News Karnataka Kannada
Tuesday, April 30 2024
ಮಂಗಳೂರು

ಬಂಟ್ವಾಳ: ಅಪ್ರಾಪ್ತ ಶಾಲಾ ಬಾಲಕನ ಮೇಲೆ ಅತ್ಯಾಚಾರ, ಪ್ರಕರಣ ದಾಖಲು

ಹಾಸ್ಟೆಲ್​ನಲ್ಲಿ ಉಳಿದುಕೊಂಡು 9ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಗರ್ಭಿಣಿಯಾದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
Photo Credit : Pixabay

ಬಂಟ್ವಾಳ: ಕೋಳಿ ಟಿಕ್ಕ ಪಾರ್ಸೆಲ್ ಪಡೆಯಲು ಟಿಕ್ಕ ಶಾಪ್ ಗೆ ಬಂದಿದ್ದ ಅಪ್ರಾಪ್ತ ಶಾಲಾ ಬಾಲಕನ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೆ, ಈ ಬಗ್ಗೆ ಮನೆಯವರಿಗೆ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ ಘಟನೆ ಸೂಕ್ಷ್ಮ ಪ್ರದೇಶವಾದ ಕಲ್ಲಡ್ಕದಲ್ಲಿ ನಡೆದಿದೆ.

ಕಲ್ಲಡ್ಕ ವಿಟ್ಲ ರಸ್ತೆಯಲ್ಲಿರುವ ಟಿಕ್ ಪಾಯಿಂಟ್ ಮಾಲಕ ಮಹಮ್ಮದ್ ಆಶ್ರಫ್ ಎಂಬಾತನೇ ಅತ್ಯಾಚಾರ ಎಸಗಿದ ಆರೋಪಿ.

ಕಲ್ಲಡ್ಕದಲ್ಲಿರುವ ಟಿಕ್ಕಪಾಯಿಂಟ್ ಗೆ ಪಾರ್ಸೆಲ್ ತರಲು ರಾತ್ರಿ ಸುಮಾರು 8 ಗಂಟೆಗೆ ಬಂದ ವೇಳೆ ಅತ್ಯಾಚಾರ ನಡೆಸಲಾಗಿದೆ.

ಬಾಲಕ ಟಿಕ್ಕ ಪಾರ್ಸೆಲ್ ಕೇಳಿದಾಗ, ಟಿಕ್ಕ ಪಾರ್ಸೆಲ್ ಕೊಂಡುಹೋಗಲು ಪ್ಲಾಸ್ಟಿಕ್ ಚೀಲವನ್ನು ತರುವಂತೆ ಅಂಗಡಿಯ ಒಳಗೆ ಬರುವಂತೆ ಹೇಳಿ, ಆತ ಪ್ಲಾಸ್ಟಿಕ್ ಚೀಲ ತರಲು ಒಳಗೆ ಹೋದ ವೇಳೆ ಆರೋಪಿ ಬಾಲಕನ ಹಿಂಬದಿಯಿಂದ ಹೋಗಿ ಆತನನ್ನು ಹಿಡಿದು ಎತ್ತಿಕೊಂಡು ಅಲ್ಲೇ ಸಮೀಪದ ತೋಟಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಅತ್ಯಾಚಾರ ಆರೋಪಿಯಿಂದ ಬಾಲಕನ ಮೇಲೆ ಹಲ್ಲೆ

ಅತ್ಯಾಚಾರ ನಡೆಸಿದ ಆರೋಪಿ ಘಟನೆ ನಡೆದು ಎರಡು ತಿಂಗಳ ಬಳಿಕ ಮತ್ತೆ ಅತ್ಯಾಚಾರಕ್ಕೆ ಯತ್ನ ಮಾಡಿ, ಆತ ವಿರೋಧ ವ್ಯಕ್ತಪಡಿಸಿದಾಗ ಬಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಬಾಲಕ ಆ.4 ರಂದು ಮನೆಯಿಂದ ಕಲ್ಲಡ್ಕ ಪೇಟೆಗೆ ಹಾಲು ತರಲೆಂದು ಅಂಗಡಿ ಹೋಗಿ ವಾಪಾಸಾಗುವಾಗ ಎದುರಿನಿಂದ ಬಂದ ಆರೋಪಿ ಈತನನ್ನು ಬರುವಂತೆ ಒತ್ತಾಯಿಸಿದ್ದಾನೆ.ನಾನು ಬರುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ ಬಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ.

ಬಾಲಕ ತಪ್ಪಿಸಿಕೊಂಡು ಮನೆಗೆ ಹೋಗಿ ವಿಚಾರ ತಿಳಿಸಿದ್ದಾನೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು