News Karnataka Kannada
Thursday, May 09 2024
ಮಂಗಳೂರು

ಬೆಳ್ತಂಗಡಿ: ಚರ್ಮಗಂಟು ಹಾಗೂ ಎಲೆಚುಕ್ಕಿ ರೋಗದ ಮಾಹಿತಿ ಸಭೆ

Belthangady: Information meeting on dermatose and leaf spot disease
Photo Credit : By Author

ಬೆಳ್ತಂಗಡಿ: ಚರ್ಮಗಂಟು ಹಾಗೂ ಎಲೆಚುಕ್ಕಿ ರೋಗ ಪೀಡಿತ ಪ್ರದೇಶಗಳ ಕುರಿತ ವಿವರವನ್ನು ಮುಂದಿನ ಒಂದು ವಾರದೊಳಗೆ ಆಯಾ ಗ್ರಾಮ ಪಂಚಾಯಿತಿ ಗಳ ಪಿ.ಡಿ.ಒ.ಗಳು ತಾಪಂ ಇ.ಒ.ಮೂಲಕ ಸಂಬಂಧಪಟ್ಟ ಇಲಾಖೆಗಳಿಗೆ ನೀಡುವಂತೆ ಶಾಸಕ ಹರೀಶ್ ಪೂಂಜ ಸೂಚಿಸಿದರು.

ಅವರು ಗುರುವಾರ ಲಾಯಿಲದ ಸಂಭ್ರಮ ಸಭಾಭವನದಲ್ಲಿ ನಡೆದ ಚರ್ಮಗಂಟು ಹಾಗೂ ಎಲೆಚುಕ್ಕಿ ರೋಗದ ಮಾಹಿತಿ ಸಭೆಯಲ್ಲಿ ಮಾತನಾಡಿದರು.

ಚರ್ಮಗಂಟು ರೋಗ ಕಂಡು ಬರುವ ಕಡೆಗಳಲ್ಲಿ ಪಂಚಾಯಿತಿ ವತಿಯಿಂದ ಫಾಗಿಂಗ್, ಸಹಕಾರ ಇಲಾಖೆ ಪ್ಯಾಕ್ಸ್, ಹಾಲು ಉತ್ಪಾದಕರ ಸಂಘಗಳ ಸಹಕಾರದ ಮೂಲಕ ಲಸಿಕೆ ಕಾರ್ಯಕ್ರಮಗಳನ್ನು ನೆರವೇರಿಸಿ ಕಾಯಿಲೆಯನ್ನು ನಿಯಂತ್ರಣಕ್ಕೆ ತರಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಎಲೆಚುಕ್ಕಿ ರೋಗದ ಮಾಹಿತಿ ಸಂಗ್ರಹಿಸಿ ರೋಗಪೀಡಿತ ತೋಟಗಳನ್ನು ಗುರುತಿಸಿ, ಸಾಮೂಹಿಕವಾಗಿ ಔಷಧಿ ಸಿಂಪಡಣೆ ಮಾಡಬೇಕು. ಅಗತ್ಯವಿದ್ದಲ್ಲಿ ದಾನಿಗಳ ಹಾಗೂ ರೈತರ ಸಹಕಾರದಲ್ಲಿ ಡ್ರೋನ್ ಮೂಲಕ ಔಷಧಿ ಸಿಂಪಡಿಸಲು ವ್ಯವಸ್ಥೆ ಮಾಡಲಾಗುವುದು. ಹಾಗೂ ಈ ಎರಡು ರೋಗಗಳ ಕುರಿತು ಪ್ರತಿ ತಿಂಗಳು ಸಭೆ ನಡೆಸಿ ವರದಿ ಸಂಗ್ರಹಿಸಲಾಗುವುದು ಎಂದರು.

335 ಪ್ರಕರಣ

ತಾಲೂಕು ಪಶುವೈದ್ಯಾಧಿಕಾರಿಆಡಳಿತ) ಡಾ. ಮಂಜಾ ನಾಯ್ಕ್ ,ಮಾತನಾಡಿ ತಾಲೂಕಿನಲ್ಲಿ 335 ಜಾನುವಾರುಗಳಿಗೆ ಚರ್ಮಗಂಟು ರೋಗ ತಗಲಿದ್ದು 4 ಜಾನುವಾರುಗಳು ಮೃತಪಟ್ಟಿವೆ. ಈಗಾಗಲೇ 11,000ಕ್ಕೂ ಮಿಕ್ಕಿ ರೋಗನಿರೋಧಕ ಚುಚ್ಚುಮದ್ದು ನೀಡಲಾಗಿದೆ. ಇತರ ಇಲಾಖೆಗಳ ಸಹಕಾರ ಪಡೆದು ತಾಲೂಕಿನಾದ್ಯಂತ ರೋಗನಿರೋಧಕ ಲಸಿಕೆ ನೀಡುವ ಕಾರ್ಯಕ್ರಮ ನಡೆಯುತ್ತಿದೆ. ಎಂದರು.

130 ಗ್ರಾಮಗಳಲ್ಲಿ ಪ್ರಕರಣ

ಉಭಯ ಜಿಲ್ಲೆಗಳ 130 ಗ್ರಾಮಗಳಲ್ಲಿ ಚರ್ಮಗಂಟು ರೋಗ ಕಂಡುಬಂದಿದ್ದು 650 ರಷ್ಟು ಪ್ರಕರಣಗಳು ವರದಿಯಾಗಿವೆ. ಇದೊಂದು ವೈರಲ್ ಕಾಯಿಲೆಯಾಗಿದ್ದು ಇದಕ್ಕೆ ಸೂಕ್ತ ಔಷಧಿ ಇಲ್ಲ. ಲಸಿಕೆ ಇದಕ್ಕೆ ಉತ್ತಮ ಪರಿಹಾರ. ಹಾಲು ಒಕ್ಕೂಟದಿಂದ ಪಶುಇಲಾಖೆಯ ಸಿಬ್ಬಂದಿಗಳ ಸಹಕಾರಕ್ಕೆ 35 ಡಿಪ್ಲೋಮಾ ಪದವೀಧರರನ್ನು ನೀಡಲಾಗುವುದು. ಒಂದು ವಾರದೊಳಗೆ ಸಮಾರೋಪಾದಿಯಲ್ಲಿ ಲಸಿಕೆ ಕಾರ್ಯಕ್ರಮ ನಡೆಸಲಾಗುವುದು ಎಂದು ಜಿಲ್ಲಾ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಮಧುಸೂಧನ ಕಾಮತ್ ಹೇಳಿದರು.

ಎಲೆಚುಕ್ಕಿ ರೋಗ ವ್ಯಾಪಕ

2019ರಲ್ಲಿ ಮಲವಂತಿಗೆಯ ಎಳನೀರಿನಲ್ಲಿ ಆರಂಭವಾದ ಎಲೆಚುಕ್ಕಿ ರೋಗ ಈಗ ತಾಲೂಕಿನ ನೆರಿಯ ಹಾಗೂ ಚಾರ್ಮಾಡಿ ಗಳಲ್ಲಿ ಹೊರತು ಪಡಿಸಿ ಇತರ ಕಡೆ ಅಲ್ಲಲ್ಲಿ ಕಂಡುಬರುತ್ತಿದೆ.ಒಮ್ಮೆ ಔಷಧಿ ಸಿಂಪಡಿಸಿದರೆ ಅದರ ಪರಿಣಾಮ 35 ದಿನ ಮಾತ್ರ ಇರುತ್ತದೆ. ಇದು ಹೆಚ್ಚಾಗಿ ಪೊಟಾಷ್ ಅಂಶ ಕಡಿಮೆ ಇರುವ, ತೇವಾಂಶ ಅಧಿಕ ಇರುವ ತೋಟಗಳಲ್ಲಿ ಕಂಡು ಬರುತ್ತದೆ.ಉತ್ತಮ ಬಿಸಿಲಿನ ವಾತಾವರಣ ಮೂಡಿದರೆ ರೋಗ ಹರಡುವುದು ಕಡಿಮೆಯಾಗುತ್ತದೆ. ಈಗಾಗಲೇ ತಾಲೂಕಿಗೆ ಔಷಧಿ ಸಿಂಪಡಣೆಗೆ 1.30 ಲಕ್ಷ ರೂ. ಅನುದಾನ ಬಿಡುಗಡೆ ಗೊಂಡಿದೆ.ರೋಗದ ಬಗ್ಗೆ ಗ್ರಾಮ ಮಟ್ಟದಲ್ಲಿ ಮಾಹಿತಿ ಸಭೆಗಳನ್ನು ಏರ್ಪಡಿಸಲಾಗುವುದು . ಇಲಾಖೆ ಸೂಚಿಸಿದ ಔಷಧಿಗಳನ್ನು ಮಾತ್ರ ಸಿಂಪಡಿಸಬೇಕು ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಕೆ. ಎಸ್. ಹೇಳಿದರು.

ತಹಸೀಲ್ದಾರ್ ಪೃಥ್ವಿ ಸಾನಿಕಂ,ತಾಪಂ ಇಒ ಕುಸುಮಾಧರ ಬಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಜಿತ್ ಕುಮಾರ್, ಸಹಕಾರಿ ಇಲಾಖೆಯ ಅಧಿಕಾರಿ ಪ್ರತಿಮಾ,ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಕೆ.ಚಂದ್ರಶೇಖರ ಭಟ್, ಪಶುವೈದ್ಯಾಧಿಕಾರಿ ಡಾ. ರವಿಕುಮಾರ್, ಪಿಡಿಒಗಳು ಉಪಸ್ಥಿತರಿದ್ದರು.ತಾಪಂ ಸಂಯೋಜಕ ಜಯಾನಂದ ಲಾಯಿಲ ಕಾರ್ಯಕ್ರಮ ನಿರೂಪಿಸಿದರು.

ತಕ್ಷಣ ಮಾಹಿತಿ ನೀಡಿ

ಬೆಳ್ತಂಗಡಿ ತಾಲೂಕಿನಲ್ಲಿ 61,000ಜಾನುವಾರುಗಳಿದ್ದು ಇಲ್ಲಿನ ಅನೇಕರು ಹೈನುಗಾರಿಕೆ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಉಭಯ ಜಿಲ್ಲೆಗಳಲ್ಲಿ ಬೆಳ್ತಂಗಡಿ ತಾಲೂಕು ಹಾಲು ಒಕ್ಕೂಟಕ್ಕೆ ಅತ್ಯಧಿಕ ಹಾಲನ್ನು ಪೂರೈಸುತ್ತದೆ. ತಾಲೂಕಿನ ಎಲ್ಲಾ ಇಲಾಖೆಗಳ ಸಹಕಾರದಲ್ಲಿ ರೋಗಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು. ಚರ್ಮ ಗಂಟು ರೋಗದಿಂದ ಕರುಗಳು ಮೃತಪಟ್ಟರೆ 5,000 ರೂ, ಹಸು ಮೃತ ಪಟ್ಟರೆ 20, 000ರೂ. ಉಳುವ ಎತ್ತು ಕೋಣ ಮೃತಪಟ್ಟರೆ 30,000 30,000 ಪರಿಹಾರ ಧನ ಸಿಗುತ್ತದೆ. ಜಾನುವಾರುಗಳು ಮೃತಪಟ್ಟರೆ ತಕ್ಷಣ ಸಂಬಂಧ ಪಟ್ಟ ಇಲಾಖೆಗೆ ಮಾಹಿತಿ ನೀಡಬೇಕು.

-ಹರೀಶ್ ಪೂಂಜ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು