News Karnataka Kannada
Sunday, May 19 2024
ಮಧ್ಯ ಪ್ರದೇಶ

ಬೂತ್​ನಲ್ಲಿ ಲಕ್ಕಿ ಡ್ರಾ : ಮತ ಚಲಾಯಿಸಿದ ಮತದಾರನಿಗೆ ಸಿಕ್ತು ವಜ್ರದ ಉಂಗುರ

ಭೋಪಾಲ್​ನ ಪ್ರತಿ ಬೂತ್​ನಲ್ಲಿ ಲಕ್ಕಿ ಡ್ರಾ ನಡೆಸಲಾಗಿದೆ. ಅದರಲ್ಲಿ ಅದೃಷ್ಟಶಾಲಿ ಮತದಾರರಿಗೆ ಉಡುಗೊರೆ ಸಿಗಲಿದೆ ಎಂದು ಘೋಷಣೆ ಮಾಡಲಾಗಿತ್ತು. ಹೀಗೇ ಮತದಾರರನ್ನು ಕಡ್ಡಾಯವಾಗಿ ಮತ ಚಲಾಯಿಸಲು ಬರುವಂತೆ ಓಲೈಸಲಾಗಿತ್ತು. ಅದರಂತೆ ಲಕ್ಕಿ ಡ್ರಾದಲ್ಲಿ ಓರ್ವ ಮತದಾರನಿಗೆ ವಜ್ರದ ಉಂಗುರ ಸಿಕ್ಕಿದೆ.
Photo Credit : NewsKarnataka

ಭೋಪಾಲ್:  ಭೋಪಾಲ್​ನ ಪ್ರತಿ ಬೂತ್​ನಲ್ಲಿ ಲಕ್ಕಿ ಡ್ರಾ ನಡೆಸಲಾಗಿದೆ. ಅದರಲ್ಲಿ ಅದೃಷ್ಟಶಾಲಿ ಮತದಾರರಿಗೆ ಉಡುಗೊರೆ ಸಿಗಲಿದೆ ಎಂದು ಘೋಷಣೆ ಮಾಡಲಾಗಿತ್ತು. ಹೀಗೇ ಮತದಾರರನ್ನು ಕಡ್ಡಾಯವಾಗಿ ಮತ ಚಲಾಯಿಸಲು ಬರುವಂತೆ ಓಲೈಸಲಾಗಿತ್ತು. ಅದರಂತೆ ಲಕ್ಕಿ ಡ್ರಾದಲ್ಲಿ ಓರ್ವ ಮತದಾರನಿಗೆ ವಜ್ರದ ಉಂಗುರ ಸಿಕ್ಕಿದೆ.

ಸಹಾಯಕ ನೋಡಲ್​ ಅಧಿಕಾರಿ ರಿತೇಶ್​ ಶರ್ಮಾ ಮಾತನಾಡಿ, ಕಳೆದ ಎರಡು ವರ್ಷದಲ್ಲಿ ಮತದಾನ ಮಾಡುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಹೀಗಾಗಿ ಮತದಾನದ ಶೇಕಡಾವಾರು ಗಮನದಲ್ಲಿಟ್ಟುಕೊಂಡು ಭೋಪಾಲ್​ ಆಡಳಿತವು ಮತದಾರರನ್ನು ಮತ ಚಲಾಯಿಸುವಂತೆ ಓಲೈಸಿದೆ. ಕೊನೆಗೆ ಮತದಾರರನ್ನು ಉತ್ತೇಜಿಸುವ ಅಲುವಾಗಿ ಲಕ್ಕಿ ಡ್ರಾ ಇಡಲಾಗಿದೆ ಎಂದು ಹೇಳಿದ್ದಾರೆ.

ಬಳಿಕ ಮಾತನಾಡಿದ ಅವರು, ಮೂವರು ಮತದಾರರಿಗೆ ಲಕ್ಕಿ ಡ್ರಾ ಬಹುಮಾನ ದೊರೆತಿದೆ. ಅದರಲ್ಲಿ ಮತಗಟ್ಟೆ 211ರಲ್ಲಿ ಮತದಾರನೊಬ್ಬನಿಗೆ ವಜ್ರದ ಉಂಗುರ ಸಿಕ್ಕಿದೆ. 2 ಸಾವಿರಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಮೂರು ಲಕ್ಕಿ ಡ್ರಾ ನಡೆಸಲಾಗಿದೆ. ಇದಲ್ಲಿ ವಿಜೇತರೊಗೆ ರೆಫ್ರಿಜರೇಟರ್​, ಟಿವಿ, ಉಂಗುರವನ್ನು ಬಹುಮಾನವಾಗಿ ನೀಡಲಾಗಿದೆ ಎಂದು ರಿತೇಶ್​ ಶರ್ಮಾ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು