾನದ ಒಳಭಾಗದಲ್ಲಿ ಸಕಲ ಶಾಸ್ತ್ರಗಳೊಂದಿಗೆ ಪೂಜೆ ನಡೆಸಿ ಸಂಪ್ರದಾಯದಂತೆ ಜಾಗಟೆ, ಶಂಖ, ನಾದಸ್ವರ, ಡೋಲು, ಸಂಗೀತ ಮೂಲಕ ಹೂಗಳು ಮತ್ತು ಆಭರಣಗಳಿಂದ ಅಲಂಕೃತ ಪಲ್ಲಕ್ಕಿಯಲ್ಲಿ ದೇವರನ್ನು ಕೂರಿಸಿ 16 ಸುತ್ತು ಪ್ರದಕ್ಷಿಣೆ ಹಾಕಲಾಯಿತು. ನಂತರ ಆನೆ, ಬಸವ, ಪಂಜು, ಗೊಂಬೆಗಳ ಮೆರವಣಿಗೆಯ ಜೊತೆಗೆ ಸಹಸ್ರಾರು ಭಕ್ತರ ಜೊತೆಯಲ್ಲಿ ಪಲ್ಲಕ್ಕಿಯಲ್ಲಿ ಕೆರೆ ಸುತ್ತ 5 ಸುತ್ತು ಪ್ರದಕ್ಷಿಣೆಯನ್ನು ವಿಶೇಷ ವಾದ್ಯಗಳ ಮೂಲಕ ನಡೆಸಲಾಯಿತು.

ನಂತರ ದೇವರನ್ನು ಕೆರೆಕಟ್ಟೆಯಲ್ಲಿ ಕೂರಿಸಿ ಸಂಗೀತ, ನಾದಸ್ವರ ಮೂಲಕ ದೇವರಿಗೆ ಪೂಜೆ ಸಲ್ಲಿಸಲಾಯಿತು. ದಾರಿಯುದ್ದಕ್ಕೂ ನಡೆದ ಮಂತ್ರಪಠಣ, ಶಂಖ ಜಾಗಟೆಗಳ ನಾದ ಅಲ್ಲಿ ನೆರೆದಿರುವ ಭಕ್ತ ಸಮೂಹದೊಳಗೆ ಭಕ್ತಿಭಾವ ಮೂಡಿಸಿತು. ಭಕ್ತರು ಭಕ್ತಿಯಿಂದ ದೀಪ ಹಚ್ಚುತ್ತಿದ್ದದ್ದು ಮತ್ತು ಭಜನೆಗಳು ಅಲ್ಲಿದ್ದವರನ್ನು ಭಕ್ತಿಪರವಶವರನ್ನಾಗಿಸಿತ್ತು.

ಇದಾದ ನಂತರ ದೇವರನ್ನು ರಥದೆಡೆಗೆ ಮಾನವ ಸರಪಳಿ ಮೂಲಕ ಕರೆತರಲಾಯಿತು. ಈ ಸಂದರ್ಭದಲ್ಲಿ ಪೋಲೀಸ್ ಇಲಾಖೆ ಮತ್ತು ದೇವಸ್ಥಾನ ಸಿಬ್ಬಂದಿಗಳ ಪ್ರಯತ್ನ ಉತ್ಸವಕ್ಕೆ ತೊಂದರೆಯಾಗದಂತೆ ನೋಡಿಕೊಂಡಿತು. ಬಳಿಕ ದೇವರನ್ನು ಬೆಳ್ಳಿರಥದಲ್ಲಿ ಕೂರಿಸಿ ಮಂಗಳಾರತಿ ಮಾಡಿ, ದೇವಸ್ಥಾನಕ್ಕೆ ಒಂದು ಸುತ್ತಿನ ಪ್ರದಕ್ಷಿಣೆಯ ನಂತರ ಮತ್ತೆ ದೇವಳದ ಒಳಕ್ಕೆ ಕರೆತರಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ವರ್ಗದ ಪ್ರಮುಖರು, ವೈದಿಕ ಸಮಿತಿಯವರು, ಮತ್ತು ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.

 

ವರದಿ-ಚಿತ್ರಗಳು:

ಅರ್ಪಿತ್ ಇಚ್ಚೆ
ಸ್ನಾತಕೊತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ ಕಾಲೇಜು, ಉಜಿರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು