News Karnataka Kannada
Thursday, May 02 2024
ಮಂಗಳೂರು

ಬಂಟ್ವಾಳ: ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಶಮಾನೋತ್ಸವ ಸಮಾರಂಭ

Centenary celebrations at Father Muller Hospital, Thumbay
Photo Credit : News Kannada

ಬಂಟ್ವಾಳ: ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ದಶಮಾನೋತ್ಸವ ಸಮಾರಂಭವು ಮೇ ೨ರಂದು ಆಸ್ಪತ್ರೆಯ ಆವರಣದಲ್ಲಿ ನೆರವೇರಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿಷಪ್  ಡಾ ಪೀಟರ್ ಪಾವ್ಲ್ ಸಲ್ಡಾನ್ಹಾ ಮಾತನಾಡಿ, ಆರೋಗ್ಯ ಸೇವೆಯನ್ನು ಪ್ರಮುಖ ಉದ್ದೇಶವನ್ನಾಗಿಸಿ ಬೆಳೆದು ಬಂದಿರುವ ಫಾದರ್ ಮುಲ್ಲರ್ ವೈದ್ಯಕೀಯ ಸಂಸ್ಥೆಗಳು ನಗುಮೊಗದ  ಸೇವೆಯೊಂದಿಗೆ ರೋಗಿಗಳ ಆರೈಕೆಯನ್ನು ಮಾಡಿದ್ದು, ಇಲ್ಲಿನ ವೈದ್ಯರು, ಸಿಬಂದಿಯ ಸೇವೆ ದೇವರ ಪ್ರೀತಿಗೆ ಪಾತ್ರವಾಗಿದೆ. ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಗುಣಮಟ್ಟದ ಸೇವೆ ನೀಡುವುದಕ್ಕೆ ಆಡಳಿತ ಮಂಡಳಿ ಸೇರಿದಂತೆ ಎಲ್ಲರೂ ಕಠಿಣ ಶ್ರಮ ಪಡುತ್ತಿದ್ದು, ನಿಮ್ಮ ಶ್ರಮಕ್ಕೆ ಪ್ರತಿಫಲ ಇದ್ದೇ ಇರುತ್ತದೆ ಎಂದರು.

ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕ ವಂ.ರಿಚರ್ಡ್ ಅಲೋಶಿಯಸ್ ಕುವೆಲ್ಲೋ ಮಾತನಾಡಿ, ವಿಶೇಷ ವಿನ್ಯಾಸದಿಂದ ಬಿಎ ಗ್ರೂಪ್‌ನವರು ರೂಪಿಸಿದ ಆಸ್ಪತ್ರೆಯನ್ನು ಫಾದರ್ ಮುಲ್ಲರ್ ಸಂಸ್ಥೆಯು ಮುನ್ನಡೆಸಿ ಪ್ರಸ್ತುತ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಗ್ರಾಮೀಣ ಭಾಗದ ಜನತೆಯ ಜತೆಗೆ ಸ್ಥಳೀಯ ಪಂಚಾಯತ್ ಕೂಡ ಉತ್ತಮ ಸಹಕಾರ ನೀಡಿದ ಫಲವಾಗಿ ಆಸ್ಪತ್ರೆ ಬೆಳೆಯಲು ಸಾಧ್ಯವಾಗಿದೆ ಎಂದರು.

ಮೆಡಿಕಲ್ ಕಾಲೇಜು ಡೀನ್ ಡಾ| ಆ್ಯಂಟನಿ ಸಿಲ್ವಿಯನ್ ಡಿಸೋಜ ಮಾತನಾಡಿ, ಆರೋಗ್ಯ ಕ್ಷೇತ್ರವು ಹಲವು ಸವಾಲುಗಳಿಂದ ಕೂಡಿದ್ದು, ಇಲ್ಲಿನ ನುರಿತ ವೈದ್ಯರು, ದಾದಿಯರು, ತಾಂತ್ರಿಕ ಸಿಬಂದಿಯ ಶ್ರಮದಿಂದ ಎಲ್ಲಾ ಸವಾಲುಗಳನ್ನು ಯಶಸ್ವಿಯಾಗಿ ಈಡೇರಿಸಿದ್ದೇವೆ. ಜತೆಗೆ ಆಡಳಿತ ಮಂಡಳಿಯೂ ಎಲ್ಲಾ ರೀತಿಯ ಸಹಕಾರ ನೀಡಿದೆ ಎಂದರು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಕಿರಣ್ ಶೆಟ್ಟಿ, ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಸಿ| ಧನ್ಯ ದೇವಸ್ಯ ವೇದಿಕೆಯಲ್ಲಿದ್ದರು. ರೋಶನ್ ಕ್ರಾಸ್ತಾ ಅಜಿತ್ ಮೆನೇಜಸ್, ರುಡಾಲ್ ಡೇಸಾ ಉಪಸ್ಥಿತರಿದ್ದರು.
ವೈದ್ಯಕೀಯ ಅಧೀಕ್ಷಕರು ಸೇರಿದಂತೆ ಆಸ್ಪತ್ರೆಯಲ್ಲಿ ಸುದೀರ್ಘ ಸಮಯ ಕರ್ತವ್ಯ ನಿರ್ವಹಿಸಿದವರನ್ನು ಗೌರವಿಸಲಾಗಿದ್ದು, ಸಿಲ್ವಿಯಾ ಲೋಬೊ ಅವರು ವಿವರ ನೀಡಿದರು. ದಶಮಾನೋತ್ಸವ ಸಂಚಿಕೆ ಬಿಡುಗಡೆಗೊಳಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಆಸ್ಪತ್ರೆಯ ಆಡಳಿತಾಧಿಕಾರಿ  ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ ಸ್ವಾಗತಿಸಿದರು. ಸಹ ಪ್ರಾಧ್ಯಾಪಕಿ ಡಾ| ಸರಿತಾ ಲೋಬೊ ವಂದಿಸಿದರು. ಡಾ| ದೀಕ್ಷಿತ್ ಶೆಟ್ಟಿ ಹಾಗೂ ಡಾ| ಸೌಮ್ಯ ಅರನ್ಹಾ ಕಾರ್ಯಕ್ರಮ ನಿರ್ವಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು