News Karnataka Kannada
Friday, May 10 2024
ಮಂಗಳೂರು

ಕರ್ನಾಟಕದಲ್ಲಿ ಶಾಂತಿ ಕದಡುವ ಕೆಲಸ ಮಾಡದಿರಿ: ಸಿ ಟಿ ರವಿ

Untitled 2 Recovered
Photo Credit :
ಬಂಟ್ವಾಳ: ಕರ್ನಾಟಕದಲ್ಲಿ  ಅನಗತ್ಯವಾಗಿ ಶಾಂತಿಯನ್ನು ಕದಡುವ ಕೆಲಸ ಮಾಡಲು ಮುಂದಾದರೆ ಯೋಗಿಯವರ ಬುಲ್ಡೋಜರ್ ಮಾಡೆಲ್ ಇಲ್ಲಿಗೂ ತರಲು ನಾವು ಸಿದ್ದರಿದ್ದೇವೆ ಎಂದು  ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಬಂಟ್ವಾಳ ಮಂಡಲದ ‌ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಬಿ.ಸಿ.ರೋಡಿನ‌ ಸ್ಪರ್ಶಾ ಕಲಾಮಂದಿರದಲ್ಲಿ‌ ಶನಿವಾರ ನಡೆದ  “ನಾರಿ ಸಮ್ಮಾನ ದೇಶದ ಅಭಿಮಾನ  ಸಮಾವೇಶ”ದಲ್ಲಿ  ಅವರು ಭಾಗವಹಿಸಿ ಮಾತನಾಡಿದರು.
ಅಧಿಕಾರ ಕಳೆದುಕೊಂಡ ಕೆಲವು ರಾಜಕೀಯ ಪಕ್ಷಗಳು ಅಪಪ್ರಚಾರದ ಮೂಲಕ ದೇಶದಲ್ಲಿ ಅಶಾಂತಿ ಹಬ್ಬಿಲು ಪ್ರಯತ್ನ ಮಾಡುತ್ತಿದ್ದು , ಇದನ್ನು ಹತ್ತಿಕ್ಕಲು ಮೋದಿಯವರ ಸರಕಾರ ಶಕ್ತವಾಗಿದೆ ಎಂದರು. ಮಾತೃ ಶಕ್ತಿಯ ಜಾಗೃತಿಯ ಮೂಲಕ  ದೇಶವನ್ನು ಸುರಕ್ಷಿತವಾಗಿಡುವ ಕೆಲಸ ಮಾಡಬೇಕು ಎಂದ ಅವರು  ಅಂತರಾಷ್ಟ್ರೀಯ ಮಟ್ಟದಲ್ಲಿ ಸಾರ್ವಕಾಲಿಕ ದಾಖಲೆಯನ್ನು ಮೀರಿ ಹೊಸ ದಾಖಲೆ ಸೃಷ್ಟಿ ಮಾಡಿದ ಮೋದಿಯವರ ಯೋಜನೆಗಳು ಪ್ರತಿಯೊಬ್ಬ ವ್ಯಕ್ತಿಗೂ ತಲುಪಿಸುವ ಕೆಲಸ ಮಹಿಳೆಯರು ಮಾಡಬೇಕಾಗಿದೆ ಎಂದರು.
ಹಗರಣಗಳ ಮೂಲಕ ದೇಶ ತಲೆತಗ್ಗಿಸುವ ಮಟ್ಟಕ್ಕೆ ತಲುಪಿದ ಕಷ್ಟಕರವಾದ ಪರಿಸ್ಥಿತಿಯಲ್ಲಿ ದೇಶದ ಪ್ರಧಾನಿಯಾದ ಮೋದಿಯವರು ಕುಟುಂಬ ರಾಜಕಾರಣಕ್ಕೆ ತಿಲಾಂಜಲಿ ನೀಡಿ ಭವ್ಯ ಭಾರತದ ನಿರ್ಮಾಣಕ್ಕೆ ಕಾರಣವಾದರು.ಜಾಗತಿಕವಾಗಿ ಮೋದಿಯವರ ಕಾರಣಕ್ಕೆ ದೇಶದ ಗೌರವ ಹೆಚ್ಚಾಗಿದೆ. ನೂರಾರು ಯೋಜನೆ ಗಳನ್ನು ದೇಶಕ್ಕೆ ನೀಡಿದ ಬಿಜೆಪಿಯನ್ನು ವಿರೋಧಿಗಳು ಕೋಮುವಾದಿ ಬಣ್ಣ ಕಟ್ಟುತ್ತಾರೆ, ಇದು ನ್ಯಾಯನಾ?  ಎಂದು ಅವರು ಪ್ರಶ್ನೆಸಿದರು.
ದೇಶವೇ ಮೊದಲು ಎಂಬ ನೀತಿಯನ್ನು ಅನುಸರಿಸಿದ ಬಿಜೆಪಿಗೆ   ಜಾತಿ, ಭಾಷೆ, ಧರ್ಮ ದ ನೀತಿಯ ಮೂಲಕ ದೇಶವನ್ನು ಒಡೆದುಹಾಕಿದ ರಾಜಕೀಯ ಪಕ್ಷಗಳು ಬುದ್ದಿ ಹೇಳಬೇಕಾದ ಅನಿವಾರ್ಯತೆ ಇಲ್ಲ, ನೈಜ ಪ್ರಜಾಪ್ರಭುತ್ವವನ್ನು ಪ್ರತಿಪಾದಿಸಿದ ಪಾರ್ಟಿ ಬಿಜೆಪಿ. ದೇಶದ ಯಾವುದೇ ಯೋಜನೆಗಳು ಬಡವರ ಕಲ್ಯಾಣಕ್ಕಾಗಿ , ಬಡವರಿಗೆ ಶಕ್ತಿ ತುಂಬುವ , ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ಮಾಡಲಾಗಿದೆ ಎಂದು ಅವರು ಹೇಳಿದರು.
ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಬಂಕರ್ ನೊಳಗೆ ಅವಿತುಕೊಂಡು ಜೀವ ಭಯದಲ್ಲಿದ್ದ ಭಾರತದ ವಿದ್ಯಾರ್ಥಿಗಳ ಜೊತೆ ಭಾರತದ ಧ್ವಜ ಹಿಡಿದು ನಿಂತಕೊಂಡಿದ್ದ  ಪಾಕಿಸ್ತಾನ, ಶ್ರೀಲಂಕಾ ಹೀಗೆ ಇತರ ದೇಶದ ವಿದ್ಯಾರ್ಥಿ ಗಳನ್ನು ಸ್ವದೇಶಕ್ಕೆ  ಸುರಕ್ಷಿತವಾಗಿ ತರಿಸಿದ ಹೆಗ್ಗಳಿಕೆ  ಮೋದಿಯವರದ್ದು, ಅಂತಹ ಮೋದಿಯವರ ಕನಸು ನನಸಾಗಲು ಇನ್ನೊಮ್ಮೆ ಬಿಜೆಪಿಯನ್ನು ಗೆಲ್ಲಿಸುವಂತೆ ಅವರು ಮನವಿ ಮಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಬಂಟ್ವಾಳದಲ್ಲಿ ಮಹಿಳಾ ಶಕ್ತಿ ಗಟ್ಟಿಯಾಗಿದೆ ಎನ್ನುವುದನ್ನು ಈ ದಿನದ ನಾರಿ ಸಮಾವೇಶ ತೋರಿಸಿಕೊಟ್ಟಿದೆ ಎಂದರು. ದೇಶಕ್ಕೆ ಮೋದಿಜಿ ಅನಿವಾರ್ಯ ಎಂಬುದನ್ನು ಮನೆಮನೆಗೆ ತಿಳಿಸುವ ಕಾರ್ಯ ಬಂಟ್ವಾಳದಲ್ಲಿ ನಡೆದಾಗ ಅದರಲ್ಲಿ ಮಹಿಳಾ‌ಶಕ್ತಿ ತುಂಬು ಆಸಕ್ತಿಯಿಂದ‌ ಭಾಗವಹಿಸಿತ್ತು ಎನ್ನುವುದನ್ನು ಸ್ಮರಿಸಿಕೊಂಡರು.
ತ್ರಿವಳಿ ತಲಾಕ್ ರದ್ದು, ಮುದ್ರಾ ಯೋಜನೆ, ಆರ್ಟಿಕಲ್ 370 ಯಂತಹ ಕ್ರಾಂತಿಕಾರಿ ಬದಲಾವಣೆಗಳು ದೇಶವನ್ನು ಹೊಸದಿಕ್ಕಿನತ್ತ ಕೊಂಡೊಯ್ದಿದ್ದಾರೆ ಎಂದ‌ ಅವರು ಇಡೀ ದೇಶದ ನಾರಿಶಕ್ತಿ ಮೋದೀಜಿಯವರ ಜೊತೆಗಿದೆ ಎನ್ನುವುದಕ್ಕೆ ಪಂಚರಾಜ್ಯಗಳ‌ ಚುನಾವಣಾ ಫಲಿತಾಂಶಗಳೇ ಸಾಕ್ಷಿ ಎಂದರು.
ಬಂಟ್ವಾಳ ಮಹಿಳಾ ಮೋರ್ಚಾದ ಅಧ್ಯಕ್ಷೆ ಭಾರತಿ ಚೌಟ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ ಮಾತನಾಡಿ,  ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಅನೇಕ ಸ್ವಾವಲಂಬಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಎಲ್ಲಾ ಯೋಜನೆಗಳನ್ನು  ಜನಸಮುದಾಯಕ್ಕೆ ತಿಳಿಸಿಕೊಡುವ ಕಾರ್ಯ ಮಹಿಳಾ‌ಶಕ್ತಿಯಿಂದ ನಡೆಯಬೇಕು ಎಂದರು.
ಬಂಟ್ವಾಳ ಮಂಡಲ ಬಿಜೆಪಿ ಅಧ್ಯಕ್ಷ. ದೇವಪ್ಪ ಪೂಜಾರಿ,   ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಧನಲಕ್ಣ್ನೀ ಬಂಗೇರ, ಜಿಲ್ಲಾ ಮಹಿಳಾ ಮೋರ್ಚಾದ ಪ್ರಭಾರಿಗಳಾದ, ಕಸ್ತೂರಿ ಪಂಜ,   ಪೂಜಾ ಪೈ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನಾ ಭಟ್, ಪ್ರಮುಖರಾದ ರಾಮದಾಸ್ ಬಂಟ್ವಾಳ, ಕೊರಗಪ್ಪ ನಾಯ್ಕ , ಸುಧೀರ್ ಶೆಟ್ಟಿ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಎಂಟು ಮಂದಿ‌ಸಾಧಕಿಯರನ್ನು ಸನ್ಮಾನಿಸಲಾಯಿತು. ಸೀಮಾ ಮಾಧವ ಸ್ವಾಗತಿಸಿದರು, ಸೌಮ್ಯಲತಾ ಕಾರ್ಯಕ್ರಮ‌ ನಿರೂಪಿಸಿದರು,ಪುಷ್ಪಲತಾ ವಂದಿಸಿದರು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು