News Karnataka Kannada
Tuesday, May 07 2024
ಮಂಗಳೂರು

ಬೆಳ್ತಂಗಡಿ: ಕಾಶಿಬೆಟ್ಟು ಎಂಬಲ್ಲಿ ಮೋರಿ ಸಹಿತ ರಸ್ತೆ ಕುಸಿತ

Belthangady: Road collapses at Kashibettu
Photo Credit : By Author

ಬೆಳ್ತಂಗಡಿ: ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಕಾಶಿಬೆಟ್ಟು ಎಂಬಲ್ಲಿ ಮೋರಿ ಸಹಿತ ರಸ್ತೆ ಕುಸಿತಗೊಂಡಿದೆ. ಈಗಾಗಲೇ ಭಾರೀ ಮಳೆ ಸುರಿಯುತ್ತಿರುವುದರಿಂದ ರಸ್ತೆಯಲ್ಲಿ ವಾಹನ ಸಂಚಾರ ಅಪಾಯಕಾರಿಯಾಗಿದೆ.

ಈ ರಸ್ತೆಯಲ್ಲಿ ಧರ್ಮಸ್ಥಳ ಚಿಕಮಗಳೂರು ಸೇರಿದಂತೆ ಭಾರೀ ವಾಹನಗಳ ಸಂಚಾರ ಇರುವುದಲ್ಲದೇ ಘನ ವಾಹನಗಳ ಸಂಚಾರವೂ ಅಧಿಕವಾಗಿದೆ .

ಮಾಹಿತಿ ತಿಳಿದ ತಕ್ಷಣ  ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾ ಸಲ್ದಾನ, ಉಪಾಧ್ಯಕ್ಷ ಗಣೇಶ್ ಆರ್,ಸದಸ್ಯರುಗಳಾದ ಪ್ರಸಾದ್ ಶೆಟ್ಟಿ ಎಣಿಂಜೆ, ದಿನೇಶ್ ಶೆಟ್ಟಿ,ಹರಿಕೃಷ್ಣ, ಅರವಿಂದ ಕುಮಾರ್, ಕಾರ್ಯದರ್ಶಿ ಯಶೋದರ್ ಶೆಟ್ಟಿ ಸ್ಥಳಕ್ಕೆ  ಆಗಮಿಸಿ   ಮುಂಜಾಗರೂಕತೆಗಾಗಿ ಬ್ಯಾರಿಕೇಡ್ ಅಳವಡಿಸಲು ಕ್ರಮ ಕೈಗೊಂಡಿದ್ದಾರೆ.

ಅದೇ ರೀತಿ ಸಂಬಂಧಪಟ್ಟ ಇಲಾಖೆಯು ಈ ಬಗ್ಗೆ ತಕ್ಷಣ ಕ್ರಮ ವಹಿಸಬೇಕಾಗಿದೆ.ಇಲ್ಲದಿದ್ದಲ್ಲಿ ದೊಡ್ಡ ಅನಾಹುತ ಸಂಭವಿಸುವ ಅಪಾಯವಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು