News Karnataka Kannada
Wednesday, May 08 2024
ಮಂಗಳೂರು

ಬೆಳ್ತಂಗಡಿ : ಗ್ರಾಹಕರಿಗೆ ಪ್ಲಾಸ್ಟಿಕ್ ನಿಷೇಧ ಬಗ್ಗೆ ಮಾಹಿತಿ ನೀಡಿ ಎಂದ ವ್ಯಾಪಾರಿಗಳು

Traders ask customers to inform them about plastic ban
Photo Credit : News Kannada

ಬೆಳ್ತಂಗಡಿ : ಅಂಗಡಿಯಲ್ಲಿ ಸಮಾನು ಖರೀದಿಸಲು ಬರುವ ಗ್ರಾಹಕರು ಪ್ಲಾಸ್ಟಿಕ್ ಇಲ್ಲದೆ ಸಾಮಾನು ಕೊಡುವುದಿಲ್ಲ ಎಂದು ಹೇಳಿದರೆ ನಮಗೆ ಅವ್ಯಾಚ ಶಬ್ದಗಳಿಂದ ಬೈಯುತ್ತಾರೆ ಈ ಶಬ್ದಗಳನ್ನು ಕೇಳಲು ನಾವು ತಯಾರಿಲ್ಲ. ಮೊದಲು ಗ್ರಾಹಕರಿಗೆ ಪ್ಲಾಸ್ಟಿಕ್ ನಿಷೇಧ ಬಗ್ಗೆ ಮಾಹಿತಿ ನೀಡಿ ಮತ್ತೆ ಪ್ಲಾಸ್ಟಿಕ್ ನಿಷೇಧ ಮಾಡಿ ಎಂದು ವರ್ತಕರು ಅಧಿಕಾರಿಗಳಿಗೆ ಮತ್ತು ಪ.ಪಂ ಆಡಳಿತ ವರ್ಗಕ್ಕೆ ತಿಳಿಸಿದರು.

ಪ್ಲಾಸ್ಟಿಕ್ ನಿಷೇಧದ ಬಗ್ಗೆ ಪ.ಪಂ ವತಿಯಿಂದ ವರ್ತಕರ ಸಭೆಯು ಪ.ಪಂ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು. ಮುಖ್ಯಾಧಿಕಾರಿ ರಾಜೇಶ್ ವರ್ತಕರನ್ನು ಉದ್ಧೇಶಿಸಿ ಮಾತನಾಡಿ ಸರಕಾರವು ಏಕಮುಖ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಿದ್ದು ಜು.೧ರಿಂದಲೇ ನಗರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಆದೇಶಿಸಿದೆ. ಆದರೆ ಇಲ್ಲಿನ ಆಡಳಿತವರ್ಗ ವರ್ತಕರ ಸಭೆ ಕರೆದು ಅವರಿಗೆ ಮನರಿಗೆ ಮಾಡಬೇಕು ಎಂಬ ಸೂಚನೆ ಮೇರೆಗೆ ವರ್ತಕರ ಸಭೆ ಕರೆಯಲಾಗಿದೆ ಅಭಿಪ್ರಾಯ ತಿಳಿಸಿ ಎಂದರು.

ಇದಕ್ಕೆ ವರ್ತಕರ ಸಂಘದ ಅಧ್ಯಕ್ಷ ಪುಷ್ಪರಾಜ ಶೆಟ್ಟಿ ಮಾತನಾಡಿ ಏಕಾಏಕಿ ಒಂದೆರಡು ದಿನಗಳಲ್ಲಿ ಪ್ಲಾಸ್ಟಿಕ್ ನಿರ್ಷೇಧ ಕ್ರಮ ಕೈಗೊಂಡರೆ ಈಗಾಗಲೇ ಸಾವಿರಾರು ರೂ. ಮೌಲ್ಯ ಕೊಟ್ಟು ಖರೀದಿಸಿ ಇಟ್ಟ ಪ್ಲಾಸ್ಟಿಕ್‌ನ್ನುಯ ಏನು ಮಾಡಬೇಕು ಈಗಾಗಲೇ ಕೊರೊನಾದಿಂದ ವರ್ತಕರು ಆರ್ಥಿಕ ನಷ್ಟವನ್ನು ಅನುಭವಿಸಿದ್ದಾರೆ ಇದೀಗ ಪ್ಲಾಸ್ಟಿಕ್ ನಿಷೇಧದಿಂದ ಗ್ರಾಹಕರು ಮತ್ತೆ ಬಾರದೇ ಇದ್ದರೆ ಮತ್ತೆ ಆರ್ಥಿಕ ಸಂಕಷ್ಟ ಎದುರಾಗಬಹುದು.

ಸರಕಾರದ ನಿಯಮವನ್ನು ಜಾರಿಗೆ ಬರಲು ಅಡ್ಡಿಪಡಿಸುವುದಲ್ಲ ನಿಯಮ ಒಳ್ಳೆಯದೇ ಆದರೆ ಬದಲಿ ವ್ಯವಸ್ಥೆ ಬರುವ ತನಕ ಸಮಯವಕಾಶ ಕೊಡಿ ಎಂದರು. ಇದಕ್ಕೆ ಮುಖ್ಯಾಧಿಕಾರಿ ರಾಜೇಶ್ ಉತ್ತರಿಸಿ ಇದು ೨೦೧೬ರಿಂದಲೇ ಜಾರಿಗೊಂಡ ಕಾನೂನು,ಈ ಬಗ್ಗೆ ಸರಕಾರ ಕೆಲವು ಕ್ರಮಗಳನ್ನು ಕೈಗೊಂಡಿತ್ತು ಆದರೆ ಮತ್ತೆ ಇದು ಬಳಕೆ ಹೆಚ್ಚಾದಾಗ ೨೦೨೧ರಲ್ಲಿ ಮತ್ತೆ ಕಟ್ಟುನಿಟ್ಟಿನ ಆದೇಶ ಜಾರಿಗೊಳಿಸಿದೆ. ಸರಕಾರದ ಆದೇಶವನ್ನು ಪಾಲಿಸುವುದು ನಮ್ಮೆಲ್ಲೆ ಜವಬ್ದಾರಿ. ಮಾನಸಿಕವಾಗಿ ಎಲ್ಲರೂ ಸಿದ್ಧರಾದಾಗ ಪ್ಲಾಸ್ಟಿಕ್ ನಿಷೇಧ ಸಾಧ್ಯ ಎಂದರು.

ವರ್ತಕರಾದ ಸೀತರಾಮ ಬೈರ ಮತ್ತು ಗಣೇಶ್ ಪೈ ಮಾತನಾಡಿ ಮಾರುಕಟ್ಟೆಗೆ ಪ್ಲಾಸ್ಟಿಕ್‌ಗಳು ಯತೇಚ್ಚವಾಗಿ ಬರುವ ಕಾರಣ ನಾವು ಖರೀದಿಸುತ್ತೇವೆ ಜನರು ಇದನ್ನು ಅವಲಂಬಿಸುತ್ತಿದ್ದಾರೆ. ಮೊದಲು ಉತ್ಪಾದನೆಯನ್ನು ನಿಲ್ಲಿಸಲಿ ಮತ್ತು ಪ್ಲಾಸ್ಟಿಕ್‌ನ ಬದಲಿಗೆ ಪರ್ಯಾಯ ವ್ಯವಸ್ಥೆ ಜಾರಿಗೊಳಿಸಲಿ ಎಂದರು. ಸದಸ್ಯ ಜಗದೀಶ್ ಉತ್ತರಿಸಿ ವರ್ತಕರ ಮತ್ತು ಜನಸಾಮಾನ್ಯರ ವಿಶ್ವಾಸ ಪಡೆದೇ ನಗರದಲ್ಲಿ ಪ್ಲಾಸ್ಟಿಕ್ ನಿರ್ಷೇಧಕ್ಕೆ ಮುಂದಾಗುವುದು. ಅಧಿಕಾರಿಗಳು ಸರಕಾರದ ಆದೇಶವನ್ನು ಪಾಲಿಸುವುದು ಸಹಜ ಅದಕ್ಕಾಗಿ ರಾಷ್ಟçದ ಅತ್ಯುನ್ನತವಾದ ದಿನವಾದ ಆಗಸ್ಟ್ ೧೫ ಅಥವಾ ಅಕ್ಟೋಬರ್ ೨ರಂದು ನಗರವನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ದಿನವನ್ನಾಗಿ ಘೋಷಣೆ ಮಾಡಲು ತಯಾರಿ ನಡೆಸಬೇಕು ಅದರೊಳಗೆ ಎಲ್ಲಾ ವರ್ತಕರಿಗೆ, ಜನಸಾಮಾನ್ಯರಿಗೆ ಅರಿವು ಮೂಡಿಸಬೇಕು ಎಂದರು. ಇದಕ್ಕೆ ಉಪಾಧ್ಯಕ್ಷ ಜಯಾನಂದ ಗೌಡ, ಉತ್ತರಿಸಿ ಇದು ಅಭಿಪ್ರಾಯ ಸೂಕ್ತ ಈ ಬಗ್ಗೆ ಶಾಸಕರ ಬಳಿ ವಿನಂತಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದರು. ಅಕ್ಟೋಬರ್ ೨ರಂದು ಘೋಷಣೆ ಮಾಡುವುದುಕ್ಕೆ ಬಹುತೇಕ ವರ್ತಕರು ಬೆಂಬಲ ಸೂಚಿಸಿದರು.

ನ.ಪಂ ಮುಖ್ಯಾಧಿಕಾರಿ ರಾಜೇಶ್ ಮಾತನಾಡಿ ನಾಳೆಯಿಂದಲೇ ಪಂಚಾಯತ್ ವತಿಯಿಂದ ಅರಿವು ಮೂಡಿಸುವ ಕಾರ್ಯಕ್ರಮ ಮಾಡಲಾಗುವುದು ಪ್ಲಾಸ್ಟಿಕ್‌ಗೆ ಪರ್ಯಾಯ ವ್ಯವಸ್ಥೆಯ ಬಗ್ಗೆಯೂ ಕೆಲವು ಸಂಘ ಸಂಸ್ಥೆಗಳಿದ ಕ್ರಮ ಕೈಗೊಳ್ಳಲಾಗುವುದು ವರ್ತಕರು ಮತ್ತು ಜನಸಾಮಾನ್ಯರು ನ.ಪಂನೊದಿಗೆ ಕೈಜೋಡಿಸಿ ಈಗಾಗಲೇ ಕಳೆದ ೧೫ವರ್ಷಗಳಿಂದ ತ್ಯಾಜ್ಯ ಘಟಕಗಳಲ್ಲಿ ಹಾಕಿದ ಪ್ಲಾಸ್ಟಿಕ್‌ನ್ನು ವಿಲೇವಾರಿ ಮಾಡಲಾಗದೆ ಅಷ್ಟು ಜಾಗ ಆವರಿಸಿಕೊಂಡಿದೆ ಮುಂದಿನ ದಿನಗಳಲ್ಲಿ ಇದು ಮೀರಿದರೆ ಪರಿಸ್ಥಿತಿ ಯಾವ ರೀತಿ ಬರಬಹುದು ಎಂದು ನೀವೇ ಚಿಂತಿಸಬೇಕು ಎಂದರು.

ಬಳಿಕ ಮತ್ತೊಮ್ಮೆ ಎಲ್ಲಾ ವರ್ತಕರ ಮತ್ತು ಗ್ರಾಹಕರ ಸಭೆ ಕರೆಯಲು ನಿರ್ಣಯಿಸಲಾಯಿತು. ಸಭೆಯಲ್ಲಿ ನ.ಪಂ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ನ.ಪಂ ಸದಸ್ಯರಾದ ಜನಾರ್ಧನ್, ಜಗದೀಶ್, ನಾನಿರ್ದೇಶಿತ ಸದಸ್ಯ ಕೇಶವ, ಮಹಿಳಾ ಮಂಡಲ ಒಕ್ಕೂಟದ ಅಧ್ಯಕ್ಷೆ ಸವಿತಾ ಜಯದೇವ್, ಹುಣ್ಸೆಕಟ್ಟೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ರಮಾದೇವಿ, ವರ್ತಕರು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು