ಚಿಕ್ಕಬಳ್ಳಾಪುರ: ಪ್ರಿಯತಮೇ ಎದುರೆ ಓರ್ವ ಮಹಿಳೆ ಮೇಲೆ ಅತ್ಯಾಚಾರ ಎಸಗಿ ನಂತರ ಕೊಂದ ಪಾಪಿ ಪ್ರಿಯತಮ. ಈ ಘಟನೆ ಗೌರಿಬಿದನೂರು ತಾಲ್ಲೂಕಿನ ಕೊನಗಾನಹಳ್ಳಿ ಗ್ರಾಮ ಹೊರವಲಯದಲ್ಲಿ ಬೆಳಕಿಗೆ ಬಂದಿದೆ. ಮಹಿಳೆಗೆ ಮದ್ಯ ಕುಡಿಸಿ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.ಅಲುಮೇಲಮ್ಮ (40 ವರ್ಷ) ಅತ್ಯಾಚಾರಕ್ಕೆ ಒಳಗಾದ ಮಹಿಳೆ.
ಅತ್ಯಾಚಾರಿಗೆ ಆತನ ಪ್ರಿಯತಮೆ ರಾಮಾಂಜಿನಮ್ಮ ಕೂಡ ಸಾಥ್ ನೀಡಿದ್ದು, ಇಬ್ಬರು ಕೂಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸಂಜೀವಪ್ಪ ರಾಮಾಂಜಿನಮ್ಮ ನಡುವೆ ಅನೈತಿಕ ಸಂಭಂದವಿದ್ದ ಹಿನ್ನಲೆ ಅಲುಮೇಲಮ್ಮ ಇಬ್ಬರ ಅನೈತಿಕ ಸಂಬಂದಕ್ಕೆ ಅಡ್ಡಿಯಾಗಿದ್ದಳು ಎನ್ನಲಾಗುತ್ತಿದೆ. ಇದೇ ವಿಚಾರಕ್ಕೆ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ.
ಅಲುಮೇಲಮ್ಮ ನಾಲ್ಕು ದಿನಗ ಹಿಂದೆ ಗ್ರಾಮದಿಂದ ನಾಪತ್ತೆಯಾಗಿದ್ದಳು. ಅತ್ತ ಕೊಲೆ ಮಾಡಿದ ಬಳಿಕ ರಾಮಾಂಜಿನಮ್ಮ ವರ್ತನೆಯಿಂದ ಗ್ರಾಮಸ್ಥರು ಅನುಮಾನಗೊಂಡಿದ್ದರು. ಕೊನೆಗೆ ಆಕೆಯನ್ನು ವಿಚಾರಿಸಿದ ವೇಳೆ ಅಸಲಿ ಸತ್ಯ ಬಾಯಿಬಿಟ್ಟಿದ್ದಾಳೆ.
ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೂರು ದಾಖಲಿಸಿಕೊಂಡ ಕೂಡಲೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.