News Karnataka Kannada
Sunday, May 05 2024
ಮಂಗಳೂರು

ಬೆಳ್ತಂಗಡಿ: ಕಲ್ಮಂಜದ ದೇವರಗುಡ್ಡ ಶ್ರೀ ಗುರುದೇವ ಮಠದಲ್ಲಿ ನಡೆಯಲಿದೆ ಶ್ರೀ ಚಾತುರ್ಮಾಸ್ಯ ವ್ರತ

Belthangady: Sri Chaturmasya Vrata to be held for 48 days at Devaragudda Sri Gurudeva Mutt in Kalmanja
Photo Credit : By Author
ಬೆಳ್ತಂಗಡಿ: ಕನ್ಯಾಡಿಯ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮೂರನೇ ಚಾತುರ್ಮಾಸ್ಯ ವ್ರತ ಇಂದಿನಿಂದ ಆ.29ರ ತನಕ 48 ದಿನ ಕಲ್ಮಂಜದ ದೇವರಗುಡ್ಡ ಶ್ರೀ ಗುರುದೇವ ಮಠದಲ್ಲಿ ನಡೆಯಲಿದೆ ಎಂದು ಶಾಸಕ ಹಾಗೂ ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ಹರೀಶ್ ಪೂಂಜ ತಿಳಿಸಿದರು.
ಅವರು ಜು.12ರಂದು ಬೆಳ್ತಂಗಡಿಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯ ಮಂತ್ರಿ, ಶಾಸಕರ ಸಹಿತ ರಾಜ್ಯದ ಮಂತ್ರಿಗಳು, ಶಾಸಕರು ಹಾಗೂ ಅನೇಕ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ತಾಲೂಕಿನ 81 ಗ್ರಾಮಗಳ ಗ್ರಾಮಸ್ಥರು, ಕರ್ನಾಟಕದ ನಾನಾ ಜಿಲ್ಲೆಗಳ ಗುರುಗಳ ಶಿಷ್ಯ ವೃಂದ ಹಾಗೂ ಭಕ್ತರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಲಿದ್ದಾರೆ. ಚಾತುರ್ಮಾಸ್ಯ ಕಾರ್ಯಕ್ರಮದ ಪೂರ್ವಭಾವಿ ವ್ಯವಸ್ಥೆಗಳು ಪೂರ್ಣಗೊಂಡಿದ್ದು ಸುಮಾರು 75 ಲಕ್ಷ ರೂ.ವೆಚ್ಚದಲ್ಲಿ ಶಾಶ್ವತ ಸಭಾಗೃಹ,ಪಾಕ ಶಾಲೆ ಇತ್ಯಾದಿ ನಿರ್ಮಿಸಲಾಗಿದೆ.
ಜು.13 ರಂದು ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಭಾಗವಹಿಸಲಿದ್ದಾರೆ. 48 ದಿನ ಭಜನೆ ಕಾರ್ಯಕ್ರಮವನ್ನು ತಾಲೂಕಿನ ಎಲ್ಲ ಗ್ರಾಮಗಳ ಭಜನೆ ತಂಡಗಳು ನಡೆಸಿಕೊಡಲಿವೆ. ಶನಿವಾರ,ಭಾನುವಾರಗಳಂದು ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರತಿ ಸೋಮವಾರದಂದು ವಿಶೇಷ ಯಜ್ಞ, ಯಾಗಾದಿಗಳು ಹಾಗೂ ಪ್ರತಿದಿನ ಅನ್ನದಾನ ಸೇವೆ ನಡೆಯಲಿದೆ ಎಂದು ಹೇಳಿದರು.
ಚಾತುರ್ಮಾಸ್ಯ ಸಮಿತಿ ಪ್ರಧಾನ ಸಂಚಾಲಕ ಜಯಂತ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನಾವೂರು, ಸಂಚಾಲಕ ಸೀತಾರಾಮ ಬೆಳಾಲು ಉಪಸ್ಥಿತರಿದ್ದರು.

ಹೊರೆ ಕಾಣಿಕೆ
ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಹೊರೆ ಕಾಣಿಕೆ ಸಮರ್ಪಣೆಗೊಳ್ಳಲಿದೆ. ಸುಳ್ಯದಿಂದ ಸಚಿವ ಅಂಗಾರ ಅವರ ನೇತೃತ್ವದಲ್ಲಿ 15 ಕ್ವಿಂ.ಅಕ್ಕಿ, ಪುತ್ತೂರಿನಿಂದ ಶಾಸಕ ಸಂಜೀವ ಮಠಂದೂರ್ ಅವರ ನೇತೃತ್ವದಲ್ಲಿ 5 ಕ್ವಿಂ.ಸಕ್ಕರೆ, ಬಂಟ್ವಾಳದಿಂದ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ 25 ಡಬ್ಬಿ ಎಣ್ಣೆ, ಮಂಗಳೂರು ದಕ್ಷಿಣದಿಂದ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ದಿನಸಿ ಸಾಮಗ್ರಿ, ಮಂಗಳೂರು ಉತ್ತರದಿಂದ ಶಾಸಕ ಭರತ್ ಶೆಟ್ಟಿ ನೇತೃತ್ವದಲ್ಲಿ 10 ಕ್ವಿಂ. ಅಕ್ಕಿ, ಮೂಡುಬಿದ್ರೆಯ ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ 3 ಕ್ವಿಂ. ಮೆಣಸು, ಉಳ್ಳಾಲದಿಂದ ಸತೀಶ್ ಕುಂಪಲ ನೇತೃತ್ವದಲ್ಲಿ 5 ಕ್ವಿಂ. ಬೆಲ್ಲ,ಹಾಗೂ ಬೆಳ್ತಂಗಡಿಯಿಂದ ತೆಂಗಿನಕಾಯಿ ಸಹಿತ ಇತರ ಸಾಮಗ್ರಿಗಳು ಕ್ಷೇತ್ರಕ್ಕೆ ಸಮರ್ಪಣೆಗೊಳ್ಳಲಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು