News Karnataka Kannada
Wednesday, May 01 2024
ದೆಹಲಿ

ಹೈವೆಗೆ ಅಪ್ಪಳಿಸಿದ ವಿಮಾನ, 10 ಮಂದಿ ಸಾವು: ಭಯಾನಕ ವಿಡಿಯೋ ಇಲ್ಲಿದೆ ನೋಡಿ

Plane crashes on highway: Here's a scary video
Photo Credit : Pixabay

ನವದೆಹಲಿ: ಮಲೇಷ್ಯಾದಲ್ಲಿ ವಿಮಾನವೊಂದು ನಾಲ್ಕು ಪಥದ ರಸ್ತೆಯಲ್ಲಿ ಪತನಗೊಂಡ ಭಯಾನಕ ಕ್ಷಣವನ್ನು ಹೆದ್ದಾರಿಯಲ್ಲಿ ಕಾರಿನಲ್ಲಿ ಚಲಿಸುತ್ತಿದ್ದವರು ಸೆರೆಹಿಡಿದ್ದು, ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಲಘು ವಿಮಾನ ನೆಲಕ್ಕಪ್ಪಳಿಸಿ ವಿಮಾನದಲ್ಲಿದ್ದ ಎಂಟು ಮಂದಿ, ಹೆದ್ದಾರಿಯಲ್ಲಿದ್ದ ಇಬ್ಬರು ವಾಹನ ಸವಾರರು ಸಾವನ್ನಪ್ಪಿದ್ದಾರೆ. ವಿಮಾನವು ನೆಲದ ಮೇಲೆ ಅಪ್ಪಳಿಸಿ ಭೀಕರವಾಗಿ ಸ್ಫೋಟಗೊಂಡಿತು. ಈ ವೇಳೆ ಬೆಂಕಿಯ ಚೆಂಡಿನಂತೆ ಗೋಚರಿಸಿತ್ತು. ಸ್ವಲ್ಪ ಸಮಯದ ನಂತರ, ಭಗ್ನಾವಶೇಷದಿಂದ ಕಪ್ಪು ಹೊಗೆಯು ಕಾಣಿಸಿಕೊಂಡಿತು.

ವಿಮಾನ ಅಪಘಾತದಲ್ಲಿ  10 ಜನರು ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಒಬ್ಬರು, ಓರ್ವ ಬೈಕ್‌ ಸವಾರ ಹಾಗೂ ವಿಮಾನದಲ್ಲಿದ್ದ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೇಂದ್ರ ಪಹಾಂಗ್ ರಾಜ್ಯದ ರಾಜ್ಯ ಅಸೆಂಬ್ಲಿ ಸದಸ್ಯ ಜೋಹರಿ ಹರುನ್ ಅವರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಮಾನವು ಉತ್ತರದ ರೆಸಾರ್ಟ್ ದ್ವೀಪವಾದ ಲಂಕಾವಿಯಿಂದ ಹೊರಟು ರಾಜಧಾನಿ ಕೌಲಾಲಂಪುರ್‌ನ ಪಶ್ಚಿಮದಲ್ಲಿರುವ ಸುಲ್ತಾನ್ ಅಬ್ದುಲ್ ಅಜೀಜ್ ಷಾ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು. ವಿಮಾನವು ಪತನಗೊಂಡಾಗ ಆರು ಪ್ರಯಾಣಿಕರು ಮತ್ತು ಇಬ್ಬರು ವಿಮಾನ ಸಿಬ್ಬಂದಿ ವಿಮಾನದಲ್ಲಿದ್ದರು ಎಂದು ಮಲೇಷ್ಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ಹೇಳಿಕೆಯಲ್ಲಿ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು