ಮಂಗಳೂರು; ಜಮೀಯತುಲ್ ಫಲಾಹ್ ಮಂಗಳೂರು ಇದರ ವತಿಯಿಂದ ಮಂಗಳೂರು ಹೊರವಲಯದ ಶಕ್ತಿನಗರದಲ್ಲಿರುವ ಸಾನಿಧ್ಯ ವಸತಿಯುತ ವಿಶೇಷ ಮಕ್ಕಳ ಶಾಲೆಯಲ್ಲಿ ಈದ್ ಮಿಲಾದ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಭಾ ಕಾರ್ಯಕ್ರಮದಲ್ಲಿ ಜಮೀಯತುಲ್ ಫಲಾಹ್ ನಜೀರ್ ಜನಾಬ್ ಅಬೂಬಕ್ಕರ್ ಸಿದ್ದೀಕ್ , ಮಹಾಬಲ ಮಾರ್ಲ , ಮೊಹಮ್ಮದ್ ಇಕ್ಬಾಲ್ ,ಬಶೀರ್ ,ವಸಂತ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು .
ಜನಾಬ್ ಅಬೂಬಕರ್ ಸಿದ್ದಿಕಿ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಸಭೆಯನ್ನುದ್ದೇಶಿಸಿ ಮಾತನಾಡಿ ಸಾನಿಧ್ಯ ಶಾಲೆಯು ವಿಶೇಷ ಮಕ್ಕಳಿಗೆ ಮಾಡುತ್ತಿರುವ ಸೇವೆಯನ್ನು ಈ ಸಂದರ್ಭದಲ್ಲಿ ಶ್ಲಾಘಿಸಿದರು .
ಸಭಾ ಕಾರ್ಯಕ್ರಮಕ್ಕೂ ಮುನ್ನ ಸಾನಿಧ್ಯ ವಸತಿ ಶಾಲೆಯ ವಿಶೇಷ ಮಕ್ಕಳಿಂದ ಅಮರ್ ಜವಾನ್ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.