News Karnataka Kannada
Saturday, April 27 2024
ಮಂಗಳೂರು

ಆಸ್ಪತ್ರೆಯಲ್ಲಿ ಜೋಡಿಯ ಲೈಂಗಿಕ ಕ್ರಿಯೆ: ದೃಶ್ಯ ಕಂಡ ಬಾಲಕಿಯ ಬಾಯಿಮುಚ್ಚಿ ಅತ್ಯಾಚಾರ

Couple sexually assaulted in hospital: Girl raped after watching scene
Photo Credit : News Kannada

ಮಂಗಳೂರು: ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಪ್ರಾಪ್ತ ಬಾಲಕಿ(ವಿಶೇಷ ಸಾಮರ್ಥ್ಯ) ಮೇಲೆಯೇ ಅತ್ಯಾಚಾರ ಮಾಡಿದ ಘಟನೆ ನಡೆದಿದೆ.

ಅತ್ಯಾಚಾರ ನಡೆಸಿದ ಅಬ್ದುಲ್ ಹಲೀಂ, ಅತ್ಯಾಚಾರ ಮಾಡಲು ಸಹಕಾರ ನೀಡಿದಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಬೈಕ್ ಅಪಘಾತದಲ್ಲಿ ಅಬ್ದುಲ್ ಹಲೀಂ ಮತ್ತು ಆತನ ಸ್ನೇಹಿತ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅವರನ್ನು ನೋಡಲು ಮಹಿಳೆಯೊಬ್ಬರು ತೆರಳಿದ್ದು, ಆಕೆ ಅಪ್ರಾಪ್ತ ಮಗಳನ್ನು ಕರೆದುಕೊಂಡು ಹೋಗಿದ್ದರು. ಈ ವೇಳೆ ಶಮೀನಾ ಬಾನು ಎಂಬುವರ ಜೊತೆ ಬಾಲಕಿಯನ್ನು ಬಿಟ್ಟು ಪೊಲೀಸ್ ಠಾಣೆಗೆ ತಾಯಿ ತೆರಳಿದ್ದರು. ಆಸ್ಪತ್ರೆಯಲ್ಲಿದ್ದ ವೇಳೆ ಅಬ್ದುಲ್ ಹಲೀಂ-ಶಮೀನಾ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರು. ಇದನ್ನು ಬಾಲಕಿ ನೋಡಿದ್ದಳು. ಇದು ಗೊತ್ತಾಗುತ್ತಿದ್ದಂತೆ ಅಬ್ದುಲ್ ಹಲೀಂ ಬಾಲಕಿ ಮೇಲೆಯೇ ಅತ್ಯಾಚಾರ ನಡೆಸಲು ಮುಂದಾಗಿದ್ದಾನೆ. ಆದರೆ ಬಾಲಕಿ ಪ್ರತಿರೋಧ ವ್ಯಕ್ತಪಡಿಸಿದ್ದಾಳೆ. ಈ ವೇಳೆ ಶಮೀನಾ ಬಾಲಕಿಯ ಕೈ ಹಿಡಿದು, ಬಾಯಿ ಮುಚ್ಚಿ ಅತ್ಯಾಚಾರ ಮಾಡಲುಸಹಾಯ ಮಾಡಿದ್ದಳು. ಈ ನಿಟ್ಟಿನಲ್ಲಿ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು